ಸಾರಾಂಶ
ಶ್ರೀ ಗುರು ಗುದ್ಲೀಶ್ವರ ಸ್ವಾಮೀಜಿ 92ನೇ ಸ್ಮರಣಾರಾಧನೆ ಹಾಗೂ ಶಿವದೀಕ್ಷಾ ಸಂಸ್ಕಾರ ಕಾರ್ಯಕ್ರಮ ಮೇ 21 ರಂದು ನಗರದ ಪಿ.ಜಿ.ಎಂ ಕಲ್ಯಾಣ ಮಂಟಪದಲ್ಲಿ ಶ್ರೀ ಗುದ್ದಲೀಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಶ್ರೀ ವೀರಶೈವ ಭಕ್ತ ಮಂಡಳಿ ತಿಳಿಸಿದೆ.
ತಿಪಟೂರು: ಶ್ರೀ ಗುರು ಗುದ್ಲೀಶ್ವರ ಸ್ವಾಮೀಜಿ 92ನೇ ಸ್ಮರಣಾರಾಧನೆ ಹಾಗೂ ಶಿವದೀಕ್ಷಾ ಸಂಸ್ಕಾರ ಕಾರ್ಯಕ್ರಮ ಮೇ 21 ರಂದು ನಗರದ ಪಿ.ಜಿ.ಎಂ ಕಲ್ಯಾಣ ಮಂಟಪದಲ್ಲಿ ಶ್ರೀ ಗುದ್ದಲೀಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಶ್ರೀ ವೀರಶೈವ ಭಕ್ತ ಮಂಡಳಿ ತಿಳಿಸಿದೆ.
ಗುದ್ದಲೀಶ್ವರ ಸ್ವಾಮೀಜಿ ಇಷ್ಟಲಿಂಗ ಪೂಜೆ, ಶ್ರೀ ವೀರೇಶ್ವರ ನಂದಾಶ್ರಮದಲ್ಲಿರುವ ಗದ್ದುಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ನೆರವೇರಿಸಲಿದ್ದಾರೆ. ನಂತರ ಶಿವಾನುಭವ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಕೆ. ಷಡಕ್ಷರಿ, ಮಾಜಿ ಶಾಸಕರಾದ ಬಿ. ನಂಜಾಮರಿ, ಬಿ.ಸಿ. ನಾಗೇಶ್, ನಿವೃತ್ತ ಎಸಿಪಿ ಲೋಕೇಶ್ವರ, ವೀರಶೈವಾನಂದಾಶ್ರಮದ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ, ವೀರಶೈವನಂದಾಶ್ರಮದ ಕಾರ್ಯಕಾರಿ ಮಂಡಳಿ ಹಾಗೂ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ. ಪ್ರಾರ್ಥನೆಯನ್ನು ಗುದ್ದಲೀಶ್ವರ ಶಾಖಾ ಮಠ ಕುರುಬರಹಳ್ಳಿ ನೆರವೇರಿಸಲಿದ್ದು ವೇದಘೋಷವನ್ನು ಶ್ರೀ ವೀರಶೈವಾನಂದಾಶ್ರಮದ ವಿದ್ಯಾರ್ಥಿಗಳು ನೆರವೇರಿಸುವರು. ಪ್ರತಿ ವರ್ಷದಂತೆ ದೀಕ್ಷಾವಟುಗಳಿಗೆ ಶಿವ ದೀಕ್ಷೆಯನ್ನು ಹೆಣ್ಣು ಮಕ್ಕಳಿಗೆ ದೀಕ್ಷಾ ಸಂಸ್ಕಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.