ಇಂದು ತಾಂತ್ರಿಕ ವಿದ್ಯಾರ್ಥಿಗಳ 7ನೇ ಪದವಿ ಪ್ರದಾನ ಸಮಾರಂಭ

| Published : Aug 24 2024, 01:16 AM IST

ಸಾರಾಂಶ

ಸಮಾರಂಭದಲ್ಲಿ 227 ಮಂದಿಗೆ ಪದವಿ ಪ್ರದಾನ ನಡೆಯಲಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕೃತಿ (ಶೇ.92 ಅಂಕ) ಅವರು ಚಿನ್ನದ ಪದಕ ಪಡೆದಿದ್ದಾರೆ. ಸಿವಿಲ್ ವಿಭಾಗದಲ್ಲಿ ಸಿಂಧು (ಶೇ.84 ಅಂಕ) ಎಂಬ ವಿದ್ಯಾರ್ಥಿನಿ ರಾಜ್ಯಕ್ಕೆ 10ನೇ ರ್‍ಯಾಂಕ್ ಪಡೆದು ಮೈಸೂರು ವಿಭಾಗಕ್ಕೆ ಮೊದಲಿಗರಾಗಿದ್ದಾರೆ ಎಂದು ವಿವರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಸುಂಡಹಳ್ಳಿಯ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಆ.24 ರಂದು ಕಾಲೇಜು ಆವರಣದಲ್ಲಿ ತಾಂತ್ರಿಕ ವಿದ್ಯಾರ್ಥಿಗಳ 7ನೇ ಪದವಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥೆ ಕಾರ್‍ಯದರ್ಶಿ ಪ್ರೊ. ನಾಗೇಂದ್ರ ತಿಳಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ವಿವಿ ಉಪ ಕುಲಪತಿ ಡಾ.ಕೆ.ಎನ್.ಲೋಕನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಂಸ್ಥೆ ಅಧ್ಯಕ್ಷ ಡಾ. ಎಚ್. ರಾಜು ಅಧ್ಯಕ್ಷತೆ ವಹಿಸುವರು. ಕಾರ್‍ಯದರ್ಶಿ ಪ್ರೊ. ಟಿ. ನಾಗೇಂದ್ರ, ಪ್ರಾಂಶುಪಾಲ ಪ್ರೊ. ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಪ್ರೊ. ಮಂಜುನಾಥ್ ಭಾಗವಹಿಸುವರು ಎಂದು ಹೇಳಿದರು.

ಸಮಾರಂಭದಲ್ಲಿ 227 ಮಂದಿಗೆ ಪದವಿ ಪ್ರದಾನ ನಡೆಯಲಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕೃತಿ (ಶೇ.92 ಅಂಕ) ಅವರು ಚಿನ್ನದ ಪದಕ ಪಡೆದಿದ್ದಾರೆ. ಸಿವಿಲ್ ವಿಭಾಗದಲ್ಲಿ ಸಿಂಧು (ಶೇ.84 ಅಂಕ) ಎಂಬ ವಿದ್ಯಾರ್ಥಿನಿ ರಾಜ್ಯಕ್ಕೆ 10ನೇ ರ್‍ಯಾಂಕ್ ಪಡೆದು ಮೈಸೂರು ವಿಭಾಗಕ್ಕೆ ಮೊದಲಿಗರಾಗಿದ್ದಾರೆ ಎಂದು ವಿವರಿಸಿದರು.

ನಮ್ಮ ಕಾಲೇಜಿನಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಅ್ಯಂಡ್ ಕಮ್ಯೂನಿಕೇಷನ್, ಕಂಪ್ಯೂಟರ್ ಸೈನ್ಸ್ ವಿಭಾಗಗಳಿವೆ. ಇದರೊಂದಿಗೆ ಬಿಸಿಎ ಹಾಗೂ ಬಿ.ಕಾಂ ಪದವಿಗಳನ್ನು ಪ್ರಾರಂಭಿಸಿದ್ದೇವೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಂ.ಸಿ.ಎ., ಸ್ನಾತಕೋತ್ತರ ಪದವಿಯನ್ನು ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಸ್ವಾಮ್ಯಕ್ಕೆ ಒಳಪಟ್ಟಂತೆ ಪ್ರಾರಂಭಿಸಲಾಗಿದೆ. ಇದರಲ್ಲೂ ಸಹ ಉತ್ತಮ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ತಾಂತ್ರಿಕ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಇಂಡೋನೇಶಿಯಾದ ಜಕಾರ್ತದಲ್ಲಿರುವ ತರುಮನಗರ ವಿಶ್ವವಿದ್ಯಾಲಯದೊಡನೆ ಎಂಓ ಮಾಡಿಕೊಂಡಿದ್ದು, ಶೈಕ್ಷಣಿಕ ವಿನಿಮಯ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸಾಫ್ಟ್ ಸ್ಕಿಲ್ಸ್, ಟೆಕ್ನಿಕಲ್ ಸ್ಕಿಲ್ಸ್, ಕಮ್ಯುನಿಕೇಷನ್ ಸ್ಕಿಲ್ಸ್ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕ್ಲಿಕ್ಸ್ ಕ್ಯಾಂಪಸ್, ಕ್ಯೂಸ್ಪೈಡರ್, ಜಿಟಿಟಿಸಿ, ಸ್ಕಿಲ್ ಫ್ಯಾಕ್ಟ್ ಮುಂತಾದ ತರಬೇತಿ ಕಂಪನಿಗಳೊಡನೆ ಒಪ್ಪಂದ ಮಾಡಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಮ್ಮಲ್ಲಿ ವಿದ್ಯಾಭ್ಯಾಸ ಮಾಡಿದ ಹಲವಾರು ಮಂದಿ ವಿದ್ಯಾರ್ಥಿಗಳು ಎಂಎನ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವಿದೇಶಗಳಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಸುದ್ಧಿಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷ ಡಾ. ಎಚ್. ರಾಜು, ಪ್ರಾಂಶುಪಾಲ ಡಾ. ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಪ್ರೊ. ಮಂಜುನಾಥ್ ಇದ್ದರು.