To arrange more buses: Karaway appeal
ವಡಗೇರಾ: ತಾಲೂಕು ಕೇಂದ್ರದಿಂದ ಹೈದ್ರಾಬಾದ್ ಸೇರಿದಂತೆ ಇನ್ನಿತರ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಕರವೇ (ಪ್ರವೀಣ್ ಶೆಟ್ಟಿ ಬಣ)ದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಶರಣು ಇಟಗಿ ನೇತೃತ್ವದಲ್ಲಿ ಯಾದಗಿರಿ ವಿಭಾಗೀಯ ಸಾರಿಗೆ ನಿಯಂತ್ರಣಧಿಕಾರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಾಧ್ಯಕ್ಷ ಶರಣು ಇಟಗಿ ಮಾತನಾಡಿ, ವಡಗೇರಾ ತಾಲೂಕು ಕೇಂದ್ರವಾಗಿ ಹತ್ತು ವರ್ಷ ಕಳೆದರೂ ಬಸ್ ವ್ಯವಸ್ಥೆ ಇಲ್ಲದೆ, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಡಗೇರಾ-ಹೈದರಾಬಾದ್, ವಡಗೇರಾ-ಸೈದಾಪುರ್ ಹಾಗೂ ಇನ್ನಿತರ ಅಂತರ್ ಜಿಲ್ಲೆಗಳಿಗೆ ಬಸ್ ಆರಂಭಿಸಬೇಕು. ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಬೊಜ್ಜಿ, ಯಾದಗಿರಿ ಜಿಲ್ಲಾ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಗಿರೀಶ್ ಯಡ್ಡಳ್ಳಿ, ರಮೇಶ್ ಹುಂಡೇಕಲ್ ಎಚ್ಚರಿಸಿದ್ದಾರೆ.
----6ವೈಡಿಆರ್5: ವಡಗೇರಾ ಭಾಗಕ್ಕೆ ಹೆಚ್ಚಿನ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರವೇ ವತಿಯಿಂದ ಯಾದಗಿರಿ ವಿಭಾಗೀಯ ಸಾರಿಗೆ ನಿಯಂತ್ರಣಧಿಕಾರಿಗೆ ಮನವಿ ಸಲ್ಲಿಸಲಾಯಿತು.