ಬೀರೂರುಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಗಟ್ಟಿಯಾಗಿದೆ ಎನ್ನುವುದಕ್ಕೆ ನಿಖಿಲ್ ಕುಮಾರ ಸ್ವಾಮಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜೆಡಿಎಸ್ ಕಾರ್ಯಕರ್ತರೇ ಸಾಕ್ಷಿ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಚೇತನ್ ಕೆಂಪರಾಜ್ ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಚೇತನ್ ಕೆಂಪರಾಜ್
ಕನ್ನಡಪ್ರಭ ವಾರ್ತೆ. ಬೀರೂರುಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಗಟ್ಟಿಯಾಗಿದೆ ಎನ್ನುವುದಕ್ಕೆ ನಿಖಿಲ್ ಕುಮಾರ ಸ್ವಾಮಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜೆಡಿಎಸ್ ಕಾರ್ಯಕರ್ತರೇ ಸಾಕ್ಷಿ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಚೇತನ್ ಕೆಂಪರಾಜ್ ಹೇಳಿದರು.
ಪಟ್ಟಣದ ಜೆ.ಡಿಎಸ್ ಕಚೇರಿಯಲ್ಲಿ ಬೀರೂರಿನ ಹೋಬಳಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಾಜಿ ಪ್ರದಾನಿ ದೇವೆಗೌಡರು ಕಟ್ಟಿದ ಪ್ರಾದೇಶಿಕ ಜಾತ್ಯಾತೀತ ಜನತಾದಳ ಪಕ್ಷ ರಾಜ್ಯದಲ್ಲಿ ದೇವೆಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಬಡವರ ಪರವಾಗಿ ನೀಡಿದ ಯೋಜನೆಗಳ ಫಲವಾಗಿ ರಾಜ್ಯದಲ್ಲಿ ಸದೃಢವಾಗಿದೆ. ಯುವಕರು ನಿಖಿಲ್ ಕುಮಾರಸ್ವಾಮಿಯಂತವರ ಮಾರ್ಗದರ್ಶನಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮತ್ತಷ್ಟು ಪ್ರಬಲಗೊಳಿಸಿ 2028ಕ್ಕೆ ಮತ್ತೊಮ್ಮೆ ಕುಮಾರಸ್ವಾಮಿ ಎನ್ನುವ ಘೋಷಣೆ ಮೂಲಕ ಚುನಾವಣೆ ಎದುರಿಸಿ ರಾಜ್ಯದಲ್ಲಿ ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡಲು ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.ಜೆ.ಡಿಎಸ್ ಪಕ್ಷದ ಹೇಮಂತ್ ಕುಮಾರ್ ಮಾತನಾಡಿ ಮಾಜಿ ಪ್ರಧಾನಿ ದೇವೆಗೌಡರು ಸಿಕ್ಕ ಅವಕಾಶಗಳಲ್ಲಿ ರಾಜ್ಯಕ್ಕೆ ಮತ್ತು ದೇಶಕ್ಕೆ ಬೇಕಾದಷ್ಟು ನೀರಾವರಿ ಯೋಜನೆ ಜಾರಿಗೊಳಿಸಿರುವುದನ್ನು ರಾಜ್ಯದ ಜನತೆ ಮರೆಯಲಾರರು. ಕುಮಾರಸ್ವಾಮಿ ಅನೇಕ ಯೋಜನೆ ರೂಪಿಸಿದ ಪರಿಣಾಮ ರಾಜ್ಯ ಮತ್ತು ಕಡೂರಿನಲ್ಲಿ ಜೆಡಿಎಸ್ ಪಕ್ಷ ಜೀವಂತ ವಾಗಿದೆ. ತಮಿಳುನಾಡಿನಲ್ಲಿ ಹೇಗೆ ವಿಜಯ್ ರನ್ನು ಆಯ್ಕೆ ಮಾಡಿದ್ದಾರೆಯೋ ಅದೇ ರೀತಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ನಾವೆಲ್ಲ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಿ ಕುಮಾರಣ್ಣನವರನ್ನು ನೋಡೋಣ ಎಂದರು.
ಈ ಸಂದರ್ಭದಲ್ಲಿ ಅಯ್ಯೂಬ್ ಅಹಮದ್, ರವಿಕುಮಾರ್, ಮನುಚಂದನ್, ದಸ್ತಗರ‍್ಮುಜುಶಾವು ಸೇರದಿಂತೆ ಮತ್ತಿತರ ಜೆಡಿಎಸ್ ಲಕ್ಷದ ಕಾರ್ಯಕರ್ತರು ಇದ್ದರು.23ಬೀರೂರು2
ಬೀರೂರಿನ ಜೆಡಿಎಸ್ ಕಚೇರಿಯಲ್ಲಿ ನೂತನವಾಗಿ ಕಡೂರು ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆಯಾದ ಚೇತನ್ ಕೆಂಪರಾಜ್ ರನ್ನು ಬೀರೂರಿನ ಜೆಡಿಎಸ್ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.