ಪ್ರಧಾನ ಗರ್ಭಗೃಹದ ಮೇಲೆ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಿದ ಮಧ್ಯಮ ಪ್ರಮಾಣದ ದ್ರಾವಿಡ ಮಾದರಿಯ ಏಕತಲದ ಗಾರೆ ಪ್ರತಿಮೆಗಳಿದ್ದು

ರಾಮಮೂರ್ತಿ ನವಲಿ ಗಂಗಾವತಿ

ಗಂಗಾವತಿ ನಗರ ವಾಣಿಜ್ಯ ಕೇಂದ್ರವಾಗಿದ್ದರೂ ಸಹ ಜಾತ್ರೆ, ಧಾರ್ಮಿಕ ಸಮಾರಂಭ, ಕಲೆ, ಸಂಸ್ಕೃತಿಯ ತವರೂರು ಎನಿಸಿಕೊಂಡಿದೆ. ಗಂಗಾವತಿ ನಗರಕ್ಕೆ ಹೊಂದಿಕೊಂಡಿರುವ ಹಿರೇಜಂತಕಲ್‌ನ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯ ಐತಿಹಾಸ ಪ್ರಸಿದ್ಧಿ ಪಡೆದಿದ್ದು. ಈ ಸ್ವಾಮಿಯ ಜಾತ್ರೆ ಜ. 23ರಿಂದ ಪ್ರಾರಂಭವಾಗಿದ್ದು, ಜ.25ರ ರಥ ಸಪ್ತಮಿ ದಿನದಂದು ರಥೋತ್ಸವ ಜರುಗಲಿದೆ. ಜ.28ರ ವರೆಗೆ ವಿವಿಧ ಉತ್ಸವ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

ಇತಿಹಾಸ:17ನೇ ಶತಮಾನದಲ್ಲಿ ಚಿಕ್ಕಜಂತಕಲ್‌ನಲ್ಲಿರುವ ಶಾಸನ ಒಂದರಲ್ಲಿ ವಿಜಯನಗರ ಕಾಲದ ಕೆಲವು ಪ್ರಮುಖ ದೇವಾಲಯಗಳಿದ್ದು, ಈ ಸಂದರ್ಭದಲ್ಲಿ ನಿರ್ಮಿತವಾಗಿರಬಹುದೆಂದು ಹೇಳಲಾಗುತ್ತಿದೆ. ಆಂಜನೇಯ ದೇವಾಲಯದಲ್ಲಿರುವ ಕ್ರಿಶ 1544ರ ಸದಾಶಿವರಾಯನ ಶಾಸನ ಮತ್ತು ಬಳ್ಳಾರಿ ತಾಲೂಕಿನ ಚಿಟಕನಹಾಳ ಶಿಲ್ಪಕಲೆಯಿಂದ ನಿಮಿ೯ತ ಹಿರೇಜಂತಕಲ್ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ದೇವಾಲಯದಲ್ಲಿರುವ ಕ್ರಿಶ 1535ರ ಅಚ್ಯುತ ದೇವರಾಯನ ಶಾಸನಗಳಲ್ಲಿ ಈ ದೇವಾಲಯದ ಬಗ್ಗೆ ಉಲ್ಲೇಖವಿದೆ.

ಪ್ರಸ್ತುತ ದೇವಾಲಯ ಕ್ರಿಶ 1535ಕ್ಕಿಂತ ಪೂರ್ವದಲ್ಲಿ ನಿರ್ಮಾಣವಾಗಿರಬಹುದು ಎನ್ನಲಾಗಿದೆ. ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯವು ಪ್ರೌಢ ದೇವರಾಯನ ಕಾಲದಲ್ಲಿ ನಿಮಿ೯ತಗೊಂಡಿದ್ದು, ಸಂಪೂಣ೯ ವಿಜಯಯನಗರ ವಾಸ್ತುಶೈಲಿ, ಹಂಪೆಯ ದೇವಾಲಯಗಳನ್ನು ನೆನಪಿಸುತ್ತದೆ. ಈ ದೇವಸ್ಥಾನಕ್ಕೆ ಎರಡು ಮಹಾದ್ವಾರ, ಮುಖಮಂಟಪ, ಸಭಾಮಂಟಪಗಳಿವೆ. ಎರಡು ಗರ್ಭಗೃಹ, ವಿರೂಪಾಕ್ಷೇಶ್ವರಸ್ವಾಮಿ ಮತ್ತು ಪಂಪಾಂಬಿಕೆ ದೇವಾಲಯಗಳಿವೆ. ವಿಜಯನಗರ ಕಾಲದ ಕಂಬಗಳ ಮೇಲಿರುವಂತೆ ಸಿಂಹ, ಹಂಸ, ಶಂಖವಾದಕ, ಬೆಣ್ಣೆ ಕೖಷ್ಣ, ಯಕ್ಷ, ಭಕ್ತ ಶಿವಲಿಂಗ, ಆನೆ, ಲಿಂಗ, ಸಪ೯ ಮುಂತಾದ ಉಬ್ಬು ಶಿಲ್ಪಗಳನ್ನು ಹೊಂದಿರುವ ಸಮಕಾಲಿನ ಧಾಮಿ೯ಕ ಮತ್ತು ಸಾಮಾಜಿಕ ಅಂಶಗಳನ್ನು ಬಿಂಬಿಸುತ್ತವೆ. ಗಭ೯ಗೃಹದ ಮಧ್ಯ ಭಾಗದಲ್ಲಿರುವ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ಪೀಠ ಸಹಿತ ಲಿಂಗದ ಪಾಣಿವಟ್ಟಲೂ (ಜಲಹರಿ)ಇದೆ. ಸಭಾ ಮಂಟಪದ ದೇವ ಕೋಷ್ಠದಲ್ಲಿ ಶಿವನ ಶಿಲಾಮೂತಿ೯ಗಳು ಹಾಗೂ ಶಿವನ ಪರಿವಾರ ದೇವತೆಗಳಾದ ದಕ್ಷಿಣ ಮೂತಿ೯, ಭೈರವ, ವೀರಭದ್ರ, ಗಣೇಶ, ಕಾತಿ೯ಕೇಯ ಜತೆಗೆ ಸೂಯ೯ದೇವ ಮತ್ತು ಮಹಿಸಾಸುರ ಮದಿ೯ನಿ ಶಿಲ್ಪಗಳಿವೆ.

ಪ್ರಧಾನ ಗರ್ಭಗೃಹದ ಮೇಲೆ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಿದ ಮಧ್ಯಮ ಪ್ರಮಾಣದ ದ್ರಾವಿಡ ಮಾದರಿಯ ಏಕತಲದ ಗಾರೆ ಪ್ರತಿಮೆಗಳಿದ್ದು, ಆದರೂ ಇತಿಹಾಸ ಪ್ರಸಿದ್ಧ ಈ ದೇವಸ್ಥಾನದಲ್ಲಿ ನಿರಂತರವಾಗಿ ಜಾತ್ರೆ ಸಂದಭ೯ದಲ್ಲಿ ವಿವಿಧ ಧಾಮಿ೯ಕ ಕಾಯ೯ಕ್ರಮಗಳು ನಡೆಯುತ್ತವೆ. ಮಾಘ ಶುದ್ಧ ಸಪ್ತಮಿ (ರಥ ಸಪ್ತಮಿ)ಯಂದು ಜಾತ್ರೆ ನಡೆಯುತ್ತದೆ. ಈ ಗ್ರಾಮದಲ್ಲಿ ಬೆಟ್ಟದ ವೀರಭದ್ರೇಶ್ವರ ದೇವಾಲಯ ಮುಡ್ಡಾಣೇಶ್ವರ ಮತ್ತು ಆಂಜನೇಯ ದೇವಸ್ಥಾನ ಇದೆ. ವಿರೂಪಾಪುರದಲ್ಲಿ ಸುಂದರ ಪುರಾತನ ಶಿಲ್ಪಕಲೆಯ ಮುಕ್ಕಣ್ಣೇಶ್ವರ ದೇವಾಲಯ ಇದೆ.

ಹಿರೇಜಂತಕಲ್‌ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನ ಅತ್ಯಂತ ಹಳೆಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇಗುಲವಾಗಿದೆ. ಇಲ್ಲಿ ಪ್ರತಿ ವರ್ಷ ಅದ್ಧೂರಿಯಾಗಿ ಜಾತ್ರೆ ನಡೆಯುತ್ತಿದೆ. ದಾಸೋಹ, ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತದೆ. ವಿವಿಧ ಜಿಲ್ಲೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ ಎಂದು ಶ್ರೀದೇವಿ ಇಂಡ್ರಸ್ಟ್ರೀಜ್ ನ ಜೆ. ನಾಗರಾಜ್ ತಿಳಿಸಿದ್ದಾರೆ.

ವಿಜಯನಗರ ಕಾಲದಿಂದಲೂ ಜಾತ್ರೆ ಆರಂಭವಾಗಿದ್ದು, ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಕೊರೋನಾ ಸಂದರ್ಭದಲ್ಲಿ ಸಹ ಜಾತ್ರೆ ಜರುಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಕಳೆದ 16 ವರ್ಷಗಳಿಂದ ನಡೆಸುತ್ತ ಬರಲಾಗುತ್ತಿದೆ. ಜಾತ್ರೆಯ ದಿನ ಮಾಜಿ ಸಂಸದ ಎಚ್‌.ಜಿ. ರಾಮುಲು ಕುಟುಂಬದಿಂದ ಅನ್ನ ದಾಸೋಹ ನಿರಂತರವಾಗಿ ನಡೆದಿದೆ.ಜಾತ್ರೆಯ 2 ನೇ ದಿನ ಜಿಆರ್‌ಎಸ್‌ ಕುಟುಂಬ, 3ನೇ ದಿನ ಹಿರೇಜಂತಕಲ್‌ ಗಾಣಿಗೇರ ಸಮಾಜದಿಂದ ಅನ್ನದಾಸೋಹ ನಡೆಯುತ್ತಿದೆ ಎಂದು ಗಂಗಾವತಿ ನಗರಸಭೆ ಮಾಜಿ ಅಧ್ಯಕ್ಷ ರಾಘವೇಂದ್ರ ಶ್ರೇಷ್ಠಿ ತಿಳಿಸಿದ್ದಾರೆ.