ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವ ಸುಧಾಕರ್ ಅವರು ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದ್ದು, ಅತಿಥಿ ಉಪನ್ಯಾಸಕ ಬೇಡಿಕೆ ಸೇವಾ ಭದ್ರತೆ ಅಥವಾ ಸೇವಕಾಯಮಾತಿಯನ್ನು ಬಿಟ್ಟು, ಸರ್ಕಾರ ಇಡಿ ಗಂಟು, ಪುಡಿಗೆಂಟು ಎಂದು ನಮ್ಮ ಹೋರಾಟದ ದಿಕ್ಕು ತಪ್ಪಿಸುವಲು ಅತಿಥಿ ಉಪನ್ಯಾಸಕರ ಕಣ್ಣು ಒರೆಸುವ ತಂತ್ರ ಮಾಡುತ್ತಿರುವುದು ಖಂಡಿಸಿ ಜ1 ರಂದು ಬೆಳಗ್ಗೆ 10.30 ಕ್ಕೆ ಸಿದ್ಧಗಂಗಾ ಮಠದಿಂದ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಆರಂವಾಗಲಿದ್ದೆ ಎಂದು ಜಿಲ್ಲಾಧ್ಯಕ್ಷ ಡಾ. ಧರ್ಮವೀರ ಕೆ.ಎಚ್. ತಿಳಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಎದುರು 39 ನೇ ದಿನವೂ ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿ ಮುಂದುವರೆದಿದ್ದು ಇಂದಿನ ಪ್ರತಿಭಟನೆಯಲ್ಲಿ ಎಚ್.ಡಿ ಕೋಟೆಯ ಉಪನ್ಯಾಸಕ ಹಠಾತ್ತಾಗಿ ಮೃತಪಟ್ಟಿದ್ದು, ಮೃತರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿ, ಶ್ರದ್ಧಾಂಜಲಿ ಸಲ್ಲಿಸಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ರಾಜ್ಯ ಸರ್ಕಾರ ನಮ್ಮ ಒಂದೇ ಒಂದು ಬೇಡಿಕೆಯಾದ ಸೇವಕಾಯಮಾತಿಯನ್ನು ಬಿಟ್ಟು ನಮಗೆ ಹಿಡಿಗಂಟು, ವೇತನ ಹೆಚ್ಚಳ, ಆರೋಗ್ಯ ವಿಮೆ ಎಂದು ನಮ್ಮ ಹೋರಾಟದ ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಕುತಂತ್ರವನ್ನು ಖಂಡಿಸಿ, ನಮ್ಮ ಸೇವಕಾಯತಿ ಆಗುವವರೆಗೂ ತಮ್ಮ ಪ್ರತಿಭಟನೆಯನ್ನು ಬಿಡುವುದಿಲ್ಲ ಎಂದು ಎಚ್ಚರಿಸುತ್ತಾ ಈಗಾಗಲೇ ಪೂರ್ವ ನಿರ್ಧಾರವಾಗಿದ್ದಂತೆ ಸಿದ್ಧಗಂಗಾ ಮಠದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರೆಗೆ ಪಾದಯಾತ್ರೆಯನ್ನು ಜನವರಿ ಒಂದನೇ ತಾರೀಕು ರಾಜ್ಯಾದ್ಯಂತ ಎಲ್ಲಾ ಅತಿಥಿ ಉಪನ್ಯಾಸಕರು ಇಲ್ಲಿ ಸಮಾವೇಶಗೊಂಡು ಇಲ್ಲಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ ನಂತರ ಆಮರಣ ಉಪವಾಸ ಸತ್ಯಾಗ್ರಹವನ್ನು ಆಚರಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಯ ಮತ್ತು ರಾಜ್ಯಾಧ್ಯಕ್ಷರಾದ ಹನುಮಂತಗೌಡ ಕಲ್ಮನಿಯವರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.ಜ.1 ರಂದ್ದು ಬೆಳ್ಳಗೆ 10.30 ಕ್ಕೆ ಸಿದ್ಧಗಂಗಾ ಮಠದ ಮಠಾಧ್ಯಕ್ಷ ಸಿದ್ದಲಿಂಗೇಶ್ವರ ಸ್ವಾಮೀಜಿ ಅವರು ನಮ್ಮ ಪಾದಯಾತ್ರೆಗೆ ಚಾಲನೆ ನೀಡಲಿದ್ದು, ವಿವಿಧ ಸಂಘಟನೆಗಳ ಹೋರಾಟಗಾರರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಜೊತೆಗೆ, ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಿಂದ ಸುಮಾರು 3 ಸಾವಿರ ಅತಿಥಿ ಉಪನ್ಯಾಸಕರು ಬರುವ ನಿರೀಕ್ಷೆಯಿದ್ದು. ಬಸ್ಸು, ಟ್ರೈನ್, ಹಾಗೂ ವಿವಿಧ ವಾಹನಗಳ ಮೂಲಕ ಸಿದ್ಧಗಂಗಾ ಮಠಕ್ಕೆ ಬಂದು ಸೇರಲಿದ್ದಾರೆ. ಇಲ್ಲಿಂದ ನಮ್ಮ ಪಾದಯಾತ್ರೆ ದಾಬಸ್‌ಪೇಟೆಯಲ್ಲಿ ಒಂದನೇ ತಾರೀಕು ರಾತ್ರಿ ತಂಗಿ, ನಂತರ ಎರಡನೇ ತಾರೀಕು ನೆಲಮಂಗಲದ ಶ್ರೀ ಸಿದ್ಧಗಂಗಾ ಪದವಿ ಕಾಲೇಜಿನಲ್ಲಿ ವಾಸ್ತವ್ಯ ಹೂಡಿ ನಂತರ ಮೂರನೇ ತಾರೀಕು ಬೆಂಗಳೂರು ನಗರವನ್ನು ಪ್ರವೇಶಿಸಿ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಮಾಡಿ ಜ.4 ರಂದು ಬೆಂಗಳೂರಿನಲ್ಲಿ ಬೃಹತ್ತಾದ ಸಮಾವೇಶವನ್ನು ನಡೆಯಲ್ಲಿದೆ ಎಂದು ಜಿಲ್ಲಾಧ್ಯಕ್ಷ ಡಾ.ಧರ್ಮವೀರ ತಿಳಿಸಿದ್ದಾರೆ.