ಸಾರಾಂಶ
ಸಿಡಿಬಿ ಯೋಜನೆಯಡಿ ತೆಂಗಿನ ಸಂಯೋಜಿತ ಬೇಸಾಯ ಕಾರ್ಯಕ್ರಮದಡಿ ತೆಂಗು ಬೆಳೆಗಾರರಿಗೆ ವಿವಿಧ ಪರಿಕರಣಗಳ ವಿತರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರೈತರು ಹೆಚ್ಚು ತೆಂಗು ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಿಡಿಬಿ ಯೋಜನೆ ಯಡಿ ತೆಂಗಿನ ಸಂಯೋಜಿತ ಬೇಸಾಯ ಕಾರ್ಯಕ್ರಮದಡಿ ತೆಂಗು ಬೆಳೆಗಾರರಿಗೆ ವಿವಿಧ ಪರಿಕರಣಗಳನ್ನು ವಿತರಿಸಿ ಮಾತನಾಡಿದರು.ಸರ್ಕಾರ ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ 17,500 ರು. ಗಳ ಕೃಷಿ ಪರಿಕರಗಳನ್ನು ನೀಡು ತ್ತಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 35 ಲಕ್ಷ ಅನುದಾನ ನೀಡಿದ್ದು, ತೆಂಗು ಬೆಳೆಗಾರರಿಗೆ ವಿವಿಧ ಪರಿಕರಗಳನ್ನು ವಿತರಿಸ ಲಾಗಿದೆ. ತೆಂಗು ಬೆಳೆ ಶೂನ್ಯ ತ್ಯಾಜ್ಯ ಬೆಳೆಯಾಗಿದ್ದು, ತೆಂಗಿನಿಂದ ವಿವಿಧ ರೀತಿಯ ವಸ್ತುಗಳನ್ನು ತಯಾರಿಸಬಹುದು ಎಂದ ಅವರು, ತೆಂಗು ಬೆಳೆಗೆ ಸಂಬಂಧಿಸಿದ ರೋಗಗಳ ಕುರಿತು ನುರಿತ ತಜ್ಞರಿಂದ ಬೆಳೆಗಾರರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ಬಳಸಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ನೀಡಲಾಗುವ ವಿವಿಧ ಸೌಲಭ್ಯಗಳನ್ನು ಬಳಸಿಹೆಚ್ಚು ಬೆಳೆ ಬೆಳೆದು ಆದಾಯ ಗಳಿಸುವಂತೆ ತಿಳಿಸಿದರು.ಇತರೆ ಬೆಳೆಗಳಿಗೆ ಹೋಲಿಕೆ ಮಾಡಿದರೆ ತೆಂಗು ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿಯಾಗಿದೆ. ಚಿಕ್ಕ ಮಗಳೂರು ಹಾಗೂ ಕಡೂರು ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತೆಂಗು ಬೆಳೆಯುತ್ತಿದ್ದಾರೆ. ಇಲಾಖೆಯ ಸಲಹೆಯಂತೆ ತೆಂಗು ಬೆಳೆದರೆ ಯಾವುದೇ ರೀತಿಯಲ್ಲೂ ನಷ್ಟವಾಗುವುದಿಲ್ಲ ಎಂದು ಹೇಳಿದರು.ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿ, ಚಿಕ್ಕಮಗಳೂರು ತಾಲೂಕಿನಲ್ಲಿ ಒಟ್ಟು 3 ಸಾವಿರ ಎಕ್ಟೇರ್‌ನಷ್ಟು ತೆಂಗು ಬೆಳೆಯಲಾಗಿದೆ. ತೆಂಗು ಬೆಳೆ ಇಳುವರಿ ಹೆಚ್ಚಳಕ್ಕಾಗಿ ಸಾವಯವ ಗೊಬ್ಬರ, ಜೈವಿಕ ಗೊಬ್ಬರ, ಕೀಟನಾಶಕಗಳು ಸೇರಿದಂತೆ ವಿವಿಧ ಪರಿಕರಗಳನ್ನು ನೀಡಿ ತೆಂಗು ಬೆಳೆಗಾರರನ್ನು ಪ್ರೋತ್ಸಾಹಿಸ ಲಾಗುತ್ತಿದೆಯಲ್ಲದೆ ತೆಂಗಿನ ಉತ್ತಮ ನಿರ್ವಹಣೆಗೆ ಅರಿವು ಮೂಡಿಸಲಾಗುತ್ತಿದ್ದು, ರೈತರು ಇದರ ಸದುಪಯೋಗಪಡಿಸಿ ಕೊಳ್ಳಬೇಕೆಂದರು.ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 9 ಕೆಸಿಕೆಎಂ 3ಚಿಕ್ಕಮಗಳೂರಿನ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಮಂಗಳವಾರ ತೆಂಗು ಬೆಳೆಗಾರರಿಗೆ ವಿವಿಧ ಪರಿಕರಣ ವಿತರಿಸಿದರು. ಹಿರಿಯ ಸಹಾಯಕ ನಿರ್ದೇಶಕಿ ನೇತ್ರಾವತಿ ಹಾಗೂ ರೈತರು ಇದ್ದರು.
;Resize=(128,128))
;Resize=(128,128))
;Resize=(128,128))