ಸಾರಾಂಶ
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಪಟ್ಟಣದ ಬಸ್ಸು ನಿಲ್ದಾಣದ ಸಮೀಪವಿರುವ ಗ್ರಾಮ ಪಂಚಾಯಿತಿ ಸಾರ್ವಜನಿಕ ಶೌಚಾಲಯವನ್ನು ಬಂದ್ ಮಾಡಲಾಗಿದ್ದು ಇದರಿಂದಾಗಿ ಜನಸಾಮಾನ್ಯರು ಪರದಾಡುವಂತಾಗಿದೆ.
ನಾಪೋಕ್ಲು ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣವಾಗಿದ್ದು 27 ಗ್ರಾಮಗಳ ಜನರು ಪಟ್ಟಣಕ್ಕೆ ಸಂಪರ್ಕ ಹೊಂದಿದ್ದಾರೆ. ಇಲ್ಲಿಗೆ ಬರುವ ಸಾರ್ವಜನಿಕರಿಗೆ ಬಳಕೆಗೆ ಶೌಚಾಲಯವೇ ಇಲ್ಲದಂತಾಗಿದೆ. ಸಾರ್ವಜನಿಕರು ಕಳೆದ 4 ದಿನಗಳಿಂದ ಶೌಚಾಲಯ ಇಲ್ಲದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಿದ್ದು ಜೆಸಿಬಿ ಮೂಲಕ ಮಣ್ಣನ್ನು ಸಮತಟ್ಟು ಮಾಡುವ ಸಂದರ್ಭ ಶೌಚಾಲಯಕ್ಕೆ ಬರುವ ನೀರಿನ ಸಂಪರ್ಕವಿರುವ ಪೈಪ್ ಲೈನ್ ದುರಸ್ತಿಗೀಡಾಗಿರುವುದರಿಂದ ಸಮಸ್ಯೆ ಉದ್ಭವಿಸಿದೆ. ನೀರಿನ ಕೊರತೆಯಿಂದಾಗಿ ಶುಚಿತ್ವ ಕಾಪಾಡುವ ದೃಷ್ಟಿಯಿಂದ ಶೌಚಾಲಯಕ್ಕೆ ತೆರಳುವ ದಾರಿಯನ್ನು ಗ್ರಾಮ ಪಂಚಾಯಿತಿ ಬಾಕ್ಸ್‌ಗಳನ್ನು ಪೇರಿಸಿ ಇಟ್ಟು ಬಂದ್ ಮಾಡಲಾಗಿದ್ದು ಜನಸಾಮಾನ್ಯರ ಬವಣೆ ಪಡುವಂತಾಗಿದೆ. ಕೂಡಲೇ ಸಾರ್ವಜನಿಕ ಶೌಚಾಲಯವನ್ನು ಬಳಕೆಗೆ ಕಲ್ಪಿಸುವಂತಾಗಬೇಕು ಎಂದು ಸಾರ್ವಜನಿಕರು ಗ್ರಾಮ ಪಂಚಾಯಿತಿ ಯನ್ನು ಆಗ್ರಹಿಸಿದ್ದಾರೆ.ಪಂಚಾಯಿತಿ ಪಕ್ಕದಲ್ಲಿ ನಡೆದ ಖಾಸಗಿ ಅವರ ಕಟ್ಟಡ ಕಾಮಗಾರಿಯಿಂದಾಗಿ ಶೌಚಾಲಯಕ್ಕೆ ಸಂಪರ್ಕಿಸುವ ನೀರಿನ ಪೈಪ್ ಲೈನ್ ಒಡೆದು ಹೋಗಿ ಸಮಸ್ಯೆ ಎದುರಾಗಿ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಶೌಚಾಲಯ ಬಂದ್ ಮಾಡಲಾಗಿದೆ. ಗುರುವಾರದ ಒಳಗಡೆ ಪೈಪ್ ಲೈನ್ ದುರಸ್ತಿ ಪಡಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
-ವನಜಾಕ್ಷಿ ರೇಣುಕೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಪೋಕ್ಲು .