ಸಾರಾಂಶ
ಕಾರ್ಕಳ: ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ 53ನೇ ವರ್ಷದ ದಸರಾ ಮಹೋತ್ಸವ, ಶ್ರೀ ದುರ್ಗಾ ಮತ್ತು ಚಂಡಿಕಾ ಹೋಮ ಅ. 2ರಂದು ಆರಂಭಗೊಂಡಿದ್ದು 13 ರ ತನಕ ನಡೆಯಲಿದೆ. ವಿಜಯಕೀರ್ತಿ ಸುಕುಮಾರ್ ಮೋಹನ್ ಅವರ ಪೀಠಾರೋಹಣದ ತೃತೀಯ ವರ್ಷದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅ.3 ರಂದು ನಡೆಯಲಿದೆ. ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಬ್ರಹ್ಮರ್ಷಿ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡುವರು.
24ನೇ ನವರಂಗೋತ್ಸವ, ಪ್ರಶಸ್ತಿ ಪ್ರದಾನ: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ವತಿಯಿಂದ ಬೆಂಗಳೂರು ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ದಸರಾ ಮಹೋತ್ಸವ ಪ್ರಯುಕ್ತ ಅ. 3ರಿಂದ 13ರ ತನಕ ಆದಿಶಕ್ತಿ ದೇವಸ್ಥಾನದಲ್ಲಿರುವ ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ 24ನೇ ವರ್ಷದ ನವರಂಗೋತ್ಸವ ನಡೆಯಲಿದೆ. ಪ್ರತಿ ದಿನವೂ ವಿವಿಧ ನಾಟಕಗಳ ಪ್ರದರ್ಶನ ನಡೆಯಲಿದೆ. ದುಬೈ ಬಿಲ್ಲವಸ್ ಅಧ್ಯಕ್ಷ ಸತೀಶ್ ಪೂಜಾರಿ, ಸಂಘಟಕ ಕಳಿ ಚಂದ್ರಯ್ಯ ಆಚಾರ್ಯ ಮತ್ತು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಅವರಿಗೆ ಕರ್ಣಾಟಕ ನಾಡ ಪೋಷಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಅ. 12 ರಂದು ಬೆಂಗಳೂರಿನ ನಟಿ ನಿರ್ದೇಶಕಿ ನಯನಾ ಸೂಡ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ನೀಡಲಾಗುತ್ತದೆ.ಮುದ್ರಾಡಿಯಲ್ಲಿ 50 ದಿನಗಳ ರಂಗೋತ್ಸವ: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಸುವರ್ಣ ಕರ್ನಾಟಕ ರಂಗೋತ್ಸವ ನಾಟಕ ಯಕ್ಷಗಾನ ತಾಳಮದ್ದಳೆಯು ಬೆಂಗಳೂರು ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ, ಆಳ್ವಾಸ್ ಎಜುಕೇಷನ್ ಟ್ರಸ್ಟ್, ಹೆಬ್ರಿ ಅಮೃತ ಭಾರತಿ ಎಜುಕೇಷನ್ ಟ್ರಸ್ಟ್ ಮತ್ತು ಹೆಬ್ರಿ ಎಸ್ ಆರ್. ಗ್ರೂಪ್ ಆಫ್ ಎಜುಕೇಷನ್ ಟ್ರಸ್ಟ್ ಸಹಕಾರದಲ್ಲಿ 50 ದಿನಗಳ ರಂಗೋತ್ಸವ ಶ್ರೀ ಕ್ಷೇತ್ರದ ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. ಸೆ. 27ರಂದು ರಂಗೋತ್ಸವಕ್ಕೆ ಚಾಲನೆ ನೀಡಿದ್ದು ನ. 15 ರ ತನಕ ನಡೆಯಲಿದೆ.