ಇಂದು ದೇಶದ ಮೂಲೆಗಳಲ್ಲೂ ತಿರಂಗಾ ಹಾರಾಟ

| Published : Aug 15 2025, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪ ದೇಶದ ಪ್ರತಿಯೊಂದು ಮನೆಯ ಮೇಲೂ ತಿರಂಗ ಧ್ವಜ ಹಾರಾಡಬೇಕು ಎನ್ನುವುದು. ಸ್ವಾತಂತ್ರ್ಯ ದಿನದಂದು ಆರಂಭವಾದ ಈ ಅಭಿಯಾನದ ಉದ್ದೇಶ, ಪ್ರತಿಯೊಬ್ಬರಲ್ಲೂ ದೇಶಪ್ರೇಮ ಮೂಡಿಸುವುದಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ನಾಲತವಾಡಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪ ದೇಶದ ಪ್ರತಿಯೊಂದು ಮನೆಯ ಮೇಲೂ ತಿರಂಗ ಧ್ವಜ ಹಾರಾಡಬೇಕು ಎನ್ನುವುದು. ಸ್ವಾತಂತ್ರ್ಯ ದಿನದಂದು ಆರಂಭವಾದ ಈ ಅಭಿಯಾನದ ಉದ್ದೇಶ, ಪ್ರತಿಯೊಬ್ಬರಲ್ಲೂ ದೇಶಪ್ರೇಮ ಮೂಡಿಸುವುದಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ತಿರಂಗ ಹಿಡಿಯುವ ಯೋಗ್ಯತೆ ಇಲ್ಲ. ಪಂಜಾಬ ಮತ್ತು ಸಿಂಧ್ ಭಾಗವನ್ನು ಪಾಕಿಸ್ತಾನಕ್ಕೆ ನೀಡಿದ್ದು ಕಾಂಗ್ರೆಸ್‌. ಅವರ ಆಡಳಿತದಲ್ಲಿ ಕಾಶ್ಮೀರದ ಲಾಲ್ ಚೌಕದಲ್ಲಿ ತಿರಂಗ ಹಾರಾಡಲು ಅವಕಾಶ ಇರಲಿಲ್ಲ. ಇಂದು ಮೋದಿ ನೇತೃತ್ವದಲ್ಲಿ ದೇಶದ ಮೂಲೆಮೂಲೆಗಳಲ್ಲಿ ತಿರಂಗ ಹಾರಾಡುತ್ತಿದೆ ಎಂದರು.

ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಹಿಂದೆ ಸ್ವಾತಂತ್ರ್ಯ ದಿನಾಚರಣೆ ಸರ್ಕಾರಿ ಕಚೇರಿಗಳಿಗೆ ಮಾತ್ರ ಸೀಮಿತವಾಗಿತ್ತು. ಮೋದಿ ಆಡಳಿತದಲ್ಲಿ ಮನೆಮನೆಗೆ ತಿರಂಗ ತಲುಪಿದೆ. ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಸಿಸಿ ರಸ್ತೆ ಕಾಮಗಾರಿ ಕಾಂಗ್ರೆಸ್ ಆಡಳಿತದಲ್ಲಿ ಹಾಳಾಗಿದೆಯೆಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ, ನಡಹಳ್ಳಿ ಸೋಲಿನಿಂದ ಉತ್ತರ ಕರ್ನಾಟಕದ ಸಮಸ್ಯೆ ಪರಿಹಾರಕ್ಕೆ ಧಕ್ಕೆ ಉಂಟಾಗಿದೆ ಎಂದರು. ಪ್ರಧಾನಮಂತ್ರಿ ಮೋದಿ ಅವರ ಪೌರಕಾರ್ಮಿಕರ ಪಾದಪೂಜೆ ದೇಶಭಕ್ತಿಯ ಸಂಕೇತ ಎಂದು ಹೇಳಿದರು.

ಮಾಜಿ ಸೈನಿಕ ಪಿ.ಜಿ.ಬಿರಾದಾರ ಮಾತನಾಡಿ, ಹರ್ ಘರ್ ತಿರಂಗಾ ಅಭಿಯಾನ ಜನರಲ್ಲಿ ದೇಶಪ್ರೇಮ ಮೂಡಿಸಿದೆ. ದೇಶದ ಭದ್ರತೆಗೆ ಪ್ರಜೆಗಳ ಜಾಗೃತಿ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಮುನ್ನ ವೀರೇಶ್ವರ ವೃತ್ತದಿಂದ ಮೆರವಣಿಗೆ ನಡೆಯಿತು.

ರುದ್ರಮ್ಮ ಸ್ಥಾವರಮಠ ಪ್ರಾರ್ಥಿಸಿದರು, ಸಂಗಮೇಶ ಮೇಟಿ ಸ್ವಾಗತಿಸಿದರು, ಚೇತನ ಸಂಗಮ್ ಪ್ರಾಸ್ತಾವಿಕ ಮಾತನಾಡಿದರು. ಜಗದೀಶ ಪಂಪಣ್ಣನವರ ವಂಧಿಸಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ ನಾಡಗೌಡ, ಕೆಂಚಪ್ಪ ಬಿರಾದಾರ, ಎಂ.ಎಸ್.ಪಾಟೀಲ, ಎಂ.ಬಿ.ಅಂಗಡಿ, ಸೋಮನಗೌಡ ಬಿರಾದಾರ, ಮಾಜಿ ಸೈನಿಕ ಸಂಘದ ಅಧ್ಯಕ್ಷ ನಾನಪ್ಪ ನಾಯಕ, ಅರೇ ಸೇನಾ ಪಡೆ ಸಂಘದ ಉಪಾಧ್ಯಕ್ಷ ಸೋಮಶೇಖರ್ ಚೀರಲದಿನ್ನಿ, ರೇವಣಪ್ಪ ಚಲವಾದಿ, ಬಿ.ಎಸ್.ಯಾಳವಾರ, ವೀರನಾರಿಯರ ಸಂಘದ ಅಧ್ಯಕ್ಷೆ ರೇಖಾ ಕೊಂಡಗೂಳಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.