ಜಮಖಂಡಿ : ಕನ್ನಡ ನಾಮಫಲಕ ಅಳವಡಿಕೆ ಇಂದು ಕೊನೆ ದಿನ

| Published : May 30 2024, 12:58 AM IST / Updated: May 30 2024, 11:48 AM IST

Kannada nameplate row: Several shops in Mall of Asia shut down for violating mandate; BBMP takes action

ಸಾರಾಂಶ

 ಜಮಖಂಡಿ ಉಪವಿಭಾಗದ ವ್ಯಾಪ್ತಿಗೆ ಬರುವ ಎಲ್ಲಾ ವ್ಯಾಪಾರಸ್ಥರು, ಉದ್ದಿಮೆದಾರರು, ಅಂಗಡಿಗಳ ಮಾಲಿಕರು, ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳು ಹಾಗೂ ಹೊಟೇಲ್‌ಗಳಲ್ಲಿ ಕನ್ನಡ ನಾಮ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಸೂಚನೆ ನೀಡಿದ್ದಾರೆ.

 ಜಮಖಂಡಿ :  ಜಮಖಂಡಿ ಉಪವಿಭಾಗದ ವ್ಯಾಪ್ತಿಗೆ ಬರುವ ಎಲ್ಲಾ ವ್ಯಾಪಾರಸ್ಥರು, ಉದ್ದಿಮೆದಾರರು, ಅಂಗಡಿಗಳ ಮಾಲಿಕರು, ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳು ಹಾಗೂ ಹೊಟೇಲ್‌ಗಳಲ್ಲಿ ಕನ್ನಡ ನಾಮ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಸೂಚನೆ ನೀಡಿದ್ದಾರೆ.

ನಾಮಫಲಕಗಳನ್ನು ಅಳವಡಿಸುವವರು ಶೇ.60 ರಷ್ಟು ಕಡ್ಡಾಯವಾಗಿ ಕನ್ನಡ ಅಕ್ಷರಗಳಲ್ಲಿಯೇ ನಾಮ ಫಲಕಗಳನ್ನಗ ಅಳವಡಿಸಬೇಕು ಎಂದರು. ಇಲ್ಲವಾದಲ್ಲಿ ಗ್ರಾಪಂ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕನ್ನಡ ವಿಲ್ಲದ ನಾಮಫಲಕಗಳನ್ನು ತೆರವುಗೊಳಿಸುತ್ತಾರೆ ಎಂದು ಎಚ್ಚರಿಸಿದರು. 

ನಾಮಫಲಕ ಅಳವಡಿಕೆಗೆ ಮೇ 30ರವರೆಗೆ ಗಡುವು ನೀಡಲಾಗಿದ್ದು, ಅಷ್ಟರಲ್ಲಿ ಅನ್ಯ ನಾಮಫಲಕಗಳನ್ನು ಅಳವಡಿಸಿದವರು ಬದಲಾವಣೆ ಮಾಡಿಕೊಳ್ಳಬೇಕೆಂದು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಸದಾಶಿವ ಮುಕ್ಕೊಜಿ ಮತ್ತು ಇತರರು ಉಪಸ್ಥಿತರಿದ್ದರು.