ನಗರದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ಪ್ರತ್ಯಂಗೀರಾ ದೇವಿ ದೇವಸ್ಥಾನದ ಉಪಾಸಕರಾದ ಬ್ರಹ್ಮಶ್ರೀ ಡಾ.ಸುಪ್ರೀತ್ ಗುರೂಜಿಯವರ ಜನ್ಮದಿನ ಪ್ರಯುಕ್ತ ಡಿ.16ರಂದು ದೇವಾಲಯದಲ್ಲಿ ಶ್ರೀಗಳ ಗುರುವಂದನಾ ಕಾರ್ಯಕ್ರಮ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಪ್ರತ್ಯಂಗೀರಾ ದೇವಿ ದೇವಾಲಯದ ಪ್ರಧಾನ ಕಾರ್ಯದರ್ಶಿ ವಿ.ಉದೀತ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ಪ್ರತ್ಯಂಗೀರಾ ದೇವಿ ದೇವಸ್ಥಾನದ ಉಪಾಸಕರಾದ ಬ್ರಹ್ಮಶ್ರೀ ಡಾ.ಸುಪ್ರೀತ್ ಗುರೂಜಿಯವರ ಜನ್ಮದಿನ ಪ್ರಯುಕ್ತ ಡಿ.16ರಂದು ದೇವಾಲಯದಲ್ಲಿ ಶ್ರೀಗಳ ಗುರುವಂದನಾ ಕಾರ್ಯಕ್ರಮ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಪ್ರತ್ಯಂಗೀರಾ ದೇವಿ ದೇವಾಲಯದ ಪ್ರಧಾನ ಕಾರ್ಯದರ್ಶಿ ವಿ.ಉದೀತ್ ತಿಳಿಸಿದರು.ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ಗುರೂಜಿಗಳ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಆರಾಧ್ಯದೈವ ಶ್ರೀ ಪ್ರತ್ಯಂಗೀರಾ ದೇವಿ ದೇವಸ್ಥಾನವು ನಾಡಿನ ಅಸಂಖ್ಯಾತ ಭಕ್ತರ ಆಕರ್ಷಣೀಯ ತಾಣವಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಆ ಮೂಲಕ ದೇವಿಯ ಉಪಾಸಕರಾಗಿರುವ ಬ್ರಹ್ಮಶ್ರೀ ಡಾ. ಶ್ರೀ ಸುಪ್ರೀತ್ ಗುರೂಜಿಯವರು ನಾಡಿನ ಮನೆ ಮಾತಾಗಿದ್ದು, ಆವರ ಹುಟ್ಟು ಹಬ್ಬವನ್ನು ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಉದ್ದೇಶಿಸಲಾಗಿದೆ ಎಂದರು.
ಡಿ.16ರಂದು ಬೆಳಗ್ಗೆ 7 ಗಂಟೆಗೆ ಶಿವಮೊಗ್ಗ ನಗರದ ಹೊಳೆ ಬಸ್ಟಾಪ್ ಬಳಿ 5 ಸಾವಿರ ಜನರಿಗೆ ಊಟದ ವ್ಯವಸ್ಥೆಯಿದೆ. 11 ಗಂಟೆಗೆ ದೇವಾಲಯದಲ್ಲಿ ಗುರು ವಂದನಾ ಕಾರ್ಯಕ್ರಮ ಜರುಗಲಿದೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್. ಎನ್. ಚನ್ನಬಸಪ್ಪ, ಶಾರದಾ ಪೂರ್ಯನಾಯ್ಕ್, ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್, ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ಸೇರಿದಂತೆ ಹಲವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಾಗೆಯೇ ಚಿತ್ರರಂಗದ ಹಲವು ತಾರೆಯರು ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಕ್ತರ ಸಮ್ಮುಖದಲ್ಲಿ ಗುರೂಜಿಯವರಿಗೆ ಪಾದಪೂಜೆ ನಡೆಯಲಿದೆ. ದೇವಾಲಯವು ಆರಂಭವಾದ ಬಗ್ಗೆ, ದೇವಾಲಯದ ಟ್ರಸ್ಟ್ ಮೂಲಕ ನಡೆದ ವಿವಿಧ ಸಾಮಾಜಿಕ ಕಾರ್ಯಗಳನ್ನು ತಿಳಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.ವಿಶೇಷವಾಗಿ ಆಶಾ ಜ್ಯೋತಿ ಸ್ವಯಂ ರಕ್ತದಾನ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಮತ್ತು ವಾಸನ್ ಐ ಕೇರ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮಗಳು ದೇವಾಲಯದ ಆವರಣದಲ್ಲಿಯೇ ಆಯೋಜಿಸಲಾಗಿದ್ದು, ದೇವಿಯ ಭಕ್ತರು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು. ಮಧ್ಯಾಹ್ನ ೧ ಗಂಟೆಗೆ ದೇವಾಲಯದ ಆವರಣದಲ್ಲಿಯೇ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮಗಳಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿಂದೆ ಎಂದು ಮಾಹಿತಿ ನೀಡಿದರು.
ಶತ್ರು ಸಂಹಾರಿಣಿ ಶ್ರೀ ಪ್ರತ್ಯಾಂಗೀರಾ ದೇವಿಗೆ ದೇವಾಲಯ ಹೊಂದಿದ ಏಕಮಾತ್ರ ನೆಲೆ ಇದಾಗಿದ್ದು, ಭಕ್ತರು ಇಲ್ಲಿ ದೇವಿಗೆ ಒಣ ಮೆಣಸಿನಕಾಯಿ ಯಾಗ ಸಮರ್ಪಣೆ ಮಾಡುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾ ಬಂದಿದ್ದಾರೆ. ಬ್ರಹಶ್ರೀ ಡಾ. ಶ್ರೀ ಸುಪ್ರೀತ್ ಗುರೂಜಿ ಅವರು ದೇವಾಲಯದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದು, ಇಡೀ ನಾಡಿನಲ್ಲಿ ಇವತ್ತು ದೇವಾಲಯ ಮನೆಮಾತಾಗುವಂತೆ ಮಾಡಿದ್ದಾರೆ. ದೇವಾಲಯ ಟ್ರಸ್ಟ್ ಮೂಲಕ ಗೋಶಾಲೆ ನಡೆಸುತ್ತಿದ್ದು, ತುಂಬಾ ಅಪರೂಪದ ತಳಿಯ ಹಸುಗಳನ್ನು ಇಲ್ಲಿ ಸಾಕಾಲಾಗಿದೆ ಎಂದು ವಿವರಿಸಿದರು.ಗೋಷ್ಠಿಯಲ್ಲಿ ಟ್ರಸ್ಟ್ ನ ಪ್ರಮುಖರಾದ ಸುನೀಲ್, ದೇವರಾಜ್ ಮಂಡೇನಕೊಪ್ಪ ಇದ್ದರು.