ಸಾರಾಂಶ
ಇಂದು ಶರಣ ಸಂಗಮ ಸಮಾರೋಪ
ಗುಳೇದಗುಡ್ಡ:
ಇಲ್ಲಿನ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಶ್ರೀ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮಿಗಳವರ 38ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದ ಸಮಾರೋಪ, ಧರ್ಮ ಸಭೆ, ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಜ.4 ರಂದು ಜರುಗಲಿದೆ.ಜ.4 ರಂದು ಅಹೋರಾತ್ರಿ ಕರ್ತೃ ಗದ್ದುಗೆಗೆ ಮಹಾವಚನಾಭಿಷೇಕ, ಬಿಲ್ವಾರ್ಚನೆ, ಲಿಂಗದೀಕ್ಷೆ, ಅಯ್ಯಾಚಾರ ನಡೆಯಲಿದೆ. ಬಳಿಕ ಉಚಿತ ಸಾಮೂಹಿಕ ವಿವಾಹ, ಧರ್ಮ ಸಭೆ ನಡೆಯುವುದು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಚನಕಟ್ಟುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ.
ಡಾ.ತೊಂಟದ ಡಾ.ಸಿದ್ದರಾಮ ಶ್ರೀಗಳು, ನಿಡಸೋಸಿಯ ಪಂಚಮಲಿಂಗೇಶ್ವರ ಶ್ರೀಗಳು, ಇಳಕಲ್ಲದ ಗುರುಮಹಾಂತ ಶ್ರೀಗಳು, ಕಾಗಿನೆಲೆಯ ಜಗದ್ಗುರು ನಿರಂಜನಾನಂದಪುರಿ ಶ್ರೀಗಳು, ಮೈಸೂರಿನ ಜ್ಞಾನಪ್ರಕಾಶ ಶ್ರೀಗಳು, ದಯಾನಂದಪುರಿ ಶ್ರೀಗಳು, ಪ್ರಭುಲಿಂಗ ಶ್ರೀಗಳು, ಶಿವಶಂಕರ ಶಿವಾಚಾರ್ಯ ಶ್ರೀಗಳು, ದಿವ್ಯಾನಂದಗಿರಿ ಶ್ರೀಗಳು, ಘನಲಿಂಗ ಶ್ರೀಗಳು, ಈಶ್ವರಾನಂದ ಶ್ರೀಗಳು, ಮೃತ್ಯುಂಜಯ ಶ್ರೀಗಳು, ಅಭಿನವ ರೇವಣಸಿದ್ದ ಪಟ್ಟದ್ದೇವರು ಸಾನಿಧ್ಯ ವಹಿಸುವರು. ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವೆ ಉಮಾಶ್ರೀ, ಎಸ್.ಆರ್.ಪಾಟೀಲ, ರಾಜಶೇಖರ ಶೀಲವಂತ, ರವೀಂದ್ರ ಕಲಬುರ್ಗಿ, ವೀಣಾ ಕಾಶಪ್ಪನವರ, ಬಿ.ಸೋಮಶೇಕರ, ಷಡಕ್ಷರಪ್ಪನವರು, ಎಚ್.ಶಿವಪ್ಪಶೆಟ್ಟಿ, ಚಂದ್ರಕಾಂತ ಶೇಖಾ, ಕೆ.ಎನ್.ಭೀಮಪ್ಪ, ಶಿವಾನಂದ ನಾರಾ, ಎಂ.ಕರಬಸಪ್ಪನವರ, ಸುಭಾಸ ಮೆಣಸಿ, ಎಚ್.ತಿಪ್ಪೇಸ್ವಾಮಿ ಮತ್ತಿತರರು ಪಾಲ್ಗೊಳ್ಳುವರು.