ಶೌಚಾಲಯ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ: ಕಟ್ಟಿಮನಿ

| Published : Nov 21 2023, 12:45 AM IST

ಶೌಚಾಲಯ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ: ಕಟ್ಟಿಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಶೌಚಾಲಯ ಬಳಸಿ ಸ್ವಚ್ಛತೆ ಕಾಪಾಡಬೇಕು. ಸಮುದಾಯದ ಶೌಚಾಲಯ, ವೈಯಕ್ತಿಕ ಶೌಚಾಲಯ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಪೌರಾಯುಕ್ತ ಜೀವನ ಕಟ್ಟಿಮನಿ ಹೇಳಿದರು. ನಗರದ ತಿಮ್ಮಾಪುರ ವೃತ್ತದಲ್ಲಿ ವಿಶ್ವ ಶೌಚಾಲಯ ಜಾಗೃತಿ ಮತ್ತು ಮ್ಯಾರಥಾನ್ಗೆ ಡೊಳ್ಳು ಬಡಿಯುವ ಮೂಲಕ ಚಾಲನೆ ನೀಡಿ, ಶೌಚಾಲಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹಲವಾರು ರೋಗಗಳು ಬರುವ ಸಂಭವವಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಶೌಚಾಲಯ ಬಳಸಿ ಸ್ವಚ್ಛತೆ ಕಾಪಾಡಬೇಕು. ಸಮುದಾಯದ ಶೌಚಾಲಯ, ವೈಯಕ್ತಿಕ ಶೌಚಾಲಯ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಪೌರಾಯುಕ್ತ ಜೀವನ್ ಕಟ್ಟಿಮನಿ ಹೇಳಿದರು.

ನಗರದ ತಿಮ್ಮಾಪುರ ವೃತ್ತದಲ್ಲಿ ವಿಶ್ವ ಶೌಚಾಲಯ ಜಾಗೃತಿ ಮತ್ತು ಮ್ಯಾರಥಾನ್‌ಗೆ ಡೊಳ್ಳು ಬಡಿಯುವ ಮೂಲಕ ಚಾಲನೆ ನೀಡಿ, ಶೌಚಾಲಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹಲವಾರು ರೋಗಗಳು ಬರುವ ಸಂಭವವಿದೆ. ಆದ್ದರಿಂದ ಜನ ಸಮುದಾಯಕ್ಕೆ ನೈರ್ಮಲ್ಯದ ಮಹತ್ವ ಹಾಗೂ ಜಾಗೃತಿ ಮೂಡಿಸಬೇಕಿದೆ. ಶೌಚಾಲಯ ಸ್ವಚ್ಛತೆ ಕಾಪಾಡದಿದ್ದರೆ ಸಾಂಕ್ರಾಮಿಕ ರೋಗಗಳು ಬರುತ್ತವೆ ಎಂದು ಹೇಳಿದರು.

ನಗರಸಭೆ ವ್ಯಾಪ್ತಿಯಲ್ಲಿ ವೈಯಕ್ತಿಕ ಶೌಚಾಲಯಗಳು ಬಳಕೆಯಾಗುತ್ತಿಲ್ಲ. ಇದರ ಕುರಿತು ತಿಳಿವಳಿಕೆ ಮೂಡಿಸುವ ಕೆಲಸವಾಗುತ್ತಿದೆ. ಶೌಚಾಲಯ ನಿರ್ಮಿಸಿಕೊಂಡವರು ಸಂಪೂರ್ಣವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಮನೆಗಳಲ್ಲಿ ಶೌಚಾಲಯಗಳ ಇದ್ದ ಹಾಗೆ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಸರಕಾರದ ಆದೇಶದ ಮೇರೆಗೆ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಸದ್ಬಳಕೆ ಆಗುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಲಾಭ ಫಲಾನುಭವಿಗಳಿಗೆ ತಲುಪಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಾ ಮಾತನಾಡಿದರು. ನಗರದ ವಾರ್ಡ್‌ಗಳಲ್ಲಿ ಪೌರಾಯುಕ್ತ ಜೀವನ್ ಕಟ್ಟಿಮನಿ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ, ಪೌರ ಕಾರ್ಮಿಕರು ಮ್ಯಾರಥಾನ್ ಮೂಲಕ ವಿಶ್ವ ಶೌಚಾಲಯ ಜಾಗೃತಿ ಮೂಡಿಸಿದರು.

ಸುರಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷೆ, ನಗರಸಭೆ ಸದಸ್ಯೆ ಸುವರ್ಣ ಎಲೆಗಾರ್, ಸಿದ್ರಾಮ ಎಲಿಗಾರ್ ಕಂದಾಯ ನಿರೀಕ್ಷಕರಾದ ವೆಂಕಟೇಶ್ ಕಲಬುರಗಿ, ಸಲೀಂ ಮಲ್ಲಿಕ್, ನಗರಸಭೆ ಜೆಇಇ ಮಹೇಶ್ ಚವ್ಹಾಣ, ಎಸ್‌ಐಗಳಾದ ಶಿವಪುತ್ರ, ಗುರುಸ್ವಾಮಿ, ಬಿಲ್ ಕಲೆಕ್ಟರ್‌ಗಳಾದ ದತ್ತು ನಾಗಭುಜಂಗಿ, ಬಾಬುರಾವ್, ಹನುಮಂತ ನಾಯಕ, ನಗರಸಭೆ ಸಿಬ್ಬಂದಿ ಸೇರಿದಂತೆ ಇತರರಿದ್ದರು.