ರಾಣಿಬೆನ್ನೂರಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತಿರಂಗಾ ಯಾತ್ರೆ

| Published : Aug 14 2025, 01:00 AM IST

ರಾಣಿಬೆನ್ನೂರಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತಿರಂಗಾ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಅಭಾವಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಲಾಷ್ ಬದಾಮಿ ಮಾತನಾಡಿ, ಸ್ವಾತಂತ್ರ್ಯ ನಮಗೆ ದಾನವಾಗಿ ಸಿಕ್ಕಿಲ್ಲ. ಕೋಟ್ಯಂತರ ಬಲಿದಾನ ಪ್ರತೀಕವಾಗಿದೆ ಎಂದರು.

ರಾಣಿಬೆನ್ನೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ಬುಧವಾರ ನಗರದಲ್ಲಿ ತಿರಂಗಾ ಯಾತ್ರೆ ನಡೆಯಿತು.ನಗರದ ಹಳೇ ಪಿ.ಬಿ. ರಸ್ತೆಯ ಖನ್ನೂರು ನರ್ಸಿಂಗ್ ಕಾಲೇಜಿನಿಂದ ಆರಂಭವಾದ ತಿರಂಗಾ ಯಾತ್ರೆಗೆ ಡಾ. ಗಿರೀಶ ಕೆಂಚಪ್ಪನವರ ಚಾಲನೆ ನೀಡಿದರು.ನಂತರ ರಾಜರಾಜೇಶ್ವರಿ ನಗರ, ಕೆಇಬಿ ಗಣೇಶ ದೇವಸ್ಥಾನ, ಬಸ್ ನಿಲ್ದಾಣ, ಕೋರ್ಟ್ ವೃತ್ತ, ಅಂಚೆ ವೃತ್ತದಿಂದ ಮತ್ತೆ ಮೇಡ್ಲೇರಿ ಕ್ರಾಸ್‌ನಿಂದ ರಾಜರಾಜೇಶ್ವರಿ ಕಾಲೇಜಿನ ಮೈದಾನಕ್ಕೆ ಬಂದು ತಲುಪಿತು.ಅಭಾವಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಲಾಷ್ ಬದಾಮಿ ಮಾತನಾಡಿ, ಸ್ವಾತಂತ್ರ್ಯ ನಮಗೆ ದಾನವಾಗಿ ಸಿಕ್ಕಿಲ್ಲ. ಕೋಟ್ಯಂತರ ಬಲಿದಾನ ಪ್ರತೀಕವಾಗಿದೆ. ಅನೇಕ ಮಹನೀಯರ ತ್ಯಾಗ, ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಯುವಪೀಳಿಗೆ ಅದನ್ನು ಅರಿತುಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಬೆಳೆದು ಸಮಸಮಾಜ ನಿರ್ಮಾಣಕ್ಕೆ ನಾಂದಿ ಹಾಕಬೇಕು ಎಂದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತ ಹಳ್ಳೂರ ಮಾತನಾಡಿ, ಸ್ವಾತಂತ್ರ್ಯ ನಮ್ಮ ಹೃದಯದಲ್ಲಿ ಇರಬೇಕು. ದೇಶಭಕ್ತಿ ನಮ್ಮ ರಕ್ತದಲ್ಲಿ ಇರಬೇಕು. ಆಗ ಮಾತ್ರ ಸ್ವಾತಂತ್ರ್ಯಕ್ಕೆ ಒಂದು ಅರ್ಥ ಬರುತ್ತದೆ. ಈ ತಿರಂಗಾ ಕಾರ್ಯಕ್ರಮಗಳಿಂದ ಯುವಜನತೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಎಬಿವಿಪಿ ನಿರಂತರವಾಗಿ ಮಾಡಲಾಗುತ್ತಿದೆ ಎಂದರು.ಡಾ. ರತ್ನ ಪ್ರಭಾ ಕೆಂಚ್ಚಪ್ಪನವರ, ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಕಮ್ಮಾರ, ಮಂಜುನಾಥ, ನಗರ ಕಾರ್ಯದರ್ಶಿ ಪವನ್ ಕುಮಾರ್ ಇಟಗಿ, ಸಹ ಕಾರ್ಯದರ್ಶಿ ಎಲ್ಲಮ್ಮ, ದರ್ಶನ್, ಸುಶ್ಮಿತಾ, ನವೀನ್, ಬಸವರಾಜ್ ಪುನೀತ್ ಹಾಗೂ ಅನೇಕ ವಿದ್ಯಾರ್ಥಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್ ಪ್ರಶಸ್ತಿ ಪ್ರದಾನ ಇಂದು

ಹಾವೇರಿ: ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್ ವತಿಯಿಂದ ಆ. 14ರಂದು ಸಂಜೆ 4 ಗಂಟೆಗೆ ರಜನಿ ಕಲ್ಯಾಣ ಮಂಟಪದಲ್ಲಿ ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾರ್ಯಕ್ರಮದ ಸಾನ್ನಿಧ್ಯವನ್ನು ಸದಾಶಿವ ಸ್ವಾಮಿಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಪಾಲ್ಗೊಳ್ಳುವರು. ಡಾ. ಗೀತಾ ಸೀತಾರಾಮ್ ಅವರ ಮಾಳ್ವ ಸಾಮ್ರಾಜ್ಯದ ರಾಜಯೋಗಿನಿ ಅಹಲ್ಯಾಬಾಯಿ ಹೋಳ್ಕರ ಎಂಬ ಕಾದಂಬರಿಗೆ ಅಕ್ಕ ಪ್ರಶಸ್ತಿ, ಶರೀಫ ಮಾಕಪ್ಪನವರ ಅವರ ಜನಪದ ಕಲಾವಿದರು ಸುಧಾರಿಸಿಕೊಳ್ಳಬಹುದಾದ ಮಾರ್ಗೋಪಾಯಗಳು ಎಂಬ ವಿಮರ್ಶೆಗೆ ಜಾನಪದ ಸಿರಿ ಪ್ರಶಸ್ತಿ, ನವ್ಯಾ ಕತ್ತಿ ಅವರ ಮಾಯಾಗುಹೆ ಮತ್ತು ಇತರ ಮಕ್ಕಳ ಕಥೆಗಳು ಎಂಬ ಸಣ್ಣ ಕತೆಗೆ ಅರಳು ಮೊಗ್ಗು ಎಂಬ ಪ್ರಶಸ್ತಿ ಪದಾನ ನಡೆಯಲಿದೆ ಎಂದು ತಿಳಿಸಿದ್ದಾರೆ.