ಸಾರಾಂಶ
ಇಂದಿನ ಜೀವನ ಶೈಲಿಯೇ ಮಹಿಳೆಯರ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ ಎಂದು ಬೆಂಗಳೂರು ಆಲ್ಟಿಯಸ್ ಆಸ್ಪತ್ರೆಯ ವೈದ್ಯ ಡಾ. ಶಿಜು ಹೇಳಿದರು.
ಕೊಳ್ಳೇಗಾಲ: ಇಂದಿನ ಜೀವನ ಶೈಲಿಯೇ ಮಹಿಳೆಯರ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ ಎಂದು ಬೆಂಗಳೂರು ಆಲ್ಟಿಯಸ್ ಆಸ್ಪತ್ರೆಯ ವೈದ್ಯ ಡಾ. ಶಿಜು ಹೇಳಿದರು.ಪಟ್ಟಣದ ರೋಟರಿ ಭವನ ಸಭಾಂಗಣದಲ್ಲಿ ರೋಟರಿ ಸಂಸ್ಥೆ ಮತ್ತು ಬೆಂಗಳೂರು ಆಲ್ಟಿಯಸ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಬೃಹತ್ ಸ್ತ್ರೀ ರೋಗಗಳು, ಗರ್ಭಕೋಶ ಕಾಯಿಲೆಗಳು, ಬಂಜೆತನ ಸಮಸ್ಯೆಗಳ ಉಚಿತ ತಪಾಸಣೆ, ಸ್ಕ್ಯಾನಿಂಗ್ ಮತ್ತು ಶಸ್ತ್ರ ಚಿಕಿತ್ಸಾ ಸೇವಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದೊಡ್ಡ ಸಮಸ್ಯೆಗಳು ಏನೇ ಇದ್ದರೂ ಪ್ರಾರಂಭದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಈ ಶಿಬಿರ ಅತ್ಯಂತ ಉಪಯುಕ್ತ ಶಿಬಿರವಾಗಿದೆ ಎಂದರು.ರೋಟರಿ ಅಧ್ಯಕ್ಷ ಮಹಾದೇವ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಉತ್ತಮ ಆರೋಗ್ಯ ದೊರಕಿಸುವ ಹಿನ್ನೆಲೆಯಲ್ಲಿ ಸಮಾಜ ಸೇವೆಯ ಕಾಳಜಿ ಉಳ್ಳ ಬೆಂಗಳೂರು ಆಲ್ಟಿಸ್ ಆಸ್ಪತ್ರೆಯ ಖ್ತಾತ ಸ್ರೀರೊಗ ತಜ್ಞರಾದ ಡಾ. ರಮೇಶ್ ಅವರು ಉಚಿತ ಶಿಬಿರಕ್ಕೆ ಅವಕಾಶ ನೀಡಿರುವುದು ನಿಜಕ್ಕೂ ಶ್ಲಾಘನೀಯ, ಮಹಿಳೆಯರು ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕು, ಸೇವಾ ಮನೋಭಾವ ರೋಟರಿ ದ್ಯೇಯವಾಗಿದೆ ಎಂದರು.
ರೋಟರಿ ಸದಸ್ಯ ವೆಂಕಟಾಚಲ, ರೋಟರಿ ಕಾರ್ಯ ದರ್ಶಿ ಬಿ.ಕೆ. ಪ್ರಕಾಶ್, ಅಸಿಸ್ಟೆಂಟ್ ಗವರ್ನರ್ ಬಸವರಾಜು, ಸರಸ್ವತಿ ಹೊನ್ನಪ್ಪ, ದೊರೆಸ್ವಾಮಿ, ಆಲ್ಟಿಯಸ್ ಆಸ್ಪತ್ರೆ ಡಾ. ಬಿಂದು, ಡಾ.ಲವ್ಲಿನ್, ಡಾ. ಶ್ರೀಷಾ, ಡಾ. ದಿವ್ಯ, ಪಿಆರ್ ಒ ಕಿರಣ್, ಅನಂತ್ ಇನ್ನಿತರಿದ್ದರು.