ಸಾರಾಂಶ
- ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಿಂದ ಆಯೋಜನೆ: ಜಯಣ್ಣ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠ ದಾವಣಗೆರೆ ಶಾಖೆಯಿಂದ ಆ.5ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ದೇವರ 62ನೇ ರಥೋತ್ಸವ ಹಾಗೂ ಶ್ರೀ ಸಿದ್ದರಾಮೇಶ್ವರ ಶ್ರೀಗಳ 22ನೇ ಸಂಸ್ಮರಣೋತ್ಸವವನ್ನು ನಗರದ ವೆಂಕಭೋವಿ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಂಸ್ಥಾನ ಧರ್ಮದರ್ಶಿ ಎಚ್.ಜಯಣ್ಣ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ಅಧ್ಯಕ್ಷತೆಯಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಶ್ರೀ, ಹರಿಹರದ ವೀರಶೈವ ಪಂಚಮಸಾಲಿ ಪೀಠದ ಶ್ರೀವಚನಾನಂದ ಶ್ರೀ, ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಶ್ರೀ, ವಾಲ್ಮೀಕಿ ಪೀಠದ ಪ್ರಸನ್ನ ವಾಲ್ಮೀಕಿ ಶ್ರೀ, ದಾವಣಗೆರೆಯ ವಿರಕ್ತ ಮಠದ ಶ್ರೀಬಸವ ಪ್ರಭು ಶ್ರೀ, ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಶ್ರೀ, ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀ, ಉಪ್ಪಾರ ಗುರುಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಶ್ರೀ, ಯಾದವ ಮಹಾಸಂಸ್ಥಾನದ ಶ್ರೀಕೃಷ್ಣ ಯಾದವಾನಂದ ಶ್ರೀ, ಮಡಿವಾಳ ಗುರುಪೀಠದ ಶ್ರೀಬಸವ ಮಾಚಿದೇವ ಶ್ರೀ, ಈಡಿಗ ಗುರುಪೀಠದ ಶ್ರೀ ರೇಣುಕಾನಂದ ಶ್ರೀ, ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಅಂಬಿಗರ ಚೌಡಯ್ಯ ಶ್ರೀ, ಹಡಪದ ಅಪ್ಪಣ್ಣ ಗುರುಪೀಠದ ಶ್ರೀ ಅನ್ನದಾನಿ ಭಾರತೀಯ ಅಪ್ಪಣ್ಣ ಶ್ರೀ, ಕುಂಬಾರ ಗುರುಪೀಠದ ಶ್ರೀ ಕುಂಬಾರ ಗುಂಡಯ್ಯ ಶ್ರೀ, ರೆಡ್ಡಿ ಗುರುಪೀಠದ ಶ್ರೀ ವೇಮನಾನಂದ ಶ್ರೀ ಭಾಗವಹಿಸುವರು ಎಂದು ತಿಳಿಸಿದರು.ಮೇದಾರ ಗುರುಪೀಠದ ಶ್ರೀ ಇಮ್ಮಡಿ ಮೇದಾರ ಕೇತೇಶ್ವರ ಶ್ರೀ, ಕೊರಟಗೆರೆಯ ಶ್ರೀ ಮಹಾಲಿಂಗ ಶ್ರೀ, ಚಿಕ್ಕಮಗಳೂರಿನ ಶ್ರೀ ಮರುಳಸಿದ್ದ ಶ್ರೀ, ಹಾವೇರಿಯ ಶ್ರೀಶಾಂತಲಿಂಗ ಶ್ರೀ, ಯರಗಟ್ಟಿಯ ಜಯದೇವ ಶ್ರೀ, ಹೊನಕಲ್ಲಿನ ಶ್ರೀ ಬಸವ ರಮಾನಂದ ಶ್ರೀ, ಶಿಕಾರಿಪುರದ ಶ್ರೀಚನ್ನಬಸವ ಶ್ರೀ, ಮೈಸೂರಿನ ಶ್ರೀಬಸವ ಲಿಂಗಮೂರ್ತಿ ಶ್ರೀ, ಗುರುಮಠಕಲ್ಲಿನ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಶ್ರೀ ಸೇರಿದಂತೆ ಪ್ರಮುಖ ಮಠಾಧೀಶರ ನೇತೃತ್ವದಲ್ಲಿ, ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಠಥೋತ್ಸವ ಜರುಗಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಚ್.ಅಂಜಿನಪ್ಪ, ಬಸವರಾಜ್, ಶ್ರೀನಿವಾಸ್, ಮಂಜಪ್ಪ, ವೈ.ಬಸವರಾಜ ಇದ್ದರು.- - - -4ಕೆಡಿವಿಜಿ34ಃ:
ದಾವಣಗೆರೆಯಲ್ಲಿ ಸಿದ್ದರಾಮೇಶ್ವರ ಶ್ರೀ ರಥೋತ್ಸವ, ಸಂಸ್ಮಣೋತ್ಸವ ಕುರಿತು ಎಚ್.ಜಯಣ್ಣ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.