ಇಂದು ಗಜೇಂದ್ರಗಡದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ಸಂಭ್ರಮ

| Published : Jun 25 2025, 01:18 AM IST

ಇಂದು ಗಜೇಂದ್ರಗಡದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದಿನ ವರ್ಷಗಳಲ್ಲಿ ರೈತ ಸಮೂಹಕ್ಕೆ ಅತಿಯಾದ ಮಳೆ, ಕೀಟಬಾಧೆ ಅತೀವೃಷ್ಟಿ, ಬರಗಾಲ ಹೀಗೆ ಸಮಸ್ಯೆಗಳಿಂದ ನಲುಗಿದ್ದ ತಾಲೂಕಿನ ರೈತ ಸಮೂಹಕ್ಕೆ ಪ್ರಸಕ್ತ ಕಾಲಕ್ಕೆ ಮಳೆ ಸುರಿದು ರೈತರ ಕೃಷಿ ಚಟುವಟಿಕೆಗಳಿಗೆ ಸಾಥ್ ನೀಡದಿರುವ ಕಾರಣ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಕೆಲ ಭಾಗಗಳಲ್ಲಿ ಬಿತ್ತನೆಯಾಗಿದ್ದು, ಇದೆಲ್ಲದರ ಮಧ್ಯೆಯೇ ರೈತರ ಆರಾಧ್ಯವೆನಿಸಿದ ಮಣ್ಣೆತ್ತಿನ ಅಮಾವಾಸ್ಯೆ ಜೂ. 25ರಂದು ಆಚರಿಸಲು ಮುಂದಾಗಿದ್ದಾರೆ.

ಗಜೇಂದ್ರಗಡ: ಈ ಹಿಂದಿನ ವರ್ಷಗಳಲ್ಲಿ ರೈತ ಸಮೂಹಕ್ಕೆ ಅತಿಯಾದ ಮಳೆ, ಕೀಟಬಾಧೆ ಅತೀವೃಷ್ಟಿ, ಬರಗಾಲ ಹೀಗೆ ಸಮಸ್ಯೆಗಳಿಂದ ನಲುಗಿದ್ದ ತಾಲೂಕಿನ ರೈತ ಸಮೂಹಕ್ಕೆ ಪ್ರಸಕ್ತ ಕಾಲಕ್ಕೆ ಮಳೆ ಸುರಿದು ರೈತರ ಕೃಷಿ ಚಟುವಟಿಕೆಗಳಿಗೆ ಸಾಥ್ ನೀಡದಿರುವ ಕಾರಣ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಕೆಲ ಭಾಗಗಳಲ್ಲಿ ಬಿತ್ತನೆಯಾಗಿದ್ದು, ಇದೆಲ್ಲದರ ಮಧ್ಯೆಯೇ ರೈತರ ಆರಾಧ್ಯವೆನಿಸಿದ ಮಣ್ಣೆತ್ತಿನ ಅಮಾವಾಸ್ಯೆ ಜೂ. 25ರಂದು ಆಚರಿಸಲು ಮುಂದಾಗಿದ್ದಾರೆ.

ಉತ್ತರ ಕರ್ನಾಟಕದ ರೈತ ಸಮೂಹಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ದೊಡ್ಡ ಹಬ್ಬ. ಅಲ್ಲದೆ ಕೃಷಿ ವರ್ಷಾರಂಭದ ಮೊದಲ ಹಬ್ಬ ಇದಾಗಿದೆ. ಈಗಾಗಲೇ ಮಣ್ಣಿನ ಬಸವಣ್ಣನ ತಯಾರಿಕೆ ಕಾರ್ಯದಲ್ಲಿ ಕುಂಬಾರರು ನಿರತರಾಗಿ, ಬಗೆ ಬಗೆಯ ಮಣ್ಣಿನ ಬಸವಣ್ಣಗಳನ್ನು ತಯಾರಿಸಿದ್ದಾರೆ. ಮುಂಗಾರು ಆರಂಭದಿಂದ ಹಿಂಗಾರು ಹಂಗಾಮಿನ ವರೆಗಿನ ಬೆಳೆಗಳು ಉತ್ತಮ ಫಸಲು ಬರಲಿ ಎಂದು ಉತ್ತರ ಕರ್ನಾಟಕದ ರೈತ ವರ್ಗ ೫ ಬಗೆಯ ಮಣ್ಣಿನ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಕುಂಬಾರರು ಜಿಗುಟಾದ ಮಣ್ಣಿನಿಂದ ತಯಾರಿಸಲಾದ ಬಸವಣ್ಣನನ್ನು ಪೂಜೆ ಮಾಡುವುದು. ಮಣ್ಣಿನ ಮೊದಲ ಪೂಜೆಯಾಗಿದೆ. ಈ ಬಸವಣ್ಣನನ್ನು ಅಮಾವಾಸ್ಯೆಯೆಂದು ಕುಂಬಾರರು ಬುಟ್ಟೆಯಲ್ಲಿಟ್ಟುಕೊಂಡು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಓಣಿಗಳಲ್ಲಿ ಬಸವಣ್ಣ... ಬಸವಣ್ಣ... ಎಂದು ಕೂಗುತ್ತಾ ಮಾರಾಟ ಮಾಡುತ್ತಾರೆ. ಪ್ರತಿಪದ ಮರುದಿನ ಮಕ್ಕಳು ಆ ಬಸವಣ್ಣನನ್ನು ಬುಟ್ಟಿಯಲ್ಲಿಟ್ಟುಕೊಂಡು ಮಕ್ಕಳೆಲ್ಲ ಕೊರಳಿಗೆ ಗೆಜ್ಜೆ, ಗುಮುರಿಗಳ ಸರ ಹಾಕಿ ಕೊಂಡು ಮನೆ-ಮನೆಗಳಿಗೆ ತೆರಳಿ ಕರಿ ಜ್ವಾಳಾ ನೀಡ್ರಿ ಎನ್ನುತ್ತಾ ಸಂಜೆಯವರೆಗೂ ದವಸ ಧಾನ್ಯ, ಹಣ್ಣು-ಹಂಪಲಗಳು ಮತ್ತು ಹಣ ಸಂಗ್ರಹಿಸುತ್ತಾರೆ. ಮಣ್ಣೆತ್ತಿನ ಹಬ್ಬ ದೊಡ್ಡವರಿಗೆ ಧನ್ಯತಾ ಭಾವ ಮೂಡಿಸಿದರೇ, ಮಕ್ಕಳಿಗೆ ಖುಷಿ ನೀಡುವ ಹಬ್ಬವಾಗಿದೆ. ಮಣ್ಣಿನ ಬಸವಣ್ಣ ತಯಾರಿಕೆಯ ಪ್ರಮುಖ ಪಾತ್ರಧಾರಿಗಳು ಉತ್ಸಾಹದಿಂದಲ್ಲೇ ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣಿನ ಬಸವಣ್ಣಗಳನ್ನು ತಯಾರಿಕೆಯಲ್ಲಿ ನಿರತರಾಗಿದ್ದಾರೆ.