ತೋಕೂರು ಜೇನು ಹುಳು ಸಾಕಾಣಿಕೆ, ಜಲ ಸಂರಕ್ಷಣೆ ಮಾಹಿತಿ ಶಿಬಿರ

| Published : Oct 21 2024, 12:46 AM IST / Updated: Oct 21 2024, 12:47 AM IST

ತೋಕೂರು ಜೇನು ಹುಳು ಸಾಕಾಣಿಕೆ, ಜಲ ಸಂರಕ್ಷಣೆ ಮಾಹಿತಿ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್‌ ಕ್ಲಬ್‌ ನ ಸಭಾಭವನದಲ್ಲಿ ಜರುಗಿದ ಜಲ ಸಂರಕ್ಷಣೆ ಮತ್ತು ಜೇನು ಸಾಕಾಣಿಕೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಜಲ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪರಿತಪಿಸಬೇಕಾಗುತ್ತದೆ. ಈಗಾಗಲೇ ಭೂಮಿಯ ಅಡಿಯ ಭಾಗದಲ್ಲಿ ನೀರಿನ ಮಟ್ಟ ಕುಸಿದಿದೆ. ಮಳೆಯ ನೀರನ್ನು ಶೇಖರಿಸಿ ಇಂಗಿಸಿ ಮರು ಬಳಕೆ ಮಾಡಬೇಕು ಎಂದು ಮಂಗಳೂರಿನ ಇಂಜಿನಿಯರ್ ಹಾಗೂ ಜಲ ಸಂರಕ್ಷಣೆಯ ತಜ್ಞ ಅಶೋಕ್ ಕುಮಾರ್ ಹೇಳಿದರು.

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್‌ ಕ್ಲಬ್‌ ನ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬಜಪೆ, 10ನೇ ತೋಕೂರು ಮತ್ತು ಬೆಳ್ಳಾಯರು ಒಕ್ಕೂಟ, ಪಡುಪಣಂಬೂರು,ಪಡುಪಣಂಬೂರಿನ ಮೂಲ್ಕಿ ಅರಮನೆ ವೆಲ್ಪೇರ್ ಚಾರಿಟೇಬಲ್ ಟ್ರಸ್ಟ್ , ರಾಜ್ಯ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ ತೋಕೂರು, ತೋಟಗಾರಿಕೆ ಇಲಾಖೆ ಜಿ.ಪಂ. ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಲ ಸಂರಕ್ಷಣೆ ಮತ್ತು ಜೇನುಹುಳ ಸಾಕಾಣಿಕೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನೆಯ ಚಾವಡಿಯ ನೀರನ್ನು ಬಾವಿಗಳಲ್ಲಿ ಸೋಸಿ ಇಂಗಿಸಬೇಕಾಗಿದೆ. ಇದರಿಂದ ನೀರಿನ ಮಟ್ಟ ಏರಿಕೆಯಾಗುತ್ತದೆ. ಚಕ್ ಡ್ಯಾಮ್ ಇಂಗು ಗುಂಡಿಯ ಮೂಲಕವು ನೀರನ್ನು ಭೂಮಿಗೆ ಇಂಗಿಸಬೇಕು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಐತಪ್ಪ ಪೂಜಾರಿ ಮಾತನಾಡಿ, ಪ್ರತಿ ಮನೆಯಲ್ಲೂ ಜೇನು ಸಾಕಾಣಿಕೆ ಮಾಡುವ ಅವಕಾಶ ವಿದ್ದು ಅದರಿಂದ ಲಾಭ ಗಳಿಸಬಹುದು. ಜೇನು ಸಾಕಾಣಿಕೆ ತೋಟಗಾರಿಕೆ ಮತ್ತು ಕೃಷಿಗೆ ಪೂರಕವಾಗಿದೆ. ತರಕಾರಿ ಬೆಳೆ ಬೆಳಯುವಾಗ ಜೇನು ಹುಳಗಳು ಇದ್ದರೆ ಪರಾಗಸ್ಪರ್ಷದ ಮೂಲಕ ಕಾಯಿ ಕಟ್ಟುವಿಕೆ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದು ಹೇಳಿದರು.

ಜಿ.ಪಂ. ತೋಟಗಾರಿಕೆ ಇಲಾಖೆಯ ತೋಟಗಾರಿಕಾ ಅಧಿಕಾರಿ ಯುಗೇಂದ್ರ ತೋಟಗಾರಿಕೆ ಇಲಾಖೆಯ ಮೂಲಕ ಸಿಗುವ ಮಾಹಿತಿ ನೀಡಿದರು. ಸೋರ್ಟ್ಸ್‌ ಕ್ಲಬ್ ಅಧ್ಯಕ್ಷ ದೀಪಕ್ ಸುವರ್ಣ ಅಧ್ಯಕ್ಷತೆ ವಹಿಸಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾಯರು ಒಕ್ಕೂಟದ ಅಧ್ಯಕ್ಷೆ ಚಂಪಾ, ತೋಕೂರು ಒಕ್ಕೂಟದ ಅಧ್ಯಕ್ಷ ಮನೋಹರ ಜಿ. ಕುಂದರ್ , ಕ್ಲಬ್ಬಿನ ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಮಹಿಳಾ ಕಾರ್ಯಾಧ್ಯಕ್ಷೆ ಯಶೋದಾ ದೇವಾಡಿಗ, ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸೇವಾ ಪ್ರತಿನಿದಿ ಸವಿತಾ ಶರತ್ ಸ್ವಾಗತಿಸಿದರು. ಚಂದ್ರ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.