ಸಾರಾಂಶ
ತಾಲೂಕಿನ ದೇವರಗುಂಡಗುರ್ತಿ ಮೈಲಾರಲಿಂಗೇಶ್ವರ ಸಂಸ್ಥಾನದ ಶರಣ ಅಮಾತ್ತೆಯ್ಯ ತಾತ ಮತ್ತು ಶರಣ ಹೊನ್ನಯ್ಯ ತಾತನವರ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ನೂತನ ದೇವರ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಏ.18 ರಂದು ಜರುಗಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲೂಕಿನ ದೇವರಗುಂಡಗುರ್ತಿ ಮೈಲಾರಲಿಂಗೇಶ್ವರ ಸಂಸ್ಥಾನದ ಶರಣ ಅಮಾತ್ತೆಯ್ಯ ತಾತ ಮತ್ತು ಶರಣ ಹೊನ್ನಯ್ಯ ತಾತನವರ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ನೂತನ ದೇವರ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಏ.18 ರಂದು ಜರುಗಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ. ಈ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಮೈಲಾರಲಿಂಗೇಶ್ವರ ಶರಣ ಸಂಸ್ಥಾನ ದೇವರಗುಂಡಗುರ್ತಿಯ ಪೀಠಾಧಿಪತಿ ನಿಜಲಿಂಗ ತಾತನವರು ವಹಿಸಲಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ಮೈಸೂರಿನ ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನದ ಪೀಠಾಧಿಪತಿ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ವಹಿಸಲಿದ್ದಾರೆ. ಬ್ರಾಹ್ಮಿ ಮುಹೂರ್ತದಲ್ಲಿ ನೂತನ ವಿಗ್ರಹಗಳಿಗೆ ಶಾಸ್ತ್ರೋಕ್ತವಾಗಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ನಂತರ ನೂತನ ಶಿಲಾ ಮಂದಿರದ ಲೋಕಾರ್ಪಣೆ ಜರುಗುವುದು. ಮಧ್ಯಾಹ್ನ ಸಾಮೂಹಿಕ ವಿವಾಹ, ಧರ್ಮಸಭೆ, ಗೌರವ ಸಮರ್ಪಣೆ, ಶ್ರೀಗಳ ಆಶೀರ್ವವಚನ ಭಕ್ತರಿಗೆ ಮಹಾ ಪ್ರಸಾದ ವಿತರಣೆ ಜರುಗುವುದು.ಸಾನಿಧ್ಯವನ್ನು ಅಬ್ಬೆ ತುಮಕೂರಿನ ಸಿದ್ಧಸಂಸ್ಥಾನದ ಪೀಠಾಧಿಪತಿ ಡಾ.ಗಂಗಾಧರ ಮಹಾ ಸ್ವಾಮೀಜಿ, ಮೈಲಾಪುರದ ಶರಣಪ್ಪ ತಾತನವರು, ಹಲಕರ್ಟಿ ಹಿರೇಮಠ ಸಂಸ್ಥಾನದ ಅಭಿನವ ಮುನೀಂದ್ರ ಶಿವಾಚಾರ್ಯರು, ಗುರುಮಠಕಲ್ ಖಾಸಾಮಠದ ಗುರು ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿ, ಹೆಡಗಿಮದ್ರಾದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಮಹಾಸ್ವಾಮೀಜಿ, ನೀಲಗಲ್ ಮಹಾಸಂಸ್ಥಾನದ ಡಾ.ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮೀಜಿ, ಮುಂಡರಗಿ ಶಿವಣ್ಣ ತಾತ ಪಟ್ಟದ ದೇವರು, ದೇವರಗುಂಡಗುರ್ತಿಯ ಹೊನ್ನಲಿಂಗ ತಾತನವರು ಮುಂಡರಗಿ ಸದಾಶಿವಯ್ಯ ತಾತ ಪಟ್ಟದ ದೇವರು, ಮಾತ್ಪಳ್ಳಿ ಯಲ್ಲಮ್ಮ ದೇವಸ್ಥಾನದ ಕಾಡಪ್ಪ ಪೂಜಾರಿ, ಕೋನಳ್ಳಿ ಸಿದ್ದೇಶ್ವರ ಮಠದ ನಿತ್ಯಾನಂದ ಸ್ವಾಮೀಜಿ, ದೇವದುರ್ಗಾದ ಜಹೀರ ಪಾಷ ಖಾರ್ದಿ ಹಜರತ್ ಸೈಯಾದ್ರ, ದೇವಿಂದ್ರಯ್ಯ ಸ್ವಾಮಿ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಮಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕ್ರಪ್ಪ ಎಸ್. ಸಾಹುಕಾರ್ ಆಗಮನಿಸುವರು. ಮುಖ್ಯ ಅಥಿತಿಗಳಾಗಿ ಜಿಲ್ಲಾ ಉಸ್ತೂವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ, ಕಲಬರಗಿ ಸಂಸದ ಡಾ.ಉಮೇಶ್ ಜಾಧವ, ಮಾಜಿ ಸಚಿವ ವಿ.ಸೋಮಣ್ಣ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸುರಪುರ ಮಾಜಿ ಶಾಸಕ ರಾಜೂಗೌಡ, ಕಲಬುರಗಿ ಉದ್ಯಮಿದಾರ ರಾಧಕೃಷ್ಣ ದೊಡ್ಡಮನಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮುಂತಾದವರು ಆಗಮಿಸಿಸುವರು. ಎಂದು ಹೋನಗೇರಾ ಹೊನ್ನಯ್ಯ ತಾತನವರ ದೇವಸ್ಥಾನ ಸಮಿತಿ ತಿಳಿಸಿದೆ.