ಟಿಎಂಸಿ ಬ್ಯಾಂಕ್‌ ಡಿಜಿಟಲೀಕರಣಕ್ಕೆ ಆದ್ಯತೆ: ಕೆ.ಪಿ.ವಾಸುದೇವ್

| Published : Jul 15 2025, 01:08 AM IST

ಟಿಎಂಸಿ ಬ್ಯಾಂಕ್‌ ಡಿಜಿಟಲೀಕರಣಕ್ಕೆ ಆದ್ಯತೆ: ಕೆ.ಪಿ.ವಾಸುದೇವ್
Share this Article
  • FB
  • TW
  • Linkdin
  • Email

ಸಾರಾಂಶ

ಮಾರ್ಚ್ 2025ರ ಪ್ರಗತಿಯಂತೆ ಶೇರು ಮೊತ್ತ ₹60.81 ಲಕ್ಷ, ಠೇವಣಿ ಮೊತ್ತ ₹13.79 ಕೋಟಿ ದಾಟಿದ್ದು, ₹4.64 ಕೋಟಿ ಸಾಲ ವಸೂಲಾತಿಯಾಗಿದೆ. ಅನುತ್ಪಾದಕ ಆಸ್ತಿಗಳು ಈಗ ಶೇ.0.83ಕ್ಕೆ ಇಳಿಕೆಯಾಗಿದ್ದು, ಆಡಿಟ್ ವರದಿಯಲ್ಲಿ ಎ ಶ್ರೇಣಿ ಪಡೆದಿದೆ. ಶೇ.99.9 ಸಾಲ ವಸೂಲಾಗುತ್ತಿದೆ. ಸದಸ್ಯರಿಗೆ ಈ ಬಾರಿಯೂ ಶೇ.10 ಡಿವಿಡೆಂಡ್ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಇಲ್ಲಿನ ಗಾಂಧಿ ನಗರದಲ್ಲಿರುವ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಟರ್‌ ಕೋ ಆಪರೇಟಿವ್ ಬ್ಯಾಂಕ್ ಲಿ.,ನ 61ನೇ ವಾರ್ಷಿಕ ಹಾಗೂ 2024- 25ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ನಗರದ ಕಾವೇರಿ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಅಧ್ಯಕ್ಷ ಕೆ.ಪಿ.ವಾಸುದೇವ್ ಮಾತನಾಡಿ, ಟಿಎಂಸಿ ಬ್ಯಾಂಕ್ ಮಾರ್ಚ್ 2025ರ ಅಂತ್ಯಕ್ಕೆ ₹37.14 ಲಕ್ಷ ನಿವ್ವಳ ಲಾಭ ಗಳಿಸಿದೆ. ಟಿಎಂಸಿ ಬ್ಯಾಂಕ್ 61 ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಬ್ಯಾಂಕ್‌ನಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ನೀಡಲಾಗುತ್ತಿದೆ. ಬೆಳ್ಳಿ, ಚಿನ್ನದ ಸಾಲ, ವಾಹನಗಳ ಮೇಲಿನ ಸಾಲ ನೀಡಲಾಗುತ್ತಿದೆ. ಬ್ಯಾಂಕ್‌ನ ಡಿಜಿಟಲೀಕರಣ ಮಾಡಲು ಒತ್ತು ನೀಡಲಾಗುತ್ತಿದ್ದು, ಯುಪಿಐ ಪಾವತಿ, ಕೋರ್ ಬ್ಯಾಂಕಿಂಗ್ ಮೊದಲಾದ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಶೇ.10 ಲಾಭಾಂಶ ಹಂಚಿಕೆ:

ಮಾರ್ಚ್ 2025ರ ಪ್ರಗತಿಯಂತೆ ಶೇರು ಮೊತ್ತ ₹60.81 ಲಕ್ಷ, ಠೇವಣಿ ಮೊತ್ತ ₹13.79 ಕೋಟಿ ದಾಟಿದ್ದು, ₹4.64 ಕೋಟಿ ಸಾಲ ವಸೂಲಾತಿಯಾಗಿದೆ. ಅನುತ್ಪಾದಕ ಆಸ್ತಿಗಳು ಈಗ ಶೇ.0.83ಕ್ಕೆ ಇಳಿಕೆಯಾಗಿದ್ದು, ಆಡಿಟ್ ವರದಿಯಲ್ಲಿ ಎ ಶ್ರೇಣಿ ಪಡೆದಿದೆ. ಶೇ.99.9 ಸಾಲ ವಸೂಲಾಗುತ್ತಿದೆ. ಸದಸ್ಯರಿಗೆ ಈ ಬಾರಿಯೂ ಶೇ.10 ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಹೇಳಿದರು.

ಸಹಕಾರ ಸಂಘಗಳ ನಿಯಮದಂತೆ ಸದಸ್ಯರು ಮತದಾನದ ಹಕ್ಕು ಪಡೆಯಬೇಕಾದರೆ, ಬ್ಯಾಂಕಿನಲ್ಲಿ ಕನಿಷ್ಠ ₹2500 ಠೇವಣಿ ಅಥವಾ ₹500 ಆರ್.ಡಿ ಖಾತೆ ಅಥವಾ ಉಳಿತಾಯ ಖಾತೆಯಲ್ಲಿ 12 ವ್ಯವಹಾರಗಳು ಮತ್ತು ಸರ್ವ ಸದಸ್ಯರ 5 ಸಭೆಗಳಲ್ಲಿ 2ಕ್ಕೆ ಕಡ್ಡಾಯ ಭಾಗವಹಿಸುವಿಕೆ ನಿಯಮವನ್ನು ಸದಸ್ಯರು ಪಾಲಿಸಬೇಕು. ಸದಸ್ಯರು ಹೆಚ್ಚಿನ ಹಣವನ್ನು ಬ್ಯಾಂಕ್‌ನ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬ್ಯಾಂಕ್ ಮತ್ತಷ್ಟು ಏಳಿಗೆಯಾಗುವಂತೆ ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಕೆ.ಪಿ. ವಾಸುದೇವ್ ಉಪಾಧ್ಯಕ್ಷ ಡಿ.ಪ್ರಶಾಂತ್ ಕುಮಾರ್, ನಿರ್ದೇಶಕರಾದ ಪಿ.ಸಿ.ವೆಂಕಟೇಶ್, ಜಿ.ಮಂಜುನಾಥ್, ಎ.ಆರ್. ಶಿವಕುಮಾರ್, ಕೆ.ಜಿ. ಗೋಪಾಲ್, ಬಿ.ಆರ್.ಉಮಾಕಾಂತ್, ನಾರಾಯಣ್.ಎನ್.ನಾಯ್ಡು, ಅನಿಲ್.ಎಸ್., ಎ.ಗಿರಿಜಾ, ಡಾ.ಆರ್. ಇಂದಿರಾ, ವೃತ್ತಿಪರ ನಿರ್ದೇಶಕರಾದ ಎ.ಆರ್.ನಾಗರಾಜನ್, ಕೆ.ಎಂ. ಕೃಷ್ಣಮೂರ್ತಿ, ಪ್ರಭಾರಿ ವ್ಯವಸ್ಥಾಪಕರಾದ ಎ.ಎಸ್.ಪುಷ್ಪಲತಾ ಹಾಜರಿದ್ದರು.