ಸಾರಾಂಶ
ಶೃಂಗೇರಿ, ಟಾಲಿವುಡ್ ನಲ್ಲಿ ಮಿಂಚುತ್ತಿರುವ ಶೃಂಗೇರಿಯ ಪ್ರತಿಭಾವಂತ ಟಾಲಿವುಡ್ ನಟಿ ನಭಾ ನಟೇಶ್ ತನ್ನ ನಿವಾಸದಲ್ಲಿ ಕುಟುಂಬವರ್ಗದವರೊಡನೆ ಗೌರಿ ಗಣೇಶ ಹಬ್ಬ ಆಚರಿಸಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ , ಶೃಂಗೇರಿ
ಟಾಲಿವುಡ್ ನಲ್ಲಿ ಮಿಂಚುತ್ತಿರುವ ಶೃಂಗೇರಿಯ ಪ್ರತಿಭಾವಂತ ಟಾಲಿವುಡ್ ನಟಿ ನಭಾ ನಟೇಶ್ ತನ್ನ ನಿವಾಸದಲ್ಲಿ ಕುಟುಂಬವರ್ಗದವರೊಡನೆ ಗೌರಿ ಗಣೇಶ ಹಬ್ಬ ಆಚರಿಸಿ ಸಂಭ್ರಮಿಸಿದರು.2015 ರಲ್ಲಿ ತೆರೆಕಂಡ ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಪಟಾಕ ಪಾರ್ವತಿ ಪಾತ್ರದ ಮೂಲಕ ಸಿನಿ ವೀಕ್ಷಕರ ಗಮನ ಸೆಳೆದ ಇವರು ಸಿನಿಮಾ ಅಭಿಮಾನಿಗಳಲ್ಲಿ ಪಟಾಕಾ ಪಾರ್ವತಿ ಎಂದೇ ಗುರುತಿಸಿಕೊಂಡಿದ್ದಾರೆ. 2017 ರಲ್ಲಿ ಇವರ ನಟನೆಯ ಲೀ ಚಿತ್ರ ತೆರೆಕಂಡಿತು.ಇದೇ ವರ್ಷ ಸಾಹೇಬಾ ಚಿತ್ರ ಕೂಡ ತೆರೆಕಂಡಿತು.
ಕನ್ನಡ ಚಿತ್ರರಂಗದಿಂದ ನಟನಾ ಪಯಣ ಆರಂಭಿಸಿದ ನಭಾ ನಟೇಶ್ ಈಗ ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. 2018 ರಲ್ಲಿ ನಾನು ದೋಚು ಕುಂಡುವಟೆ ಮೂಲಕ ತೆಲುಗು ಚಿತ್ರ ರಂಗ ಪ್ರವೇಶಿಸಿದರು. 2019 ರಲ್ಲಿ ಸೂಪರ್ ಹಿಟ್ ಚಿತ್ರ ಇಸ್ಮಾರ್ಟ್ ಶಂಕರ್ ತೆರೆಕಂಡಿತು. ಈ ಚಿತ್ರದಲ್ಲಿ ಅವರ ಚಾಂದಿನಿ ಪಾತ್ರ ಸಿನಿ ವೀಕ್ಷಕರ ಗಮನ ಸೆಳೆಯಿತು. ಅವರಲ್ಲಿ ಚಿತ್ರಪ್ರೇಮಿಗಳು ಟಾಲಿವುಡ್ ನಲ್ಲಿ ಇಸ್ಮಾರ್ಟ್ ಪೋರಿ ಎಂದೇ ಗುರುತಿಸುತ್ತಾರೆ. ಡಿಸ್ಕೋ ರಾಜಾ, ಸೋಲೋ ಬ್ರಾತುಕೆ ಸೋ ಬೆಟರ್, ಮಾಇಸ್ಟ್ರೋ, ಡಾರ್ಲಿಂಗ್ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಲಿ ಸ್ವಯಂಭೂ, ನಾಗಬಂಧಮ್ ಪ್ಯಾನ್ ಇಂಡಿಯಾ ಸಿನೇಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗ ಜೊತೆ ಚೆಲುವು, ಗ್ಲಾಮರ್, ಪ್ಯಾಷನ್ ನಿಂದ ಗಮನ ಸೆಳೆಯುವ ನಭಾ ಔಟ್ ಲುಕ್ ಇಂಡಿಯಾದ 2024 ರ ಸ್ಟೈಲ್ ಐಕಾನ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. 2013 ರ ಫೆಮಿನಾ ಮಿಸ್ ಇಂಡಿಯಾ ಸೌತ್ ಪ್ರಶಸ್ತಿ ಕೂಡಗಳಿಸಿದ್ದರು.ಇವರ ಸಹೋದರ ನಹುಷ್ ಚಕ್ರವರ್ತಿ ಕೂಡ ಸ್ಯಾಂಡಲ್ ವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.ಶೃಂಗೇರಿಯ ಮಾನಗಾರಿನಲ್ಲಿರುವ ತನ್ನ ಮನೆಗೆ ಭೇಟಿ ನೀಡಿ ಗೌರಿ ಗಣೇಶ ಹಬ್ಬ ಆಚರಿಸಿ ಸಂಭ್ರಮಿಸಿದ ಸಂದರ್ಭದಲ್ಲಿ ತಂದೆ ನಟೇಶ್, ತಾಯಿ ಭಾಗ್ಯಲಕ್ಷ್ಮಿ, ಸಹೋದರ ಹಾಗೂ ಸ್ಯಾಂಡಲ್ ವುಡ್ ನಟ ನಹುಷ್ ಚಕ್ರವರ್ತಿ ಇದ್ದರು.
28 ಶ್ರೀ ಚಿತ್ರ 4-ಟಾಲಿವುಡ್ ನಟಿ ನಭಾ ನಟೇಶ್ ಶೃಂಗೇರಿಯಲ್ಲಿ ಕುಟುಂಬದವರೊಂದಿಗೆ ಗೌರಿ ಗಣೇಶ ಹಬ್ಬ ಆಚರಿಸಿ ಸಂಭ್ರಮಿಸಿದರು.