ನಾಳೆ ಬಸವ ಜಯಂತ್ಯುತ್ಸವ: ಬಸವಪ್ರಭು ಶ್ರೀ ಮಾಹಿತಿ

| Published : May 09 2024, 01:05 AM IST

ನಾಳೆ ಬಸವ ಜಯಂತ್ಯುತ್ಸವ: ಬಸವಪ್ರಭು ಶ್ರೀ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ 1913ರಲ್ಲಿ ಬಸವ ಜಯಂತಿ ಆಚರಿಸಿದ ಹಿನ್ನೆಲೆಯಲ್ಲಿ ಮೇ 10ರಂದು ನಡೆಯುವ ಬಸವ ಜಯಂತ್ಯುತ್ಸವ ಅಂಗವಾಗಿ ವಿರಕ್ತ ಮಠದಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ನುಡಿದಿದ್ದಾರೆ.

- ಬಸವಣ್ಣ ಭಾವಚಿತ್ರ, ವಚನ ಗ್ರಂಥಗಳ ಮೆರವಣಿಗೆ । ನವಜಾತ ಶಿಶುಗಳಿಗೆ ನಾಮಕರಣ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ 1913ರಲ್ಲಿ ಬಸವ ಜಯಂತಿ ಆಚರಿಸಿದ ಹಿನ್ನೆಲೆಯಲ್ಲಿ ಮೇ 10ರಂದು ನಡೆಯುವ ಬಸವ ಜಯಂತ್ಯುತ್ಸವ ಅಂಗವಾಗಿ ವಿರಕ್ತ ಮಠದಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.

ನಗರದ ದೊಡ್ಡಪೇಟೆಯ ವಿರಕ್ತ ಮಠದಿಂದ ಬುಧವಾರ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ, ಲಿಂಗಾಯತ ತರುಣ ಸಂಘದ ಸಹಯೋಗದಲ್ಲಿ 112ನೇ ಬಸವ ಜಯಂತ್ಯುತ್ಸವ ಅಂಗವಾಗಿ ನಡೆಯುತ್ತಿರುವ 5ನೇ ದಿನದ ಬಸವ ಪ್ರಭಾತ್ ಪೇರಿ ಜನಜಾಗೃತಿ ಪಾದಯಾತ್ರೆಯ ನೇತೃತ್ವ ವಹಿಸಿ ಶ್ರೀಗಳು ಮಾತನಾಡಿದರು.

ಮೇ 10ರಂದು ಬಸವ ಜಯಂತಿಯಂದು ತಮ್ಮ ನೇತೃತ್ವದಲ್ಲಿ ಬೆಳಗ್ಗೆ 7.30ಕ್ಕೆ ವಿರಕ್ತ ಮಠದಿಂದ ಲಿಂಗಾಯತ ತರುಣ ಸಂಘದ ಸಹಯೋಗದೊಂದಿಗೆ ಬಸವಣ್ಣನವರ ಭಾವಚಿತ್ರ, ಬಸವಾದಿ ಶರಣರ ವಚನ ಗ್ರಂಥಗಳ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯು ವಿರಕ್ತ ಮಠದಿಂದ ಹೊರಟು ಬಕ್ಕೇಶ್ವರ ದೇವಸ್ಥಾನ, ಹಾಸಬಾವಿ ವೃತ್ತ, ಬಸವರಾಜ ಪೇಟೆ ಮೂಲಕ ದೊಡ್ಡಪೇಟೆಯ ವಿರಕ್ತ ಮಠಕ್ಕೆ ತಲುಪುವುದು ಎಂದರು.

ಅಂದು ಬೆಳಗ್ಗೆ 9.30ಕ್ಕೆ ಶ್ರೀ ಗುರು ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ನವಜಾತ ಶಿಶುಗಳಿಗೆ ಬಸವಾದಿ ಶರಣರ ಹೆಸರುಗಳ ನಾಮಕರಣ ಮಾಡಲಾಗುವುದು. ಬೆಳಗ್ಗೆ 10.30ಕ್ಕೆ ವಿರಕ್ತ ಮಠದಲ್ಲಿ 1913ರಲ್ಲಿ ಬಸವ ಜಯಂತಿ ಪ್ರಾರಂಭಿಸಿದ ಶ್ರೀ ಮೃತ್ಯುಂಜಯ ಅಪ್ಪಗಳ, ಹರ್ಡೇಕರ್ ಮಂಜಪ್ಪನವರ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಲಿಂಗಾಯತ ತರುಣ ಸಂಘದ ಸಂಚಾಲಕ ಕಣಕುಪ್ಪಿ ಮುರುಗೇಶಪ್ಪ, ಜಾನಪದ ಕಲಾವಿದ ಗಂಜಿಗಟ್ಟಿ ಕೃಷ್ಣಮೂರ್ತಿ ಇತರರು ಭಾಗವಹಿಸುವರು. ಬಸವ ಕಲಾಲೋಕದವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಲಿದೆ. ಭಕ್ತರು ಭಾಗವಹಿಸುವಂತೆ ಮನವಿ ಮಾಡಿದರು.

ಈ ಜನಜಾಗೃತಿ ಪಾದಯಾತ್ರೆಯಲ್ಲಿ ನಾಯಕನಹಟ್ಟಿಯ ತಿಪ್ಪೇರುದ್ರ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ಕಣಕುಪ್ಪಿ ಮುರುಗೇಶಪ್ಪ, ಜಾಲಿಮರದ ಕೊಟ್ರೇಶ, ಹಾಸಭಾವಿ ಕರಿಬಸಪ್ಪ, ಲಂಬಿ ಮುರುಗೇಶ, ಚನ್ನಬಸವ ಶೀಲವಂತ್, ವಿರಕ್ತಮಠ ಶಾಲೆಯ ರೋಷನ್, ಕುಮಾರ ಸ್ವಾಮಿ, ಶಿವಕುಮಾರ, ಶಿವಬಸಮ್ಮ, ಕುದುರಿ ಉಮೇಶ, ಎನ್.ಕೆ.ಕೊಟ್ರೇಶ್, ವೀಣಾ ಮಂಜುನಾಥ, ಅಡಿವೆಪ್ಪ, ಜಯಣ್ಣ ಇತರರು ಇದ್ದರು. ಬಸವ ಕಲಾಲೋಕದ ಶಶಿಧರ, ಅರುಣ ಇತರರು ಇದ್ದರು.

- - - -8ಕೆಡಿವಿಜಿ37ಃ:

ದಾವಣಗೆರೆಯ ವಿರಕ್ತಮಠದಿಂದ ಬಸವ ಜಯಂತಿ ಅಂಗವಾಗಿ ಶ್ರೀ ಬಸವಪ್ರಭು ಸ್ವಾಮೀಜಿ ಸಮ್ಮುಖದಲ್ಲಿ 5ನೇ ದಿನದ ಬಸವ ಪ್ರಭಾತ್ ಪೇರಿ ನಡೆಯಿತು.