ಒಬ್ಬಟ್ಟಿನಿಂದ ಎಲ್ಲರೂ ಸೇರಿ ಜಾತ್ರೆ ಯಶಸ್ವಿಗೊಳಿಸಲು ನಿರ್ಧಾರ

| Published : Jan 26 2024, 01:48 AM IST

ಸಾರಾಂಶ

ಸಾವಳಗಿ: ಗ್ರಾಮದ ಆರಾಧ್ಯದೇವಿ ಶ್ರೀ ಅಂಬಾಭವಾನಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಪೂರ್ವಾಭಾವಿ ಸಭೆ ತಮ್ಮಣ್ಣಾ ಜೋಶಿ ನೇತೃತ್ವದಲ್ಲಿ ನಡೆಯಿತು.ಫೆ.16,17,18 ಮತ್ತು 19 ರಂದು ಅಂಬಾಭವಾನಿ ಜಾತ್ರೆ ಅದ್ಧೂರಿಯಾಗಿ ನಡೆಯಲಿದೆ. ಎಲ್ಲ ಸಮಾಜದ ಮುಖಂಡರು ತಮ್ಮ ಸಲಹೆ-ಸೂಚನೆ ನೀಡಬೇಕೆಂದರು.

ಕನ್ನಡಪ್ರಭ ವಾರ್ತೆ ಸಾವಳಗಿ

ಗ್ರಾಮದ ಆರಾಧ್ಯದೇವಿ ಶ್ರೀ ಅಂಬಾಭವಾನಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಪೂರ್ವಾಭಾವಿ ಸಭೆ ತಮ್ಮಣ್ಣಾ ಜೋಶಿ ನೇತೃತ್ವದಲ್ಲಿ ನಡೆಯಿತು.

ಫೆ.16,17,18 ಮತ್ತು 19 ರಂದು ಅಂಬಾಭವಾನಿ ಜಾತ್ರೆ ಅದ್ಧೂರಿಯಾಗಿ ನಡೆಯಲಿದೆ. ಎಲ್ಲ ಸಮಾಜದ ಮುಖಂಡರು ತಮ್ಮ ಸಲಹೆ-ಸೂಚನೆ ನೀಡಬೇಕೆಂದರು.

ಜೈನ ಸಮಾಜದ ಪಾರ್ಶ್ವನಾಥ ಉಪಾಧ್ಯ ಮಾತನಾಡಿ, ಜಾತ್ರೆ ಶಾಂತಿಯುತವಾಗಿ ನಡೆಯಲು ಎಲ್ಲರ ಸಲಹೆ, ಸಹಕಾರ ಅಗತ್ಯ ಎಂದರು.

ಪಂಚಮಸಾಲಿ ಸಮಾಜದ ಬಸುಗೌಡ ಹೊನವಾಡ ಮಾತನಾಡಿ, ಐದನೇ ವರ್ಷದ ಜಾತ್ರೆ ಅದ್ಧೂರಿಯಾಗಿ ನಡೆಯಬೇಕು ಎಂದರೆ ನಮ್ಮ-ನಿಮ್ಮ ಮನೆಯ ಹೆಣ್ಣು ಮಕ್ಕಳು, ಪರಸ್ಥಳದಲ್ಲಿರುವ ಹೆಣ್ಣು ಮಕ್ಕಳು ನಮ್ಮೂರಿಗೆ ಬಂದು ಜಾತ್ರೆಯಲ್ಲಿ ಭಾಗಿಯಾಗಬೇಕು, ಕುಂಭ ಹೊರಬೇಕು. ಬೇಧಭಾವ ಎನ್ನದೇ ಎಲ್ಲರೂ ಉತ್ಸಾಹದಿಂದ ಭಾಗಿಯಾದರೆ ಜಾತ್ರೆಗೆ ಮೆರಗು ಬರುತ್ತದೆ ಎಂದರು.

ಮುಸ್ಲಿಂ ಸಮಾಜದ ಎ.ಐ.ಮುಲ್ಲಾ ಮಾತನಾಡಿ, ಹಿಂದು-ಮುಸ್ಲಿಮರು ಸೇರಿಕೊಂಡು ಒಗ್ಗಟ್ಟಿನಿಂದ ಜಾತ್ರೆ ಮಾಡಿ ಇತರರಿಗೆ ಮಾದರಿಯಾಗೋಣ. ಈ ನಾಡಿನಲ್ಲಿ ಕೂಡಿ ಬಾಳುವ ಸಹಬಾಳ್ವೆಯ ಸಂಸ್ಕೃತಿ, ದ್ವೇಷ ಬಿಡು, ಪ್ರೀತಿ ಮಾಡು ಎನ್ನುವ ಸಂದೇಶ ಸಾರೋಣ ಎಂದರು.

ವಿಶ್ವಕರ್ಮ ಸಮಾಜದ ಪ್ರವೀಣ ಲೋಹಾರ ಮಾತನಾಡಿದರು. ಪ್ರತಿ ವರ್ಷದಂತೆ ಹೋಮ-ಹವನಗಳ ಮೂಲಕ ಮುತ್ತೈದೆಯರ ಉಡಿ ತುಂಬುವುದು, ಕುಂಭ ಮೆರವಣಿಗೆ, ಶಿವ ಜಯಂತಿ, ಧರ್ಮಸಭೆ ಮಾಡಲಾಗುತ್ತದೆ ಎಂದು ಕಮೀಟಿಯರು ಹೇಳಿದರು.

ಸುಶೀಲಕುಮಾರ ಬೆಳಗಲಿ, ಉಮೇಶ ಜಾಧವ, ಅರ್ಜುನ ಬಾಪಕರ, ಸದಾಶಿವ ದತಬಾಗೋಳ, ಅರ್ಜುನ ದಳಬಾಗೋಳ, ಧರ್ಮಣ್ಣಾ ಜಾಧವ, ಸಂಜೀವ ಮೋಹಿತೆ, ಕಲ್ಲಪ್ಪ ಹುನ್ನೂರ ಸೇರಿದಂತೆ ವಿವಿಧ ಸಮಾಜದ ಮುಖಂಡರು ಸಭೆಗೆ ಆಗಮಿಸಿದ್ದರು.