ಇಂದು ಸಿದ್ಧಲಿಂಗ ದೇಶಿಕರ ಚರಪಟ್ಟಾಧಿಕಾರ ಮಹೋತ್ಸವ

| Published : May 09 2025, 12:33 AM IST

ಇಂದು ಸಿದ್ಧಲಿಂಗ ದೇಶಿಕರ ಚರಪಟ್ಟಾಧಿಕಾರ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಸೋಮಸಮುದ್ರ ಗ್ರಾಮದ ಪ್ರತಿಷ್ಠಿತ ಕೊಟ್ಟೂರು ಗುರುಪರಪರೆಯ ಶಾಖಾ ವಿರಕ್ತಮಠದ ನಿಯೋಜಿತ ಪಟ್ಟಾಧಿಕಾರಿ ಸಿದ್ಧಲಿಂಗ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮೇ ೯ರಂದು ಜರುಗಲಿದೆ.

ಕನ್ನಡಪ್ರಭ ವಾರ್ತೆ ಕುರುಗೋಡು

ತಾಲೂಕಿನ ಸೋಮಸಮುದ್ರ ಗ್ರಾಮದ ಪ್ರತಿಷ್ಠಿತ ಕೊಟ್ಟೂರು ಗುರುಪರಪರೆಯ ಶಾಖಾ ವಿರಕ್ತಮಠದ ನಿಯೋಜಿತ ಪಟ್ಟಾಧಿಕಾರಿ ಸಿದ್ಧಲಿಂಗ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮೇ ೯ರಂದು ಜರುಗಲಿದೆ ಎಂದು ಗರಗ ನಾಗಲಾಪುರ ಮತ್ತು ಕುರುಗೋಡು ಮಠದ ನಿರಂಜನಪ್ರಭು ಮಹಾಸ್ವಾಮಿಗಳು ತಿಳಿಸಿದರು.

ಶ್ರೀಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮ ಸಾಂಗವಾಗಿ ನಡೆಯಲು ಈ ಭಾಗದ ಮಠಾಧೀಶರು ಮತ್ತು ಸಾರ್ವಜನಿಕರ ಸಭೆ ನಡೆಸಲಾಗಿದೆ. ಎಲ್ಲರ ಸಲಹೆ ಪಡೆದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೇ ೯ ರಂದು ಬೆಳಗಿನ ಜಾವದಿಂದಲೇ ಧಾರ್ಮಿಕ ಕಾರ್ಯಕ್ರಮ ನಂತರ ಬಹಿರಂಗ ಕಾರ್ಯಕ್ರಮ ನೆರವೇರಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ನಿರಂಜನ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಸೇರಿದಂತೆ ೫೦ಕ್ಕೂ ಅಧಿಕ ವಿವಿಧ ಮಠಗಳ ಮಠಾಧೀಶರು ಭಾಗವಹಿಸುವರು. ಈ ಕಾರ್ಯಕ್ರಮಕ್ಕೆ ೧೦ ಸಾವಿರ ಜನರು ಸೇರಬಹುದೆಂದು ಅಂದಾಜಿಸಲಾಗಿದೆ ಎಂದರು.

ನೂತನ ಸ್ವಾಮೀಜಿ:

ಕೊಟ್ಟೂರು ಗುರುಪರಪರೆಯ ಶಾಖಾ ವಿರಕ್ತಮಠದ ನಿಯೋಜಿತ ಪೀಠಾಧಿಕಾರಿಯಾಗಿ ನೇಮಕಗೊಂಡಿರುವ ಸಿದ್ಧಲಿಂಗ ದೇಶಿಕರ ಅವರ ಪೂರ್ವಾಶ್ರಮದ ಹೆಸರು ಎಚ್.ಎಂ. ನಾಗರಾಜ ಸ್ವಾಮಿ, ತಮ್ಮ ಹುಟ್ಟೂರಾದ ಹೂವಿನಹಡಗಲಿ ತಾಲೂಕಿನ ಹಿರೇಮಲ್ಲನಕೆರೆ ಗ್ರಾಮದಲ್ಲಿ ೪ನೇ ತರಗತಿವರೆಗೆ, ೫ನೇ ತರಗತಿಯನ್ನು ಲಿಂಗನಾಯಕನಹಳ್ಳಿಯಲ್ಲಿ ಪೂರ್ಣಗೊಳಿಸಿ, ೮ನೇ ತರಗತಿಗೆ ಶಿವಯೋಗಮಂದಿರದ ಸಂಸ್ಥೆಗೆ ವಟುವಾಗಿ ಪ್ರವೇಶ ಪಡೆಯುತ್ತಾರೆ. ಸಿದ್ಧಲಿಂಗ ದೇಶಿಕರು ಶಿವಗೋಗಮಂದಿರದಲ್ಲಿ ಶಿವಯೋಗ, ಸಂಸ್ಕೃತ, ಯೋಗಶಾಸ್ತ್ರ, ವಚನಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ತತ್ವಶಾಸ್ತ್ರ, ಸಂಗೀತ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಅಭ್ಯಾಸ ಮಾಡಿದ್ದಾರೆ. ನಂತರ ಶಿವಯೋಗ ಮಂದಿರದಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಸಮಾನವಾದ ಶಿವಯೋಗ ಪ್ರಥಮ, ಶಿವಯೋಗ ದ್ವಿತೀಯ ಶಿಕ್ಷಣವನ್ನು ಪೂರೈಸಿದ್ದಾರೆ. ಸಂಸ್ಕೃತದಲ್ಲಿ ಶಕ್ತಿ ವಿಶಿಷ್ಟಾದೈತ ಶಾಸ್ತ್ರದಲ್ಲಿ ಪಡೆದುಕೊಂಡಿದ್ದಾರೆ.