ಇಂದು ಶಂಭುನಾಥ ಶ್ರೀಗಳ ವರ್ಧಂತೋತ್ಸವ

| Published : Mar 10 2025, 12:16 AM IST

ಸಾರಾಂಶ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಪರಮಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿಯವರ 46ನೇ ವರ್ಧಂತೋತ್ಸವದ ಸಂಭ್ರಮಾಚರಣೆ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಾ. 10ರ ಸಂಜೆ 5.30 ಗಂಟೆಗೆ ನಡೆಯಲಿದೆ. ಹಾಸನ ಮತ್ತು ಕೊಡಗು ಜಿಲ್ಲೆಯ ಎಲ್ಲ ಸಮಸ್ತ ಭಕ್ತಾಧಿಗಳು ಶ್ರೀಗಳ ಹುಟ್ಟುಹಬ್ಬ ಆಚರಿಸುತ್ತಿದ್ದು, ಶ್ರೀಮಠದ ಆವರಣದಲ್ಲಿ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಹೋಮ ಹಾಗೂ ಷೋಡಶೋಪಚಾರ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಹಾಸನ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಪರಮಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿಯವರ 46ನೇ ವರ್ಧಂತೋತ್ಸವದ ಸಂಭ್ರಮಾಚರಣೆ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಾ. 10ರ ಸಂಜೆ 5.30 ಗಂಟೆಗೆ ನಡೆಯಲಿದೆ.

ಪ್ರಾತಃ ಸ್ಮರಣೀಯ ಯುಗಯೋಗಿ ಜಗದ್ಗುರು ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೃಪಾಶೀರ್ವಾದಗಳೊಂದಿಗೆ, ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರ ದಿವ್ಯಾಶೀರ್ವಾದಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಹಾಸನ ಮತ್ತು ಕೊಡಗು ಜಿಲ್ಲೆಯ ಎಲ್ಲ ಸಮಸ್ತ ಭಕ್ತಾಧಿಗಳು ಶ್ರೀಗಳ ಹುಟ್ಟುಹಬ್ಬ ಆಚರಿಸುತ್ತಿದ್ದು, ಶ್ರೀಮಠದ ಆವರಣದಲ್ಲಿ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಹೋಮ ಹಾಗೂ ಷೋಡಶೋಪಚಾರ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು,ವಿವಿಧ ಸಮುದಾಯಗಳ ಮುಖಂಡರು, ಸಿಬ್ಬಂದಿ, ಶ್ರೀಮಠದ ಅಭಿಮಾನಿಗಳು, ಸದ್ಭಕ್ತರು ಆಗಮಿಸಿ ಶ್ರೀ ಗುರುದೇವತಾ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಠದ ಸದ್ಭಕ್ತಗಣ ಭಕ್ತಿ ಪೂರ್ವಕವಾಗಿ ಕೋರಿದೆ.