ಇಂದಿನ ಮಕ್ಕಳು ಮೊಬೈಲ್‌ ಗೀಳು ಬಿಟ್ಟು ಪುಸ್ತಕ ಹಿಡಿಯಲಿ: ಪ್ರಾಚಾರ್ಯ ಡಾ. ಎಸ್ ಪ್ರಭು

| Published : Nov 10 2025, 12:30 AM IST

ಇಂದಿನ ಮಕ್ಕಳು ಮೊಬೈಲ್‌ ಗೀಳು ಬಿಟ್ಟು ಪುಸ್ತಕ ಹಿಡಿಯಲಿ: ಪ್ರಾಚಾರ್ಯ ಡಾ. ಎಸ್ ಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕ ಓದಬೇಕು. ಜ್ಞಾನವೇ ಎಲ್ಲದಕ್ಕೂ ಮುಖ್ಯ ಎಂದು ಬೀದರಿನ ಸಿದ್ಧಾರ್ಥ ಕಾಲೇಜಿನ ಪ್ರಾಚಾರ್ಯ ಡಾ. ಎಸ್ ಪ್ರಭು ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಇಂದಿನ ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕ ಓದಬೇಕು. ಜ್ಞಾನವೇ ಎಲ್ಲದಕ್ಕೂ ಮುಖ್ಯ ಎಂದು ಬೀದರಿನ ಸಿದ್ಧಾರ್ಥ ಕಾಲೇಜಿನ ಪ್ರಾಚಾರ್ಯ ಡಾ. ಎಸ್ ಪ್ರಭು ಹೇಳಿದರು.

ನಗರದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಭಾಲ್ಕಿ ವತಿಯಿಂದ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಸ್ ಎಂ ಜನವಾಡಕರ್ ಅವರ ಬದುಕು ಬರಹ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸ್ ಎಂ ಜನವಾಡಕರ್ ಅವರು ಬೀದರ್‌ ಜಿಲ್ಲೆಯ ಹಿರಿಯ ಸಾಹಿತಿಗಳು, ಅವರನ್ನು ನೋಡಿಯೇ ನಾವು ಬೆಳೆದವರು. ಅಂತಹ ಸಾಹಿತಿಗಳನ್ನು ಪರಿಚಯಿಸಿದ್ದು ಉತ್ತಮ ಕಾರ್ಯಕ್ರಮ ಎಂದು ಹೇಳಿದರು.

ಯುವ ಸಾಹಿತಿ ಪವನ ಬಾಲೇರ ವಿಶೇಷ ಉಪನ್ಯಾಸ ನೀಡಿ, ಎಸ್ ಎಂ ಜನವಾಡಕರ್ ಅವರ ಬದುಕಿನುದ್ದಕ್ಕೂ ಮಾಡಿದ ಕನ್ನಡಪರ ಕಾರ್ಯಕ್ರಮಗಳನ್ನು ಸ್ಮರಿಸಿದರು.

ಹಿರಿಯ ಕಥೆಗಾರ ಗುರುನಾಥ ಅಕ್ಕಣ್ಣಾ ಮಾತನಾಡಿ, ಸಾಹಿತಿಗಳು ಸಮಾಜದ ಕಣ್ಣು. ಸೂರ್ಯ ನೋಡದೆ ಇರುವಂಹ ವಿಷಯಗಳನ್ನು ಸಾಹಿತಿಗಳು ನೋಡುತ್ತಾರೆ. ಸಮಾಜದ ಪರಿವರ್ತನೆ ಮಾಡುವಲ್ಲಿ ಅವರ ಪಾತ್ರ ಮುಖ್ಯ ಎಂದರು.

ಹಿರಿಯ ಸಾಹಿತಿ ಜನವಾಡಕರ ಆಶಯ ನುಡಿಗಳನ್ನಾಡಿ, ನನ್ನ ಬಗ್ಗೆ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಲು ಇಂತಹ ಸಂದರ್ಭಗಳು ಪ್ರೋತ್ಸಾಹ ನೀಡುತ್ತವೆ ಎಂದರು.

ಹಿರಿಯ ಚುಟುಕು ಸಾಹಿತಿಗಳಾದ ಪುಷ್ಪ ಕನಕ ಭಾಗವಹಿಸಿ ಮನುಷ್ಯನಿಗೆ ಹಾಸ್ಯವು ಅಷ್ಟೇ ಮುಖ್ಯ. ಸಾಹಿತಿಗಳು ಎಲ್ಲ ಪ್ರಕಾರ ಬರೆಯಲು ಸಾಧ್ಯವಿಲ್ಲ. ಅವರದೆ ಆದ ಇಷ್ಟದ ಕ್ಷೇತ್ರದಲ್ಲಿ ಮುಂದುವರೆಯುತ್ತಾರೆ. ಎಸ್ ಎಂ ಜನವಾಡಕರ್ ಅವರು ಬುದ್ಧ ಸಾಹಿತ್ಯವನ್ನು ಹೆಚ್ಚು ಹೆಚ್ಚು ಬರೆದಿದ್ದಾರೆ. ಅದು ಅವರ ಆಸಕ್ತಿ ಎಂದರು.

ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಭಾಲ್ಕಿಯ ಅಧ್ಯಕ್ಷರಾದ ಡಾ ಮಕ್ತುಂಬಿ ಎಂ ಮಾತನಾಡಿ, ಎಸ್ ಎಂ ಜನವಾಡಕರ್ ಅವರು ಅತಿ ಹೆಚ್ಚು ಸಾಹಿತ್ಯ ಬರೆದು ಸಮಾಜಕ್ಕೆ ನೀಡಿದ್ದಾರೆ. ಒಂದು ಕಾಲದಲ್ಲಿ ಬಡತನದ ಬೇಗೆಯಿಂದ ನೋವು ಉಂಡು ಇಂದು ಸಮಾಜದಲ್ಲಿ ಸಾಹಿತಿಗಳು ಎಂದು ಗುರುತಿಸಲ್ಪಡುವ ಸಾಧನೆ ಅವರು ಮಾಡಿದ್ದಾರೆ. ಅವರ ಸಾಧನೆ ಎಲ್ಲರಿಗೂ ಪ್ರೇರಣೆ ನೀಡಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ನಾಗಶಟ್ಟಪ್ಪ ಜೋತ್ಯಪ್ಪ , ಗುಂಡಪ್ಪ, ಸುಲೋಚನಾ, ಏಕನಾಥ ಪ್ರಿಯಾಂಕಾ ಮತ್ತಿತರರು ಇದ್ದರು.