ಸಾರಾಂಶ
ರಾಜ್ಯಾದ್ಯಂತ 27 ಕಲಾ ತಂಡದ 400 ಜನ ಕಲಾವಿದರು ಭಾಗಿ: ಜೆ.ನಾಗರಾಜ್
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕನಕದಾಸರ 537ನೇ ಜಯಂತ್ಯುತ್ಸವ ಮತ್ತು ಪತಂಜಲಿ ಸಂಸ್ಥೆಯ 27ನೇ ವಾರ್ಷಿಕೋತ್ಸವದ ಅಂಗವಾಗಿ ಡಿ.14ರಂದು ಬೆಳಗ್ಗೆ 9 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ರಾಜ್ಯಮಟ್ಟದ ಕನಕದಾಸರ ಕೀರ್ತನೋತ್ಸವ, ಗೀತಾಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪತಂಜಲಿ ಜೆ.ನಾಗರಾಜ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾಜ್ಯಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ತರಬೇತಿ ಕಾರ್ಯಾಗಾರ, ಹಾಲುಮತ ಸಂಸ್ಕೃತಿ, ಕನಕ ಕಲಾ ವೈಭವ, ಗೀತಗಾಯನ, ನೃತ್ಯರೂಪಕ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ರಾಜ್ಯಮಟ್ಟದ ಕನಕದಾಸರ ಗೀತ ಗಾಯನ ಸ್ಪರ್ಧೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯಿಂದ 27 ಕಲಾ ತಂಡದ 400 ಜನ ಕಲಾವಿದರು ಭಾಗವಹಿಸಲಿದ್ದಾರೆ. ಕನಕದಾಸರ ತತ್ವ ಆದರ್ಶ ಕೀರ್ತನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪತಂಜಲಿ ಸಂಸ್ಥೆ ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ವಹಿಸಲಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ರಾಜಕೀಯ ಗಣ್ಯರು, ಸಮಾಜದ ಮುಖಂಡರು, ಸಂಘ ಸಂಸ್ಥೆಯ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರೂಪದ ವನ್ಯಜೀವಿ ಪರಿಸರ ಛಾಯಾಚಿತ್ರ ಪ್ರದರ್ಶನ ನಡೆಯಲಿದ್ದು, ಶಿವಮೊಗ್ಗ ನಾಗರಾಜ್ , ಕೆ.ಪಿ.ಪೂರ್ಣಚಂದ್ರ ತೇಜಸ್ವಿ ವನ್ಯಜೀವಿ ಛಾಯಾಗ್ರಾಹಕರ ಬಳಗದ ನಟರಾಜ್, ವಿನಾಯಕ್ ಗುಜ್ಜರ್, ಸತೀಶ್ ಸಾಗರ, ವಸುಮ ಮಂಜುನಾಥ್ ಶಿವಮೊಗ್ಗ, ನಾಗರಾಜ್ ಡಿ.ಬಿ.ಹಳ್ಳಿ, ಭದ್ರಾವತಿ, ಪ್ರದೀಪ್ ಕುಣಿಬೈಲ್ ಇವರು ನಡೆಸಿಕೊಡಲಿದ್ದಾರೆ.ಡಾ.ಡಿ.ಗೋಪಾಲ್ ಮತ್ತು ತಂಡ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಕಲಾವಿದರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪತಂಜಲಿ ಸಂಸ್ಥೆಯ ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ, ಪ್ರಮುಖರಾದ ಡಾ.ಪಿ.ಬಾಲಪ್ಪ, ಎಂ.ಪೂವಯ್ಯ, ಪರಿಸರ ಸಿ.ರಮೇಶ್, ನಿರ್ದೇಶಕರಾದ ಸುಶೀಲ ಭವಾನಿಶಂಕರ್ರಾವ್, ಭವಾನಿಶಂಕರ್ರಾವ್, ನರಸಿಂಹಮೂರ್ತಿ, ಸರಳಾವಾಸನ್, ಶೋಭಾ ಅನಂದ್, ಸೌಭಾಗ್ಯ ಇನ್ನಿತರರು ಉಪಸ್ಥಿತರಿದ್ದರು.