ಗುಂಡ್ಲುಪೇಟೇಲಿ ಬಿಜೆಪಿಗರಿಂದ ತಿರಂಗಾ ಯಾತ್ರೆ

| Published : May 23 2025, 11:59 PM IST

ಗುಂಡ್ಲುಪೇಟೇಲಿ ಬಿಜೆಪಿಗರಿಂದ ತಿರಂಗಾ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ತಿರಂಗಾ ಯಾತ್ರೆಯನ್ನು ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಹಲ್ಗಾಂನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಯೋಧರು ಆಪರೇಷನ್‌ ಸಿಂದೂರ ಹೆಸರಲ್ಲಿ ಉಗ್ರರ ಉಡೀಸ್‌ ಮಾಡಿದಕ್ಕೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ತಿರಂಗಾ ಯಾತ್ರೆ ನಡೆಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಸಾರಥ್ಯದಲ್ಲಿ ನಡೆದ ತಿರಂಗಾ ಯಾತ್ರೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಪಡಗೂರು ಮಠಾಧೀಶರಾದ ಶಿವಲಿಂಗೇಂದ್ರಸ್ವಾಮಿ ಸಾನ್ನಿಧ್ಯದಲ್ಲಿ ತಿರಂಗಾ ಯಾತ್ರೆ ಆರಂಭವಾಗಿ ಪಟ್ಟಣದ ಮೈಸೂರು, ಊಟಿ ರಸ್ತೆ , ಚಾಮರಾಜನಗರ ರಸ್ತೆಯ ಯೋಧ ಶಿವಾನಂದ ವೃತ್ತದ ತನಕ ನೂರಡಿ ಯುದ್ದದ ತಿರಂಗ ಧ್ವಜದೊಂದಿಗೆ ಮೆರವಣಿಗೆ ನಡೆಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಮಾತನಾಡಿ, ಪಾಕಿಸ್ತಾನಿ ಉಗ್ರರನ್ನು ಸೆದೆಬಡಿದ ಭಾರತೀಯ ಯೋಧರನ್ನು ಕೊಂಡಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರ ಕೂಡ ಉಗ್ರರ ದಮನಕ್ಕೆ ಪೂರಕವಾಗಿತ್ತು ಎಂದರು.

ಭಾರತೀಯ ಸೈನಿಕರ ಬೆಂಬಲವಾಗಿ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದ್ದು ಯಾತ್ರೆಯಲ್ಲಿ ಭಾಗವಹಿಸಿ ಶ್ರೀಗಳು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಯಾತ್ರೆಯಲ್ಲಿ ಆರಂಭದಲ್ಲಿ ಮೂಡುಗೂರು, ಕಬ್ಬಹಳ್ಳಿ, ದೇಪಾಪುರ ಶ್ರೀಗಳು ಇದ್ದರು. ಯಾತ್ರೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್‌, ಮಾಜಿ ಅಧ್ಯಕ್ಷ ಎಲ್.ಸುರೇಶ್‌, ಎನ್.ಮಲ್ಲೇಶ್‌, ತಾಪಂ ಮಾಜಿ ಸದಸ್ಯ ಮಹದೇವಶೆಟ್ಟಿ, ಚಾಮುಲ್‌ ಮಾಜಿ ನಿರ್ದೇಶಕ ಕನ್ನೇಗಾಲ ಸ್ವಾಮಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಎಂ.ಪ್ರಣಯ್‌, ಗ್ರಾಪಂ ಸದಸ್ಯ ಕಲ್ಲಹಳ್ಳಿ ಮಹೇಶ್‌, ಮುಖಂಡರಾದ ಛತ್ರಿ ಮಂಜುನಾಥ್‌, ನಮೋ ಮಂಜು, ಶಿಂಡನಪುರ ಮಂಜು, ಮಂಗಳಮ್ಮ ಸೇರಿದಂತೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳ ಮುಖಂಡರು ಇದ್ದರು.ತರಂಗಾ ಯಾತ್ರೆ ಮೂಲಕ ಸೈನಿಕರಿಗೆ ಬೆಂಬಲತಿರಂಗಾ ಯಾತ್ರೆಯ ಮೂಲಕ ಸೈನಿಕರಿಗೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ತಿರಂಗಾ ಯಾತ್ರೆ ನಡೆದಿದೆ ಎಂದು ಪಡಗೂರು ಮಠಾಧೀಶ ಶಿವಲಿಂಗೇಂದ್ರಸ್ವಾಮಿ ಹೇಳಿದರು. ತಿರಂಗಾ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿ, ಭಾರತೀಯ ಸೇನೆ ಪಾಕಿಸ್ತಾನದಲ್ಲಿನ ಉಗ್ರರ ಮೇಲೆ ದಾಳಿ ಮಾಡಿದಾಗ ಜನ, ವಸತಿಗೆ ಹಾನಿಯಾಗದಂತೆ ಅಪರೇಷನ್‌ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ಪ್ರತಿಯೊಬ್ಬರ ಬೆಂಬಲ ಇರಬೇಕು. ಉಗ್ರರ ಮೇಲಿನ ದಾಳಿಯನ್ನು ವಿಶ್ವವೇ ಮೆಚ್ಚಿಕೊಂಡಿದೆ. ಕಾಶ್ಮೀರದಲ್ಲಿ ಯೋಧರು ಕರ್ತವ್ಯ ನೋಡಿದಾಗ ಅವರ ಕಷ್ಟ ಅರಿವಿಗೆ ಬರಲಿದೆ ಎಂದರು.