ಇಂದು ವಿಶ್ವ ಹಿಂದೂ ಮಹಾಗಣಪತಿ ಶೋಭಾಯಾತ್ರೆ

| Published : Sep 21 2024, 01:57 AM IST

ಸಾರಾಂಶ

ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗು ಬಜರಂಗದಳ ಪ್ರತಿಷ್ಠಾಪಿಸಿರುವ 11 ನೇ ವರ್ಷದ ವಿಶ್ವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಶನಿವಾರ ಸೆ. 21 ರಂದು ನಡೆಯಲಿದ್ದು, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕೇಸರಿ ಬಾವುಟ, ಪ್ಲೆಕ್ಸ್‌ ಅಳವಡಿಕೆ, ವಿದ್ಯುತ್‌ ದೀಪಾಲಂಕಾರ ಸೇರಿದಂತೆ ಹಲವು ಸಿದ್ಧತೆಗಳು ನಡೆದಿವೆ.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗು ಬಜರಂಗದಳ ಪ್ರತಿಷ್ಠಾಪಿಸಿರುವ 11 ನೇ ವರ್ಷದ ವಿಶ್ವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಶನಿವಾರ ಸೆ. 21 ರಂದು ನಡೆಯಲಿದ್ದು, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕೇಸರಿ ಬಾವುಟ, ಪ್ಲೆಕ್ಸ್‌ ಅಳವಡಿಕೆ, ವಿದ್ಯುತ್‌ ದೀಪಾಲಂಕಾರ ಸೇರಿದಂತೆ ಹಲವು ಸಿದ್ಧತೆಗಳು ನಡೆದಿವೆ.

ವಿಶ್ವ ಹಿಂದೂ ಮಹಾಗಣಪತಿಗೆ ಕಳೆದ 14 ದಿನಗಳಿಂದ ಪೂಜೆ, ಪ್ರಸಾದ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 13ನೇ ದಿನವಾದ ಶುಕ್ರವಾರ ಗಣಹೋಮ ಹಾಗು ಇನ್ನಿತರೆ ಪೂಜಾಕಾರ್ಯಗಳು ನೆರವೇರಿದವು. ಭಕ್ತರಿಗೆ ಅನ್ನಂತರ್ಪಣೆ ನಡೆಯಿತು.

ಚಿತ್ರದುರ್ಗ ರಸ್ತೆಯ ಪೆಟ್ರೋಲ್‌ ಬಂಕ್‌ ನಿಂದ ಬೆಳಗ್ಗೆ 11ಕ್ಕೆ ಆರಂಭವಾಗುವ ಶೋಭಾಯಾತ್ರೆ ಪಟ್ಟಣದ ಮುಖ್ಯ ರಸ್ತೆ, ದಾವಣಗೆರೆ ವೃತ್ತ ಮಾರ್ಗವಾಗಿ ಶಿವಮೊಗ್ಗ ರಸ್ತೆ ಮೂಲಕ ಸಾಗಿ ತಾಲೂಕು ಪಂಚಾಯಿತಿ ಹಿಂಭಾಗದ ನೀರಿನ ತೊಟ್ಟಿಯಲ್ಲಿ ವಿಸರ್ಜನೆ ನಡೆಸಲಾಗುತ್ತದೆ. ಮೆರವಣಿಗೆಯಲ್ಲಿ ಅಂದಾಜು 30 ಸಾವಿರ ಜನ ಸೇರುವ ನೀರಿಕ್ಷೆ ಇದೆ.

ಶೋಭಯಾತ್ರೆಯಲ್ಲಿ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಕೃಷ್ಮ ಯಾದವಾನಂದ ಸ್ವಾಮೀಜಿ, ಶ್ರೀ ಈಶ್ವರ ನಂದಪುರಿ ಸ್ವಾಮೀಜಿ, ಶ್ರೀ ಪುರುಷೋತ್ತಮನಂದಪುರಿ ಸ್ವಾಮೀಜಿ, ಡಾ. ಶಾಸಕ ಎಂ. ಚಂದ್ರಪ್ಪ ಹಾಗು ಹಿಂದೂ ಪರಿಷತ್‌ ನ ದಕ್ಷಿಣ ಪ್ರಾಂತ ಧರ್ಮ ಪ್ರಸಾರ ಪ್ರಮುಖರಾದ ಕೆ.ಆರ್‌. ಸುನೀಲ್‌, ಮಂಜುನಾಥ್‌ ಸ್ವಾಮಿ, ಶಿವಮೊಗ್ಗ ವಿಭಾಗೀಯ ಕಾರ್ಯದರ್ಶಿ ಚಂದ್ರಶೇಖರ್‌ ಭಾಗವಹಿಸುವರು ಎಂದು ಗಣಪತಿ ಸಮಿತಿ ಅಧ್ಯಕ್ಷ ಹೀರಾಲಾಲ್‌ ತಿಳಿಸಿದ್ದಾರೆ.

ಶೋಭಯಾತ್ರೆಯ ಭದ್ರತೆಗೆ ಡಿವೈಎಸ್ಪಿ -1, ಸಿಪಿಐ -4, ಪಿಎಸ್‌ಐ -12, ಎ.ಎಸ್‌ ಐ -24, ಪೋಲಿಸ್‌ ಸಿಬ್ಬಂದಿ- 182, ಕೆಎಸ್‌ಆರ್‌ಪಿ ತುಗಡಿ -1, ಡಿ.ಆರ್‌- 4 ನಿಯೋಜಿಸಲಾಗಿದೆ ಎಂದು ಸಿಪಿಐ ಎಂ.ಬಿ ಚಿಕ್ಕಣ್ಣನವರ್‌ ತಿಳಿಸಿದ್ದಾರೆ.

ವಾಹನ ಸಂಚಾರ ಮಾರ್ಗ ಬದಲು - ಚಿತ್ರದುರ್ಗದಿಂದ ಬರುವ ವಾಹನಗಳು ಚಿತ್ರಹಳ್ಳಿ ಗೇಟ್‌ ನಿಂದ ವಿಭಾಗವಾಗಿ ಹೊಸದುರ್ಗಕ್ಕೆ ಎಚ್‌ ಡಿ. ಪುರ, ಮಾರ್ಗವಾಗಿ ಮತ್ತು ಶಿವಮೊಗ್ಗ ಕ್ಕೆ ಚಿಕ್ಕಜಾಜೂರು ಮಾರ್ಗವಾಗಿ ಹೊಳಲ್ಕೆರೆ ರೈಲೈ ಸ್ಟೇಷನ್ ಮುಖಾಂತರ ಹೋಗುವುದು. - ಹೊಸದುರ್ಗದಿಂದ ಬರುವ ವಾಹನಗಳು ಅವಿನಹಟ್ಟಿ ಮುಖಾಂತರ ಆರೇಹಳ್ಳಿ ರೈಲ್ವೆ ಸ್ಟೇಷನ್‌ ಮುಂಖಾತರ ಶಿವಮೊಗ್ಗಕ್ಕೆ ಹೋಗುವುದು.- ಶಿವಮೊಗ್ಗದಿಂದ ಬರುವ ವಾಹನಗಳು ಅರೇಹಳ್ಳಿ ರೈಲ್ವೆ ಸ್ಚೇಷನ್‌ ನಲ್ಲಿ ವಿಭಾಗವಾಗಿ ಚಿತ್ರದುರ್ಗಕ್ಕೆ ಹೋಗುವ ವಾಹನಗಳು ಪೂಣಜೂರು, ಮಲ್ಕಾಪುರ, ಚಿಕ್ಕಜಾಜೂರು , ಬಿ. ದುರ್ಗ ಭೀಮಸಮುದ್ರ ಮಾರ್ಗವಾಗಿ ಚಿತ್ರದುರ್ಗಕ್ಕೆ ಹೋಗುವುದ. ಹೊಸದುರ್ಗಕ್ಕೆ ಮಾಳೇನಹಳ್ಳಿ ಅವಳೇಹಟ್ಟಿ, ಹೊಳಲ್ಕೆರೆ ಮುಖಾಂತರ ಹೊಸದುರ್ಗಕ್ಕೆ ಹೋಗುವುದು.- ದಾವಣಗೆರ ಯಿಂದ ಬರುವ ವಾಹನಗಳು ಮಲ್ಕಾಪುರ, ಅರೇಹಳ್ಳಿ ರೈಲ್ವೆ ಸ್ಟೇಷನ್‌ ಮುಖಾಂತರ ಹೊಳಲ್ಕೆರೆಗೆ ಹೋಗುವುದು.