ಇಂದು ಮಹಿಳಾ ದಸರಾ

| Published : Oct 08 2024, 01:02 AM IST

ಸಾರಾಂಶ

ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ 7ನೇ ವರ್ಷದ ಮಹಿಳಾ ದಸರಾ ನಡೆಯಲಿದೆ. ಮಹಿಳೆಯರಿಗಾಗಿಯೇ ವೈವಿಧ್ಯಮಯ ಸ್ಪರ್ಧೆ ಏರ್ಪಡಿಸಲಾಗಿದೆ.

ಮಡಿಕೇರಿ: ನಗರ ದಸರಾ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅ. 8 ರಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ 7 ನೇ ವರ್ಷದ ಮಹಿಳಾ ದಸರಾ ನಡೆಯಲಿದೆ.

ಬೆಂಗಳೂರಿನ ಹೇಮಾ ವಿನಾಯಕ್ ಪಾಟೀಲ್ ಅವರಿಂದ ದಾರದಲ್ಲಿ ದುರ್ಗೆಯ ಚಿತ್ರರಚನೆ, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಹಿಳೆಯರಿಗಾಗಿಯೇ ವೈವಿಧ್ಯಮಯ ಸ್ಪರ್ಧೆಗಳು, ಮನರಂಜನಾ ಕ್ರೀಡೆಗಳು ನಡೆಯಲಿದೆ.

ಸಂಜೆ 6 ಗಂಟೆಗೆ ಮಹಿಳಾ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸರಿಗಮಪ ಖ್ಯಾತಿಯ ಸುರೇಖಾ, ಪ್ರಥ್ವಿ ಭಟ್, ರೇಷ್ಮಾ, ಸ್ನೇಹಾ ನಂಜಪ್ಪ ಮತ್ತು ತಂಡದಿಂದ ಸಂಗೀತ ರಸಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.