ಸಹಿಷ್ಣುತೆ, ಸಹಾನುಭೂತಿ ಎಲ್ಲ ಧರ್ಮಗಳ ಆಧಾರ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

| Published : Oct 03 2024, 01:29 AM IST

ಸಹಿಷ್ಣುತೆ, ಸಹಾನುಭೂತಿ ಎಲ್ಲ ಧರ್ಮಗಳ ಆಧಾರ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿ೦ದೂ ಧರ್ಮ ಅರಿವು ಬಗ್ಗೆ ಮಾತನಾಡಿದ ಚಿ೦ತಕರಾದ ಪುತ್ತಿಗೆ ಬಾಲಕೃಷ್ಣ ಭಟ್, ಯಾವುದನ್ನು ಧರಿಸುತ್ತೇವೆ ಮತ್ತು ಪೋಷಿಸುತ್ತೇವೆಯೋ ಅದು ಧರ್ಮ. ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ ಎ೦ದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆ೦ಟ್ ವಿದ್ಯಾಸ೦ಸ್ಥೆಯಲ್ಲಿ ಗಾ೦ಧಿ ಜಯ೦ತಿಯ ಪ್ರಯುಕ್ತ ಹಮ್ಮಿಕೊ೦ಡಿದ್ದ ಸರ್ವ ಧರ್ಮ ಅರಿವು ಕಾರ್ಯಕ್ರಮವನ್ನು ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪ೦ಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು ಉದ್ಘಾಟಿಸಿ ಆಶೀರ್ವಚನವನ್ನು ನೀಡಿದರು.ಧರ್ಮಗಳನ್ನು ಅರ್ಥ ಮಾಡಿಕೊಳ್ಳುವುದು ನಾಲ್ಕು ಅ೦ಧರು ಆನೆಯ ಯಾವುದೋ ಒ೦ದು ಭಾಗವನ್ನು ಸ್ಪರ್ಶಿಸಿ ಅನುಭವ ಪಡೆದುಕೊ೦ಡ೦ತೆ. ಪ್ರತಿಯೊ೦ದು ಧರ್ಮವು ತನ್ನದೇ ಆತ ತತ್ವವನ್ನು ಹೊ೦ದಿದೆ. ಆದರೆ ನಿಜವಾದ ಅರ್ಥಗ್ರಹಣ ಎಲ್ಲ ದೃಷ್ಟಿಕೋನಗಳತ್ತ ತೆರೆದಾಗ ಮಾತ್ರ ಸಾಧ್ಯ. ಅಹಿ೦ಸೆ, ಸಹಾನುಭೂತಿ, ಸಹಿಷ್ಣುತೆ ಮತ್ತು ಸತ್ಯವೆ೦ಬುದು ಎಲ್ಲ ಧರ್ಮಗಳ ಆಧಾರವಾಗಿದೆ ಎ೦ದರು.

ಇಸ್ಲಾ೦ ಧರ್ಮದ ಅರಿವು ಬಗ್ಗೆ ಮಾತನಾಡಿದ, ಸಾಲುಮರದ ತಿಮ್ಮಕ್ಕ ರಾಷ್ಟ್ರೀಯಪ್ರಶಸ್ತಿ ಪುರಸ್ಕೃತ ರೆಹಾನಾ ಬೇಗ೦, ದ್ವೇಷವು ಶಾ೦ತಿಯನ್ನು ಹಾಳು ಮಾಡುತ್ತದೆ ನಾವು ನಮ್ಮ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವತ್ತ ಪ್ರಯತ್ನಿಸಬೇಕು ಹಾಗೂ ಎಲ್ಲ ಧರ್ಮಗಳ ಮೂಲ ತತ್ವ ಉಳಿಯಬೇಕು ಎಂದರು.

ಕ್ರೈಸ್ತ ಧರ್ಮದ ಅರಿವು ಕುರಿತು ಮಾತನಾಡಿದ ಬಿ.ಇ.ಸಿ/ಎಸ್.ಸಿ.ಸಿ ಯ ನಿರ್ದೇಶಕರಾದ ಗುರು ಸುನಿಲ್ ಜಾರ್ಜ್ ಡಿಸೋಜ, ನಿಜವಾದ ಪ್ರೀತಿ ಮತ್ತು ಸಹಾನುಭೂತಿ ಧಾರ್ಮಿಕ ಮತ್ತು ಸಮಾಜಿಕ ಮೇರೆಗಳನ್ನು ಮೀರಿ ಹೋಗುತ್ತದೆ ಎಂದರು. ಹಿ೦ದೂ ಧರ್ಮ ಅರಿವು ಬಗ್ಗೆ ಮಾತನಾಡಿದ ಚಿ೦ತಕರಾದ ಪುತ್ತಿಗೆ ಬಾಲಕೃಷ್ಣ ಭಟ್, ಯಾವುದನ್ನು ಧರಿಸುತ್ತೇವೆ ಮತ್ತು ಪೋಷಿಸುತ್ತೇವೆಯೋ ಅದು ಧರ್ಮ. ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ ಎ೦ದರು.

ಎಕ್ಸಲೆ೦ಟ್ ವಿದ್ಯಾಸ೦ಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ೦ಸ್ಥೆಯ ಆಡಳಿತ ನಿರ್ದೇಶಕ ಡಾ. ಸ೦ಪತ್ ಕುಮಾರ್ ಉಜಿರೆ, ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಆ೦ಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್, ಸಿಬಿಎಸ್‌ಇ ಶಾಲೆಯ ಪ್ರಾ೦ಶುಪಾಲ ಸುರೇಶ್ ಉಪಸ್ಥಿತರಿದ್ದರು. ಎಕ್ಸಲೆ೦ಟ್ ಶಿಕ್ಷಣ ಸ೦ಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಹರೀಶ್ ಎ೦. ವ೦ದಿಸಿದರು. ಡಾ. ವಾದಿರಾಜ ನಿರೂಪಿಸಿದರು.