ಇಂದು ಮುಳಗುಂದ ಸಿದ್ದೇಶ್ವರ ಜಾತ್ರಾ ಮಹೋತ್ಸವ

| Published : Mar 30 2025, 03:01 AM IST

ಸಾರಾಂಶ

ಐತಿಹಾಸಿಕ ಸಿದ್ದೇಶ್ವರ ಜಾತ್ರಾ ಮಹೋತ್ಸವ ಮಾ 30ರಂದು ಬೆಳಗ್ಗೆ ಸಿದ್ದೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ. ಸಂಜೆ 5ಕ್ಕೆ ಮಹಾ ರಥೋತ್ಸವ ನಡೆಯಲಿದೆ. ನಂತರ ಅನುಭಾವ ಗೋಷ್ಠಿಯ ಸಾನಿಧ್ಯವನ್ನು ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಜಿ ವಹಿಸಿಕೊಳ್ಳುವರು.

ಮುಳಗುಂದ: ಇಲ್ಲಿಯ ಐತಿಹಾಸಿಕ ಸಿದ್ದೇಶ್ವರ ಜಾತ್ರಾ ಮಹೋತ್ಸವ ಮಾ 30ರಂದು ನಡೆಯಲಿದೆ. ಬೆಳಗ್ಗೆ ಸಿದ್ದೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ. ಸಂಜೆ 5ಕ್ಕೆ ಮಹಾ ರಥೋತ್ಸವ ನಡೆಯಲಿದೆ. ನಂತರ ಅನುಭಾವ ಗೋಷ್ಠಿಯ ಸಾನಿಧ್ಯವನ್ನು ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಜಿ ವಹಿಸಿಕೊಳ್ಳುವರು.

ಸಮ್ಮುಖವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಉಪನ್ಯಾಸಕರಾಗಿ ಧಾರವಾಡದ ಬಸವಾನಂದ ಮಾಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಮುಳಗುಂದ ಅರ್ಬನ್ ಬ್ಯಾಂಕ್ ಚೇರಮನ್ ಎಸ್.ಎಂ. ನೀಲಗುಂದ, ಉದ್ಘಾಟಕರಾಗಿ ಗೌರಮ್ಮಾ ಬಡ್ನಿ, ಮುಖ್ಯ ಅತಿಥಿಗಳಾಗಿ ಜಿಮ್ಸ ನಿರ್ದೇಶಕ ಡಾ. ಬಸವರಾಜ ಬೊಮ್ಮನಳ್ಳಿ, ಕಾಶೀನಾಥ ಮರಿದೇವರಮಠ, ಎಂ.ಡಿ. ಬಟ್ಟೂರ, ಡಾ.ಎಸ್.ಸಿ. ಚವಡಿ, ರಾಮಣ್ಣಾ ಕಮಾಜಿ, ಅಶೋಕ ಸೋನಗೋಜಿ, ಫಕ್ಕೀರಯ್ಯ ಅಮೋಘಿಮಠ, ಮಹಾದೇವಪ್ಪ ಹುಬ್ಬಳ್ಳಿ, ಚಂಬಣ್ಣಾ ಲಕ್ಷ್ಮೇಶ್ವರ, ಗುರಣ್ಣಾ ಜವಳಿಶೆಟ್ರ, ಹೊನ್ನಪ್ಪ ಜೋಗಿ, ಮರಿಯಪ್ಪ ನಡಗೇರಿ, ಎ.ಡಿ. ಮುಜಾವಾರ, ಎಂ.ಎಂ. ಜಮಾಲಸಾಬನವರ, ಸಂಗೀತ ಸೇವೆ ವಿಜಯಲಕ್ಷ್ಮೀ ಹಿರೇಮಠ ಹಾಗೂ ಸರಕಾರಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು. ಮಾ 31ರಂದು ಸಂಜೆ 5ಕ್ಕೆ ಕಡುಬಿನ ಕಾಳಗ ನಂತರ ಅನುಭಾವ ಗೋಷ್ಠಿಯ ಸಾನಿಧ್ಯವನ್ನು ನವಲಗುಂದ ಗವಿಮಠದ ಬಸವಲಿಂಗ ಮಾಹಾಸ್ವಾಮಿಗಳು ವಹಿಸಿಕೊಳ್ಳುವರು. ಸಮ್ಮುಖವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಉಪನ್ಯಾಸಕರಾಗಿ ಜಂತ್ಲಿಶಿರೂರದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಅಧ್ಯಕ್ಷತೆಯನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಚ್. ಪಾಟೀಲ್, ಅತಿಥಿಗಳಾಗಿ ಬಿ.ವಿ. ಸುಂಕಾಪೂರ, ಸಂಜಯ ನೀಲಗುಂದ, ಅಶೋಕ ಹುಣಸೀಮರದ, ಮಹಾದೇವಪ್ಪಾ ಗಡಾದ, ಮನ್ಸೂರ ಹಣಗಿ, ಶಿವಬಸವ ಹಸಬಿ, ಹೊನ್ನಪ್ಪ ನೀಲಗುಂದ, ಡಿ.ಎಂ. ನಿಂಗಪ್ಪನವರ, ಗುಡದಪ್ಪ ಘಂಟಿ, ಸಂಗೀತ ಸೇವೆ ವಿಜಯಲಕ್ಷ್ಮಿ ಹಿರೇಮಠ ಸಂಗಡಿಗರಿಂದ, ರಸಮಂಜರಿ ಕಾರ್ಯಕ್ರಮ ಕೊಪ್ಪಳದ ಅಜೇಯ ಮ್ಯೂಜಿಕಲ್ ಅಕ್ಯಾಡಮಿ ಇವರಿಂದ ಜರುಗುವುದು ಎಂದು ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪೂರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.