ಇಂದು ಡಾ.ಪಿ.ವೈ.ರಾಜೇಂದ್ರಕುಮಾರಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ

| Published : Aug 07 2024, 01:04 AM IST

ಇಂದು ಡಾ.ಪಿ.ವೈ.ರಾಜೇಂದ್ರಕುಮಾರಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ರಾಷ್ಟ್ರೀಯ ಗ್ರಂಥಾಲಯದ ಮಾಜಿ ಮಹಾನಿರ್ದೇಶಕರು ಮತ್ತು ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕರಾದ ಡಾ.ಪಿ.ವೈ.ರಾಜೇಂದ್ರಕುಮಾರ್ ಅವರು "ಕರ್ನಾಟಕ ಗ್ರಾಮ ಪಂಚಾಯತ್ ಗ್ರಂಥಾಲಯಗಳನ್ನು ಗ್ರಾಮೀಣ ಜ್ಞಾನ ಸಮುಚ್ಚಯಗಳಾಗಿ ರೂಪಾತರಗೊಳಿಸುವ ಒಂದು ಪರಿಶೋಧನಾತ್ಮಕ ಅಧ್ಯಯನ " (Metamorphosis of Karnataka Gram Panchayat Libraries into Rural Knowledge Complexes: An Exploratory Study) ಎಂಬ ವಿಷಯದ ಮೇಲೆ ಕನ್ನಡ ಭಾಷೆಯಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಸೈನ್ಸ್ (ಡಿ.ಎಸ್ಸಿ) ಪದವಿ ಘೋಷಣೆ ಮಾಡಿದೆ.

ಬೆಂಗಳೂರು: ಭಾರತದ ರಾಷ್ಟ್ರೀಯ ಗ್ರಂಥಾಲಯದ ಮಾಜಿ ಮಹಾನಿರ್ದೇಶಕರು ಮತ್ತು ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕರಾದ ಡಾ.ಪಿ.ವೈ.ರಾಜೇಂದ್ರಕುಮಾರ್ ಅವರು "ಕರ್ನಾಟಕ ಗ್ರಾಮ ಪಂಚಾಯತ್ ಗ್ರಂಥಾಲಯಗಳನ್ನು ಗ್ರಾಮೀಣ ಜ್ಞಾನ ಸಮುಚ್ಚಯಗಳಾಗಿ ರೂಪಾತರಗೊಳಿಸುವ ಒಂದು ಪರಿಶೋಧನಾತ್ಮಕ ಅಧ್ಯಯನ " (Metamorphosis of Karnataka Gram Panchayat Libraries into Rural Knowledge Complexes: An Exploratory Study) ಎಂಬ ವಿಷಯದ ಮೇಲೆ ಕನ್ನಡ ಭಾಷೆಯಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಸೈನ್ಸ್ (ಡಿ.ಎಸ್ಸಿ) ಪದವಿ ಘೋಷಣೆ ಮಾಡಿದೆ.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿನ ವಿಶ್ವವಿದ್ಯಾಲಯಗಳಿಂದ ನೀಡಲ್ಪಟ್ಟ ಮೊದಲ ಡಾಕ್ಟರ್ ಆಫ್ ಸೈನ್ಸ್ ( ಡಿ.ಎಸ್ಸಿ) ಪದವಿ ಇದಾಗಿದ್ದು, ಹಾಗೆಯೇ 75ರ ವಯಸ್ಸಿನಲ್ಲಿ ಪದವಿ ಪಡೆದಿರುವುದು ವಿಶೇಷ. ಆ.07 ರಂದು ತುಮಕೂರಿನಲ್ಲಿ ನಡೆಯಲಿರುವ ತುಮಕೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪದವಿಯನ್ನು ಪ್ರದಾನ ಮಾಡಲಾಗುವುದು.