ಜ್ಞಾನವಂತರಾಗಲು ಪುಸ್ತಕಗಳನ್ನು ಓದಬೇಕು: ಬೆಳಗುಂದಿ

| Published : Aug 22 2024, 12:48 AM IST

ಜ್ಞಾನವಂತರಾಗಲು ಪುಸ್ತಕಗಳನ್ನು ಓದಬೇಕು: ಬೆಳಗುಂದಿ
Share this Article
  • FB
  • TW
  • Linkdin
  • Email

ಸಾರಾಂಶ

To become knowledgeable one should read books: Belagundi

ಕನ್ನಡಪ್ರಭ ವಾರ್ತೆ ಗುರುಮಠಕಲ್

ಹೆಚ್ಚು ಪುಸ್ತಕಗಳನ್ನು ಓದಬೇಕು. ಇದು ನಮ್ಮನ್ನು ಜ್ಞಾನವಂತರನ್ನಾಗಿ ಮಾಡುವುದು ಅಲ್ಲದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಹೇಳಿದರು.

ಸಮೀಪದ ಸೈದಾಪುರ ಪಟ್ಟಣದ ವಿದ್ಯಾವರ್ಧಕ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರೌಢಶಾಲಾ ಹಿರಿಯ ಶಿಕ್ಷಕ ಗೂಳಪ್ಪ ಎಸ್. ಮಲ್ಹಾರ ವಿಶೇಷ ಉಪನ್ಯಾಸ ನೀಡಿ, ಜೀನವನದಲ್ಲಿ ಕೆಲ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು. ದೇಶ ಕಾಯುವ ಯೋಧರನ್ನು ಹಾಗೂ ಅನ್ನ ನೀಡುವ ರೈತರನ್ನು ಗೌರವಿಸಬೇಕು. ಕಷ್ಟ ಪಟ್ಟು ಓದದೆ ಇಷ್ಟ ಪಟ್ಟು ಓದಬೇಕು. ಪ್ರಯತ್ನಕ್ಕೆ ಮಿಗಿಲಾದದ್ದು, ಯಾವುದು ಇಲ್ಲ. ಹಿಂದೆ ಮಾಡಿದವರ ಮೀರಿದ ಸಾಧನೆ ನಿಮ್ಮದಾಗಬೇಕು ಎಂದರು.

ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ ಸೇರಿದಂತೆ ಉಪನ್ಯಾಸಕರು ಇದ್ದರು.

ಸರಸ್ವತಿ, ಕಲ್ಯಾಣಿ ಪ್ರಾರ್ಥಾನಾಗೀತೆ ಹಾಡಿದರು. ಸಾದಿಯಾ ಸ್ವಾಗತಿಸಿದರು. ಪೂಜಾ ಮತ್ತು ಸ್ವಪ್ನ ನಿರೂಪಿಸಿದರು. ಮಲ್ಲಮ್ಮ ವಂದಿಸಿದರು.

-----

ಫೋಟೊ: 20ವೈಡಿಆರ್3:

ಗುರುಮಠಕಲ್ ಸಮೀಪದ ಸೈದಾಪುರ ವಿದ್ಯಾವರ್ಧಕ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಪ್ಪಗೌಡ ಬೆಳಗುಂದಿ ಸೇರಿದಂತೆ ಇತರರು ಚಾಲನೆ ನೀಡಿದರು.