ಇಂದು ಅಸೂಟಿಯಲ್ಲಿ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ, ಯುಗಮಾನೋತ್ಸವ

| Published : May 11 2025, 01:17 AM IST

ಇಂದು ಅಸೂಟಿಯಲ್ಲಿ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ, ಯುಗಮಾನೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆಆಲೂರ ಸಮೀಪದ ಅಸೂಟಿ ಗ್ರಾಮದ ಹಿರೇಮಠದ ವತಿಯಿಂದ 11ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಯುಗಮಾನೋತ್ಸವ ಕಾರ್ಯಕ್ರಮ ಜರುಗಲಿದೆ.

ಹೊಳೆಆಲೂರ: ಇಲ್ಲಿಗೆ ಸಮೀಪದ ಅಸೂಟಿ ಗ್ರಾಮದ ಹಿರೇಮಠದ ವತಿಯಿಂದ 11ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಯುಗಮಾನೋತ್ಸವ ಕಾರ್ಯಕ್ರಮ ಜರುಗಲಿದೆ.

ನೂತನ ಶ್ರೀಮತ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ ಪಾದಂಗಳವರ ಅಡ್ಡಪಲ್ಲಕ್ಕಿ ಮಹೋತ್ಸವ, ನಾಣ್ಯ, ಧಾನ್ಯ, ವಿಭೂತಿ, ರುದ್ರಾಕ್ಷಿ, ಕಾಲ್ಪಿ ಸಕ್ಕರೆಗಳಿಂದ ಪಂಚವಿಧ ತುಲಾಭಾರ ನಡೆಯಲಿದೆ.ನೂತನ ಹಿರೇಬೆಂಡಗೇರಿ ಹಿರೇಮಠದ ನೂತನ ಪಟ್ಟಾಧಿಕಾರಿಗಳಿಗೆ ಗೌರವ ಸಮರ್ಪಣೆ, ದಾಸೋಹ ಮಂದಿರದ ಭೂಮಿ ಪೂಜೆ, ಜಂಗಮ ವಟುಗಳಿಗೆ ಅಯ್ಯಾಚಾರ, ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಅಸೂಟಿ ಹಿರೇಮಠದ ರೇವಣಸಿದ್ದೇಶ್ವರ ಸ್ವಾಮಿಗಳು, ಗುರುಸಿದ್ದಯ್ಯಸ್ವಾಮಿಗಳ ನೇತೃತ್ವದಲ್ಲಿ ಜರುಗುತ್ತವೆ.

ಸಾನಿಧ್ಯವನ್ನು ಕೆರೂರ ಚರಂತಿಮಠದ ಶಿವಕುಮಾರ ಸ್ವಾಮಿಗಳು, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಯಲಬುರ್ಗಾ ಶ್ರೀಧರಮುರಡಿ ಹೀರೇಮಠದ ಬಸವಲಿಂಗ ಸ್ವಾಮಿಗಳು, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು, ಅವರಾಧಿಯ ಫಲಾರೇಶ್ವರಮಠದ ಶಿವಮೂರ್ತಿ ಶಿವಯೋಗಿಗಳು, ನವಲಗುಂದ ಗವಿಮಠದ ಬಸವಲಿಂಗ ಸ್ವಾಮಿಗಳು, ಜಿಗೇರಿಯ ಗುರುಸಿದ್ಧ ಶಿವಾಚಾರ್ಯ ಸ್ವಾಮಿಗಳು, ಬೆನಹಾಳ ಹಿರೇಮಠದ ಸದಾಶಿವ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಬದಾಮಿ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮಿಗಳು, ನರಗುಂದ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಕೋತಬಾಳ ಅಡವಿಸಿದ್ದೇಶ್ವರ ಮಠದ ಗಂಗಾಧರ ಸ್ವಾಮಿಗಳು, ಗುಳೇದಗುಡ್ಡದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು, ಹಿರೇಬೆಂಡೆಗೇರಿಯ ನೂತನ ಪಟ್ಟಾದ್ಯಕ್ಷರು ಇರುವರು.

ನೇತೃತ್ವವನ್ನು ಹಿರೇಬೆಂಡಿಗೇರಿಯ ಪುಟ್ಟಯ್ಯಸ್ವಾಮಿಗಳು, ಹೊಲಗೇರಿಯ ಗುರುದೇವಶಾಸ್ತ್ರಿಗಳು, ಯಚ್ಚರಸ್ವಾಮಿ ಮಠದ ಯಚ್ಚರೇಶ್ವರ ಸ್ವಾಮಿಗಳು, ಹುಲ್ಲೂರ ವೀರಯ್ಯಜ್ಜನವರು, ಮೆಣಸಗಿಯ ಮುದಿಯಪ್ಪಯ್ಯ ಸ್ವಾಮಿಗಳು, ಹೊಸಮಠ ಮಹಾಂತಯ್ಯ ಸ್ವಾಮಿಗಳು, ನಂದಿಕೇಶ್ವರದ ಶಂಕರಯ್ಯ ಶಾಸ್ತ್ರಿಗಳು, ಕರಮುಡಿ ವೀರಯ್ಯಸ್ವಾಮಿಗಳು, ವಿರಕ್ತಮಠ ಪ್ರಭಯ್ಯಸ್ವಾಮಿಗಳು, ಬೆಳವಣಿಕಿಯ ಆನಂದಸ್ವಾಮಿಗಳು, ಅರಳಿಕಟ್ಟಿಮಠದ ಅಡಿವಯ್ಯಸ್ವಾಮಿಗಳು, ಅಂದಾನಯ್ಯ ವಿರಕ್ತಮಠ ಇರುವರು.

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ನರಗುಂದ ಶಾಸಕ ಸಿ.ಸಿ. ಪಾಟೀಲ, ರೋಣ ಶಾಸಕ, ಕರ್ನಾಟಕ ರಾಜ್ಯ ಖನಿಜ ಅಭಿವೃದ್ದಿ ನಿಗಮ ಅಧ್ಯಕ್ಷ ಜಿ.ಎಚ್. ಪಾಟೀಲ, ನರಗುಂದ ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಕೆ.ಸಿ.ಸಿ ಬ್ಯಾಂಕ್ ಧಾರವಾಡ ಮಾಜಿ ಅಧ್ಯಕ್ಷ ಜಿ.ಪಿ. ಪಾಟೀಲ ಸೇರಿದಂತೆ ಮುಂತಾದವರು ಕಾರ್ಯ್ರಮದಲ್ಲಿ ಪಾಲ್ಗೊಳ್ಳುವರು.