ಇಂದು ಓಪನ್‌ ಡೇ ಕಾರ್ಯಕ್ರಮ: ಡಾ.ಶ್ರೀಧರ ಮಾಹಿತಿ

| Published : Mar 26 2025, 01:31 AM IST

ಸಾರಾಂಶ

ಜಿಎಂ ಪಾಲಿಟೆಕ್ನಿಕ್ ಮತ್ತು ಜಿಎಂ ವಿಶ್ವವಿದ್ಯಾಲಯದ ಬಿಒಕ್ ಕಾರ್ಯಕ್ರಮ, ಡಿಪ್ಲೊಮಾ ಕಾರ್ಯಕ್ರಮಗಳ ಬಗ್ಗ ಮಾಹಿತಿ ನೀಡಲು ಮಾ.26ರಂದು ಓಪನ್ ಡೇ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಾಲಿಟೆಕ್ನಿಕ್ ಪ್ರಾಚಾರ್ಯ, ಜಿಎಂ ವಿ.ವಿ. ವೃತ್ತಿಪರ ತರಬೇತಿ ಶಾಲೆ ನಿರ್ದೇಶಕ ಡಾ. ಬಿ.ಆರ್. ಶ್ರೀಧರ ಹೇಳಿದ್ದಾರೆ.

- ಜಿಲ್ಲೆಯ ಎಲ್ಲ ಐಟಿಐ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ । ಬಿಒಕ್‌ ವೃತ್ತಿಪರ ಕೋರ್ಸ್‌ಗಳ ಪರಿಚಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಎಂ ಪಾಲಿಟೆಕ್ನಿಕ್ ಮತ್ತು ಜಿಎಂ ವಿಶ್ವವಿದ್ಯಾಲಯದ ಬಿಒಕ್ ಕಾರ್ಯಕ್ರಮ, ಡಿಪ್ಲೊಮಾ ಕಾರ್ಯಕ್ರಮಗಳ ಬಗ್ಗ ಮಾಹಿತಿ ನೀಡಲು ಮಾ.26ರಂದು ಓಪನ್ ಡೇ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಾಲಿಟೆಕ್ನಿಕ್ ಪ್ರಾಚಾರ್ಯ, ಜಿಎಂ ವಿ.ವಿ. ವೃತ್ತಿಪರ ತರಬೇತಿ ಶಾಲೆ ನಿರ್ದೇಶಕ ಡಾ. ಬಿ.ಆರ್. ಶ್ರೀಧರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಗೆ ಓಪನ್ ಡೇ ಕಾರ್ಯಕ್ರಮ ಆರಂಭವಾಗಲಿದೆ. ಜಿಲ್ಲೆಯ ಎಲ್ಲ ಐಟಿಐ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ ಎಂದರು.

ಸಮಾಜದ ಪ್ರಸ್ತುತ ಅಗತ್ಯ ಪೂರೈಸಲು ವೃತ್ತಿ ಕೌಶಲ್ಯ ತರಬೇತಿಗೆ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆ ಬಿಒಕ್‌ ಪದವಿ 3 ವರ್ಷಗಳ- ಬ್ಯಾಚುಲರ್ ಆಫ್ ಓಕೇಷನಲ್ ಟ್ರೈನಿಂಗ್ ಕೋರ್ಸ್ ಜೊತೆಗೆ ಹೊಸ ವೃತ್ತಿಪರ ಕಾರ್ಯಕ್ರಮಗಳನ್ನು ತಮ್ಮ ಸಂಸ್ಥೆ ಪರಿಚಯಿಸುತ್ತಿದೆ ಎಂದು ಹೇಳಿದರು.

ವಿದ್ಯುತ್ ವಾಹನ ತಂತ್ರಜ್ಞಾನ, ಫ್ಯಾಷನ್ ತಂತ್ರಜ್ಞಾನ, ಉತ್ಪಾದನಾ ತಂತ್ರಜ್ಞಾನ, ಪಾಕ ಶಾಲೆ, ಅಡುಗೆ ತಂತ್ರಜ್ಞಾನ ಹೀಗೆ ಹೊಸ ಕೋರ್ಸ್‌ಗಳು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಅರಿಯಲು, ಕಲಿಯರು ಸಹಾಯಕವಾಗಲಿದೆ. ಇದು ಉದ್ಯೋಗ ಅವಕಾಶಗಳನ್ನೂ ಹೆಚ್ಚಿಸಲಿದೆ. ಈ ಕೋರ್ಸ್‌ಗಳಿಂದ ಕೈಗಾರಿಕೆಗಳಲ್ಲಿ ಉತ್ತಮ ಸಂಬಳದೊಂದಿಗೆ ನೇರ ಉದ್ಯೋಗಕ್ಕೂ ಅವಕಾಶವಿದೆ ಎಂದು ತಿಳಿಸಿದರು.

ಐಟಿಐ ವಿದ್ಯಾರ್ಥಿಗಳಿಗೆ ಪದವಿಯೊಂದಿಗೆ ಕೌಶಲ್ಯವುಳ್ಳ ಬಿಒಕ್‌ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಲು, ಮಾಹಿತಿ ನೀಡಲು ಕಾರ್ಯಕ್ರಮ ನಡೆಯಲಿದೆ. ಅಂದು ಸಂಪೂರ್ಣವಾಗಿ ಕೌಶಲ್ಯ ಅಭಿವೃದ್ಧಿ ಕೋರ್ಸ್ ಗಳಾದ ವಿವಿಧ ಬಿಒಕ್‌ ಪದವಿ ಕಾರ್ಯಕ್ರಮಗಳು, ಅವುಗಳ ಪ್ರಯೋಜನೆಗಳ ಕುರಿತು ಮಾಹಿತಿ ನೀಡಲಾಗುವುದು. ಜಿಎಂ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಕಾರ್ಯಕ್ರಮಗಳ ಬಗ್ಗೆ, ಲ್ಯಾಟರಲ್ ಎಂಟ್ರಿ ಪ್ರವೇಶಕ್ಕಾಗಿ ಬಡ್ತಿಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಜಿಎಂ ವಿ.ವಿ. ಪ್ರಚಾರ ಮತ್ತು ಮಾರುಕಟ್ಟೆ ವಿಭಾಗದ ಡೀನ್ ಟಿ.ಎಂ. ಗಂಗಾಧರ ಸ್ವಾಮಿ, ವ್ಯವಸ್ಥಾಪಕ ಡಿ.ಎನ್. ಬಸವರಾಜಪ್ಪ, ಡಾ. ಸಿ.ವಿ. ಶ್ರೀನಿವಾಸ, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ ಇತರರು ಇದ್ದರು.

- - - -24ಕೆಡಿವಿಜಿ61.ಜೆಪಿಜಿ:

ದಾವಣಗೆರೆಯಲ್ಲಿ ಸೋಮವಾರ ಜಿಎಂ ಪಾಲಿಟೆಕ್ನಿಕ್ ಪ್ರಾಚಾರ್ಯ ಜಿಎಂ ವಿ.ವಿ. ವೃತ್ತಿ ಪರ ತರಬೇತಿ ಶಾಲೆ ನಿರ್ದೇಶಕ ಡಾ. ಬಿ.ಆರ್. ಶ್ರೀಧರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.