ಸಾರಾಂಶ
ನಗರಸಭೆ ವ್ಯಾಪ್ತಿಯಲ್ಲಿರುವ ಬಸ್ತೀಪುರ ವಾರ್ಡ್‌ಗೆ ಸೇರುವ ನಂಜನಯ್ಯನಕಟ್ಟೆಯಲ್ಲಿ ಕಳೆದ 3 ದಶಕಗಳಿಂದಲೂ ತೀರಾ ಹಿಂದುಳಿದ ಕುಟುಂಬದವರು ವಾಸವಿದ್ದು ಅವರಿಗೆ ಹಕ್ಕುಪತ್ರ ವಿತರಿಸುವಲ್ಲಿ ಸರ್ಕಾರ ಮಂದಾಗಬೇಕು, ಆ ಮೂಲಕ ಅವರ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸದನದಲ್ಲಿ ಸರ್ಕಾರದ ಗಮನ ಸೆಳೆದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರಸಭೆ ವ್ಯಾಪ್ತಿಯಲ್ಲಿರುವ ಬಸ್ತೀಪುರ ವಾರ್ಡ್‌ಗೆ ಸೇರುವ ನಂಜನಯ್ಯನಕಟ್ಟೆಯಲ್ಲಿ ಕಳೆದ 3 ದಶಕಗಳಿಂದಲೂ ತೀರಾ ಹಿಂದುಳಿದ ಕುಟುಂಬದವರು ವಾಸವಿದ್ದು ಅವರಿಗೆ ಹಕ್ಕುಪತ್ರ ವಿತರಿಸುವಲ್ಲಿ ಸರ್ಕಾರ ಮಂದಾಗಬೇಕು, ಆ ಮೂಲಕ ಅವರ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸದನದಲ್ಲಿ ಸರ್ಕಾರದ ಗಮನ ಸೆಳೆದರು.ನಂಜಯ್ಯನ ಕಟ್ಟೆಯಲ್ಲಿ ಕಳೆದ 3 ದಶಕಗಳಿಂದಲೂ ಹಿಂದುಳಿದ ಸಮಾಜದ 75ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದು ಅವರ ರಕ್ಷಣೆ, ಅನಕೂಲ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಬೇಕು, ಈ ಸಂಬಂಧ ಆ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಶಾಸಕರು ಸಭೆಯಲ್ಲಿ ಸುದೀರ್ಘವಾಗಿ ವಿಚಾರ ಪ್ರಸ್ತಾಪಿಸಿದರು.ಈ ಸಂಬಂಧ ಕಂದಾಯ ಸಚಿವರ ಪರವಾಗಿ ಸದನದಲ್ಲಿ ಉಪ ಮುಖ್ಯಮಂತ್ರಿ ಉತ್ತರ ನೀಡಿದ್ದು ಈಸಂಬಂಧ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ವಾರ್ಡ್ ಸದಸ್ಯರಿಂದ ಶಾಸಕರಿಗೆ ಅಭಿನಂದನೆ:ಈ ಭಾಗದ ನಗರಸಭೆ ಸದಸ್ಯನಾಗಿ ಈ ವಿಚಾರವನ್ನು ಶಾಸಕ ಕೃಷ್ಣಮೂರ್ತಿ ಗಮನಕ್ಕೆ ತಂದು ಅಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದೆ. ಅದರಂತೆ ಶಾಸಕರು ಸದನದಲ್ಲಿ ನಂಜಯ್ಯನಕಟ್ಟೆ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಸಂಬಂಧಪಟ್ಟ ಸಚಿವರಿಂದಲೂ ಹಕ್ಕುಪತ್ರಕ್ಕೆ ಕ್ರಮ ಜರುಗಿಸುವ ಭರವಸೆ ದೊರೆತಿದೆ. ಈ ಭಾಗದ ಹಿಂದುಳಿದ ವರ್ಗಗಳ ಬವಣೆ ಕುರಿತು ಸದನದಲ್ಲಿ ಚರ್ಚಿಸಿದ ಶಾಸಕರಿಗೆ ಈ ಭಾಗದ ನಿವಾಸಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು ಹೇಳಿದ್ದಾರೆ.