ರಸ್ತೆಯ ಮೇಲೆ ಬಚ್ಚಲ ಮನೆಯ ನೀರು: ಕೇಳೋರು ಯಾರು..?

| Published : Jul 24 2025, 01:45 AM IST

ಸಾರಾಂಶ

ತಾಲೂಕಿನ ಹೊಳವನಹಳ್ಳಿ ಬೋಮ್ಮಲದೇವಿಪುರ ಗ್ರಾಪಂಯ ಚಟ್ಟೇನಹಳ್ಳಿ ಗ್ರಾಮದಲ್ಲಿ ನರೇಗಾ ಕೆಲಸಗಳು ಮರೀಚಿಕೆಯಾಗಿದ್ದು ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಎಚ್.ಎನ್.ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಹೊಳವನಹಳ್ಳಿ ಬೋಮ್ಮಲದೇವಿಪುರ ಗ್ರಾಪಂಯ ಚಟ್ಟೇನಹಳ್ಳಿ ಗ್ರಾಮದಲ್ಲಿ ನರೇಗಾ ಕೆಲಸಗಳು ಮರೀಚಿಕೆಯಾಗಿದ್ದು ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಗ್ರಾಮೀಣ ಭಾಗದ ಹಳ್ಳಿಗಳ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ತರಲಾಗಿದ್ದು, ಅದನ್ನ ಅಧಿಕಾರಿಗಳು ಸದ್ಭಳಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ. ಚಟ್ಟೇನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೋಣಕಾಲು ಉದ್ದದ ಗುಂಡಿಗಳು ಬಿದಿದ್ದು, ಗ್ರಾಮದ ಒಳಗೆ ಸರಿಯಾದ ಚರಂಡಿ ಹಾಗೂ ರಸ್ತೆಗಳು ಇಲ್ಲದೆ ಮನೆಯ ಬಚ್ಚಲ ಮನೆಯ ನೀರು, ಪಾತ್ರೆ ಉಚ್ಚುವ ನೀರು, ಬಟ್ಟೆ ಒಗೆಯುವ ನೀರು ರಸ್ತೆಯ ಮಧ್ಯ ಭಾಗದಲ್ಲಿ ಹಾದು ಹೋಗುವುದರಿಂದ ಎಲ್ಲಾ ನೀರು ಬೋಮ್ಮಲದೇವಿಪುರ, ಬೈರೇನಹಳ್ಳಿ ಮುಖ್ಯ ರಸ್ತೆಗೆ ಬರುತ್ತಿದೆ. ಹೀಗೆ ನಿಲ್ಲುವ ನೀರಿನಿಂದಾಗಿ ಸೊಳ್ಳೆಗಳು ಹುಟ್ಟಿ ಜನರಿಗೆ ಕಾಯಿಲೆಗಳು ಬರುತ್ತಿವೆ. ಗುಂಡಿಯಿಂದ ಅಪಘಾತ ಚರಂಡಿಯ ಮೂಲಕ ಹೋಗಬೇಕಾದ ನೀರು ರಸ್ತೆಯಲ್ಲಿ ಬರುವುದರಿಂದ ಮುಖ್ಯ ರಸ್ತೆಯಲ್ಲಿ ನೀರು ನಿಂತು ಮೊಣಕಾಲು ಉದ್ದ ಗುಂಡಿ ಬಿದ್ದಿವೆ. ಇದರಿಂದ ಪ್ರತಿನಿತ್ಯ ಸಂಚಾರ ಮಾಡುತ್ತಿವ ವಾಹನಗಳಿಗೆ ತೊಂದರೆ ಉಂಟು ಮಾಡಿದೆ. ಈ ಗುಂಡಿಯಿಂದ ಸಾಕಷ್ಟು ಅಪಘಾತಗಳು ಸಂಭವಿಸಿ ಕೈಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ಉದಾರಣೆಗಳು ಇದೆ ಎಂದು ಸಾರ್ವಜನಿಕರು ದೂರಿದರು.ನರೇಗಾ ಯೋಜನೆ ಕಾಮಗಾರಿ ಮಾಡಲು ಮೀನಾಮೇಷಗ್ರಾಮೀಣ ಭಾಗದ ಹಳ್ಳಿಗಳ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಚರಂಡಿ, ಕಾಂಕ್ರಿಟ್ ರಸೆ ಮಾಡಲು ಅವಕಾಶ ಇದ್ದು, ಚಟ್ಟೇನಹಳ್ಳಿ ಗ್ರಾಮದ ಕೆಲವು ಬೀದಿಗಳಲ್ಲಿ ಚರಂಡಿ ಮಾಡದೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿ ರಸ್ತೆಯಲ್ಲಿ ನೀರನ್ನು ತುಳಿದುಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನೂ ಅನೇಕ ಬೀದಿಗಳಲ್ಲಿ ರಸ್ತೆ ಹಾಗೂ ಚರಂಡಿಯನ್ನು ಮಾಡದೆ ಮಣ್ಣಿನ ದಾರಿಯಲ್ಲಿ ಓಡಾಟ ಮಾಡುತ್ತಿದ್ದಾರೆ. ಕೋಟ್;- ನಮ್ಮ ಮನೆಯ ಮುಂದೆ ಚರಂಡಿ ಮಾಡುವಂತೆ ಅನೇಕ ಬಾರಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ನಾನ ಮಾಡಿದ ನೀರು, ಪಾತ್ರೆ ತೊಳೆದ ನೀರು ರಸ್ತೆಯಲ್ಲಿ ಹೋಗುತ್ತವೆ. ಗ್ರಾಮದ ಮರಿಗಮ್ಮ ದುರ್ಗಯಮ್ಮ ದೇವರುಗಳ ಮೆರವಣಿಗೆ ಮಾಡಲಾಗಿತ್ತು. ಇದೆ ರಸ್ತೆಯಲ್ಲಿ ದೇವರ ಮೆರವಣಿಗೆ ಮಾಡಿದ್ದಾರೆ. ಅದಷ್ಟು ಬೇಗ ಚರಂಡಿ ವ್ಯವಸ್ಥೆ ಮಾಡಿ. - ಗಂಗಮ್ಮ ಚಟ್ಟೇನಹಳ್ಳಿ ಗ್ರಾಮಸ್ಥೆ.

ಚಟ್ಟೇನಹಳ್ಳಿ ಗ್ರಾಮದ ಕೆಲವು ರಸ್ತೆಯಲ್ಲಿ ಬಂಡೆಗಳು ಇರುವುದರಿಂದ ಚರಂಡಿ ಮಾಡಲು ಸಾಧ್ಯವಾಗಿಲ್ಲ, ಈಗಾಗಲೇ ೪ ರಸ್ತೆಯಲ್ಲಿ ಚರಂಡಿ ಕೆಲಸ ಮಾಡಲಾಗಿದ್ದು, ಈ ಬಾರಿ ಚರಂಡಿ ಹಾಗೂ ಸಿಸಿ ರಸ್ತೆ ಮಾಡಲು ನರೇಗಾ ಯೋಜನೆಯಲ್ಲಿ ಕ್ರಿಯಾ ಯೋಜನೆ ತಯಾರು ಮಾಡಲಾಗಿದೆ. ೨೦ ಶಿವಕುಮಾರ್ ಪಿಡಿಒ ಬೋಮ್ಮಲದೇವಿಪುರ.