ಸಾರಾಂಶ
ಹಾವೇರಿ: ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನ ಸೇನಾ ನೆಲೆಗಳನ್ನು ಹುಡುಕಿ ಹೊಡೆದ ಭಾರತೀಯ ಸೇನೆಯ ವೀರಯೋಧರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾವು ಹಾಗೂ ನಾಗರಿಕರು ವೇದಿಕೆ ಅಡಿಯಲ್ಲಿ ಮೇ 23ರಂದು ಬೆಳಗ್ಗೆ 10.30ಕ್ಕೆ ಬೃಹತ್ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರಜೆಗಳನ್ನು ಪಾಕಿಸ್ತಾನ ಉಗ್ರರು ಹತ್ಯೆಗೈದಿದ್ದರು. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಮೂರು ಸೇನೆಯ ಮುಖ್ಯಸ್ಥರು ಒಟ್ಟಿಗೆ ನಡೆಸಿದ ಅಪರೇಷನ್ ಸಿಂದೂರ ಹೆಸರಿನ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಒಂಬತ್ತು ಉಗ್ರರ ಅಡಗುತಾಣಗಳನ್ನು ಮಟ್ಟ ಹಾಕುವಲ್ಲಿ ಹಾಗೂ 11 ವಾಯುನೆಲೆಗಳನ್ನು ಧ್ವಂಸ ಮಾಡುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾದರು. ಈ ಎಲ್ಲ ಸೈನಿಕರಿಗೆ ಗೌರವ ಕೊಡುವ ಉದ್ದೇಶಕ್ಕಾಗಿ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಮೇ 23ರಂದು ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಂಡಿದೆ.
ಅಂದು ಬೆಳಗ್ಗೆ 10.30ಕ್ಕೆ ಪುರಸಿದ್ದೇಶ್ವರ ದೇವಸ್ಥಾನದಿಂದ ಮೈಲಾರ ಮಹದೇವಪ್ಪ ವೃತ್ತದವರೆಗೆ ಯಾತ್ರೆ ನಡೆಯಲಿದ್ದು, ನಗರದ ನಾಗರಿಕರು, ದೇಶಭಕ್ತರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಕ್ಷಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಮಾತನಾಡಿ, ಪಹಲ್ಗಾಮ್ ಘಟನೆ ಬಳಿಕ ಭಾರತೀಯ ಸೇನೆಯು 45 ಪಾಕಿಸ್ತಾನ ಕ್ಷಿಪಣಿ, 500ಕ್ಕೂ ಅಧಿಕ ಡ್ರೋನ್‌ಗಳನ್ನು ಧ್ವಂಸ ಮಾಡಿದೆ. ಆಪರೇಷನ್ ಸಿಂದೂರ ಯಶಸ್ವಿಗೆ ಮೂರು ಸೇನೆಯ ನಾಯಕರು ನಿರಂತರ ಶ್ರಮ ವಹಿಸಿದ್ದಾರೆ. ಜಗತ್ತಿಗೆ ಭಾರತದ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ದೇಶಕ್ಕೋಸ್ಕರ ಅಭಿಮಾನ ಗೌರವ ನೀಡುವ ಉದ್ದೇಶದಿಂದ ಯಾತ್ರೆ ನಡೆಯಲಿದ್ದು, ಎಲ್ಲ ದೇಶಭಕ್ತರು ಆಗಮಿಸಿ ಸಹಕಾರ ನೀಡಬೇಕು ಎಂದರು.ಮಾಜಿ ಶಾಸಕ ಶಿವರಾಜ ಸಜ್ಜನರ, ನಗರಸಭೆ ಸದಸ್ಯ ಗಿರೀಶ ತುಪ್ಪದ, ಸಂತೋಷ ಅಲದಕಟ್ಟಿ, ಕಿರಣ ಕೋಣನವರ, ಅಭಿಷೇಕ ಉಪ್ಪಿನ, ಮೃತ್ಯುಂಜಯ ಮುಷ್ಠಿ ಇತರರು ಉಪಸ್ಥಿತರಿದ್ದರು.ಗ್ಯಾಂಗ್ ರೇಪ್ ಕೇಸ್: 7 ಆರೋಪಿಗಳಿಗೆ ಜಾಮೀನುಹಾವೇರಿ: ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಪ್ರಮುಖ ಆರೋಪಿಗಳಿಗೆ ಮಂಗಳವಾರ ಹಾವೇರಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್(ಎಫ್‌ಟಿಎಸ್‌ಸಿ-1) ನ್ಯಾಯಾಲಯವು ಜಾಮೀನು ನೀಡಿದೆ.ಆರೋಪಿಗಳಾದ ಅಫ್ತಾಬ್ ಚಂದನಕಟ್, ಮದರಸಾಬ್ ಮಂಡಕ್ಕಿ, ಸಮಿಯುಲ್ಲಾ ಲಾಲನವರ್, ಮೊಹಮ್ಮದ್‌ಸಾದಿಕ್ ಅಗಸಿಮನಿ, ಸೋಹಿಬ್ ಮುಲ್ಲಾ, ತೌಸಿಫ್ ಚೋಟಿ ಹಾಗೂ ರಿಯಾಜ್ ಸವಿಕರ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಆರೋಪಿಗಳನ್ನು ಬಂಧಿಸಲಾಗಿತ್ತು. ಕಳೆದ 10 ತಿಂಗಳ ಹಿಂದೆ 12 ಆರೋಪಿಗಳು ಜಾಮೀನು ಪಡೆದು ಹಾವೇರಿ ಸಬ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಸಂತ್ರಸ್ತೆ ತನ್ನ ಹಿಂದಿನ ಹೇಳಿಕೆಗಳನ್ನು ಉಳಿಸಿಕೊಳ್ಳಲು ಹಿಂಜರಿದ ಕಾರಣ ನ್ಯಾಯಾಲಯವು ಉಳಿದ 7 ಆರೋಪಿಗಳಿಗೆ ಜಾಮೀನು ನೀಡಿದೆ.