ಇಂದು ವ್ಯಸನ ಮುಕ್ತ ದಿನ; ಮಹಾಂತ ಮಂದಾರ ಪ್ರಶಸ್ತಿ ಪ್ರದಾನ

| Published : Aug 03 2024, 12:30 AM IST

ಸಾರಾಂಶ

ಶರಣ ಸಂಸ್ಕೃತಿಯ ಹರಿಕಾರ, ಮಹಾಂತ ಜೋಳಿಗೆಯ ಶಿವಶಿಲ್ಪಿಗಳಾದ ಇಳಕಲ್ಲಿನ ಲಿಂ.ಮಹಾಂತಪ್ಪಗಳವರ ಜಯಂತಿ ಮಹೋತ್ಸವ ನಿಮಿತ್ತ ವ್ಯಸನ ಮುಕ್ತ ದಿನಾಚರಣೆ ಮತ್ತು ಮಹಾಂತ ಮಂದಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ತಾಲೂಕಿನ ವಿಮೋಚನ ಶಿಕ್ಷಣ ಸಂಘವು ಆ.3 ರಂದು ಬೆಳಗ್ಗೆ 10.30 ಗಂಟೆಗೆ ಮಲಾಬಾದನ ವಿಮೋಚನಾ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ವಿಮೋಚನಾ ಸಂಸ್ಥೆಯ ಅಧ್ಯಕ್ಷ, ಹಿರಿಯ ನ್ಯಾಯವಾದಿ ಬಿ.ಎಲ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಶರಣ ಸಂಸ್ಕೃತಿಯ ಹರಿಕಾರ, ಮಹಾಂತ ಜೋಳಿಗೆಯ ಶಿವಶಿಲ್ಪಿಗಳಾದ ಇಳಕಲ್ಲಿನ ಲಿಂ.ಮಹಾಂತಪ್ಪಗಳವರ ಜಯಂತಿ ಮಹೋತ್ಸವ ನಿಮಿತ್ತ ವ್ಯಸನ ಮುಕ್ತ ದಿನಾಚರಣೆ ಮತ್ತು ಮಹಾಂತ ಮಂದಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ತಾಲೂಕಿನ ವಿಮೋಚನ ಶಿಕ್ಷಣ ಸಂಘವು ಆ.3 ರಂದು ಬೆಳಗ್ಗೆ 10.30 ಗಂಟೆಗೆ ಮಲಾಬಾದನ ವಿಮೋಚನಾ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ವಿಮೋಚನಾ ಸಂಸ್ಥೆಯ ಅಧ್ಯಕ್ಷ, ಹಿರಿಯ ನ್ಯಾಯವಾದಿ ಬಿ.ಎಲ್.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಳಕಲ್ಲಿನ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಜರುಗುವ ಸಮಾರಂಭದ ಅಧ್ಯಕ್ಷತೆಯನ್ನು ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಾಗಲಕೋಟೆಯ ತೋಟಗಾರಿಕಾ ವಿವಿ ಸಂಸ್ಥಾಪಕ ಕುಲಪತಿ ಡಾ.ಎಸ್.ಬಿ.ದಂಡಿನ, ಅತಿಥಿಗಳಾಗಿ ಗೂಗವಾಡದ ಬುದ್ಧವಿಹಾರ ಸಂಸ್ಥಾಪಕ ಉದ್ಯಮಿ ಚಂದ್ರಕಾಂತ ರಾಮಚಂದ್ರ ಸಾಂಗ್ಲಿಕರ, ಬೆಂಗಳೂರಿನ ಖಾಸಗಿ ತಂತ್ರಜ್ಞಾನ ಸಂಸ್ಥೆಯ ಶ್ರೀಪಾದ್ ಹೆಬ್ಬಾರ ಮತ್ತು ಕಲ್ಮೇಶ್ ಹೊನ್ನಪ್ಪನವರ ಸೇರಿದಂತೆ ಪ್ರಶಸ್ತಿ ಪುರಸ್ಕೃತರು ಆಗಮಿಸಲಿದ್ದಾರೆ ಎಂದು ತಿಳಿಸಿದರು.ಇನ್‌ಫೋಬ್ಲಾಕ್ಸ್‌ (INFOBLOX) ಅನುದಾನದಲ್ಲಿ 5 ಕೆವಿ ವಿದ್ಯುತ್‌ ಘಟಕದ ಉದ್ಘಾಟನೆ ಹಾಗೂ ಪುಣೆಯ ವಿಸ್ಟಿಆನ್‌ ಸಂಸ್ಥೆ (VISTEON) ಮತ್ತು ಅಗಸ್ತ್ಯ ಇಂಟರ್‌ನ್ಯಾಷನಲ್‌ ಫೌಂಡೇಶನ್‌ ಸಹಯೋಗದಲ್ಲಿ 23 ಸರ್ಕಾರಿ ಶಾಲೆಗಳಿಗೆ ವೈಜ್ಞಾನಿಕ ಉಪಕರಣಗಳನ್ನು ನೀಡುವ ಜತೆಗೆ 4 ದಿನಗಳ ಕಾಲ ಆಯಾ ಶಾಲೆಯ ವಿಜ್ಞಾನ ಶಿಕ್ಷಕರಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದರು.ಬೆಂಗಳೂರಿನ ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಪ್ರಕಾಶ ರಾಜಗೋಳಿ ಅವರು ರಚಿಸಿದ ಮಜಾ ಮನೆ ಹೆಸರುಗಳು, ಹಾರೂಗೇರಿಯ ವಿದ್ವಾಂಸರಾದ ವಿ.ಎಸ್‌.ಮಾಳಿ ರಚಿತ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಗ್ರಂಥ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಬಾರಿ ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಮತ್ತು ಡಾ.ಅನುಪಮಾ ಹಾಗೂ ಪುಣೆಯ VISTEON ವ್ಯವಸ್ಥಾಪಕ ನಿರ್ದೇಶಕ ಡಾ.ಸಿದ್ಧಾರ್ಥ ಬಂಗಾರ, ಧಾರವಾಡ ಶರಣ ಸಂಸ್ಕೃತಿ ಪ್ರಸಾರಕ ಸಿದ್ಧರಾಮ ನಡಕಟ್ಟಿ ಮತ್ತು ಸವಿತಾ ನಡಕಟ್ಟಿ, ನ್ಯಾಯವಾದಿ ಕಲ್ಲಪ್ಪ ಅಪ್ಪಣ್ಣ ವಣಜೋಳ ಮತ್ತು ರಾಜಶ್ರೀ ವಣಜೋಳ ಹಾಗೂ ಸಮಾಜ ಸೇವಕರಾದ ಧರೆಪ್ಪ ಠಕ್ಕಣ್ಣವರ ಮತ್ತು ಸಾವಿತ್ರಿ ಠಕ್ಕಣ್ಣವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.