ಇಂದು ‘ಓಂ ಶಿವಂ’ ಚಿತ್ರರಾಜ್ಯಾದ್ಯಂತ ಬಿಡುಗಡೆ

| Published : Sep 05 2025, 01:00 AM IST

ಸಾರಾಂಶ

ದೀಪಾ ಫಿಲಂಸ್ ಅಡಿಯಲ್ಲಿ ಕೃಷ್ಣ ಕೆ.ಎನ್.ನಿರ್ಮಿಸಿ ಆಲ್ವಿನ್ ನಿರ್ದೇಶನದ ‘ಓಂ ಶಿವಂ’ ಚಿತ್ರ ಸೆ.5 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಆಲ್ವಿನ್ ತಿಳಿಸಿದರು.

ಶಿವಮೊಗ್ಗ: ದೀಪಾ ಫಿಲಂಸ್ ಅಡಿಯಲ್ಲಿ ಕೃಷ್ಣ ಕೆ.ಎನ್.ನಿರ್ಮಿಸಿ ಆಲ್ವಿನ್ ನಿರ್ದೇಶನದ ‘ಓಂ ಶಿವಂ’ ಚಿತ್ರ ಸೆ.5 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಆಲ್ವಿನ್ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಓಂ ಶಿವಂ ಚಿತ್ರವು ನೈಜ ಕತೆಯನ್ನಾಧರಿಸಿದ ರೊಮ್ಯಾಂಟಿಕ್ ಮತ್ತು ಆ್ಯಕ್ಷನ್ ಚಿತ್ರವಾಗಿದೆ. ಮಂಡ್ಯ, ಮೈಸೂರು, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಒಂಟಿ ಜೀವನ ನಡೆಸುತ್ತಿರುವವರ ಗೋಳು, ಮೊಬೈಲ್ ಬಳಕೆಯ ಸಾಧಕ- ಬಾಧಕಗಳು, ಹನಿಟ್ರ್ಯಾಪ್ ನಂತಹ ಘಟನೆಗಳ ಸುತ್ತ ಕತೆ ಇದೆ. ಇದೊಂದು ಆಕ್ಷನ್ ಚಿತ್ರವಾಗಿದ್ದು, ಕೌತುಕ ಕೂಡ ಇದೆ ಎಂದರು.ಭಾರ್ಗವ್ ಕೃಷ್ಣ ನಾಯಕನಾಗಿ, ವಿರಾನಿಕಾ ಶೆಟ್ಟಿ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ರವಿಕಾಳೆ, ರೋಬೋಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೃಷ್ಣ.ಕೆ.ಎನ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವೀರೇಶ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಡಾ.ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಕೌಸ್ ಪೀರ್ ಹಾಡುಗಳನ್ನು ಬರೆದಿದ್ದು, ನಾಲ್ಕು ಹಾಡುಗಳು ಇಂಪಾಗಿವೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಕೂಡ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಾಯಕ ನಟ ಭಾರ್ಗವ್ ಕೃಷ್ಣ, ನಾಯಕಿ ವಿರಾನಿಕಾ ಶೆಟ್ಟಿ, ನಿರ್ಮಾಪಕ ಕೆ.ಎನ್.ಕೃಷ್ಣ , ಚಿತ್ರದ ಪ್ರಮುಖ ಪಾತ್ರದ ಚೇತನಾ ಶೆಟ್ಟಿ ಇದ್ದರು.