ಸಚಿವೆ ಹೆಬ್ಬಾಳಕರ್ ನಿವಾಸಕ್ಕೆಮರಾಠಾ ಸಮಾಜದ ಸ್ವಾಮೀಜಿ ಭೇಟಿ

| Published : Sep 13 2024, 01:40 AM IST

ಸಚಿವೆ ಹೆಬ್ಬಾಳಕರ್ ನಿವಾಸಕ್ಕೆಮರಾಠಾ ಸಮಾಜದ ಸ್ವಾಮೀಜಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಗವೀಪುರಂ ಗೋಸಾಯಿ ಸಂಸ್ಥಾನ ಶ್ರೀ ಭವಾನಿ ದತ್ತ ಪೀಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿಯವರು ಗುರುವಾರ ಸೌಹಾರ್ದಯುತ ಭೇಟಿ ನೀಡಿದರು.

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಅವರ ಬೆಳಗಾವಿಯ ನಿವಾಸಕ್ಕೆ ಕರ್ನಾಟಕ ರಾಜ್ಯದ ಮರಾಠಾ ಸಮಾಜದ ಜಗದ್ಗುರು, ಗವೀಪುರಂ ಗೋಸಾಯಿ ಸಂಸ್ಥಾನ ಶ್ರೀ ಭವಾನಿ ದತ್ತ ಪೀಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿಯವರು ಗುರುವಾರ ಸೌಹಾರ್ದಯುತ ಭೇಟಿ ನೀಡಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ವಾಮೀಜಿಯವರನ್ನು ಸ್ವಾಗತಿಸಿ, ಗೌರವಿಸಿದರು. ಮರಾಠಾ ಸಮಾಜದ ಸ್ಥಿತಿಗತಿ, ಮರಾಠಾ ಸಂಸ್ಕೃತಿ, ಮರಾಠ ಸಮುದಾಯಕ್ಕೆ ಶೈಕ್ಷಣಿಕ ಸೌಲಭ್ಯ ಸೇರಿದಂತೆ ಹಲವಾರು ವಿಷಯಗಳನ್ನು ಸ್ವಾಮೀಜಿಗಳು ಈ ಸಂದರ್ಭದಲ್ಲಿ ಚರ್ಚಿಸಿದರು. ಅಲ್ಲದೆ ಮರಾಠ ಧರ್ಮದ ಕುರಿತು ಜಾಗೃತಿ ಮೂಡಿಸಲು, ಸಾಮಾಜಿಕ ಜಾಗೃತಿಗಾಗಿ ತಾವು ಕೈಗೊಂಡಿರುವ ಕೆಲಸಗಳ ಕುರಿತು ಮತ್ತು ಮುಂದೆ ಆಗಬೇಕಿರುವ ಕೆಲಸಗಳ ಕುರಿತು ಸ್ವಾಮೀಜಿಗಳು ಮಾಹಿತಿ ನೀಡಿದರು. ಈ ವೇಳೆ ಬಾಳು ದೇಸೂರಕರ್, ಉಮೇಶ ಪಾಟೀಲ, ಯುವರಾಜ ಕದಂ, ಸಾತೇರಿ ಕೋಕಿತ್ಕರ್, ಪ್ರಹ್ಲಾದ ಚಿರಮುರಕರ್ ಮೊದಲಾದವರು ಇದ್ದರು.