ನಾಳೆ ಡಾ.ಪ್ರಭಾಕರ ಕೋರೆಗೆ ಅಭಿನಂದನಾ ಸಮಾರಂಭ

| Published : Jun 07 2024, 12:34 AM IST

ಸಾರಾಂಶ

ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಅವಿಶ್ರಾಂತ 40 ವರ್ಷಗಳ ಕೆಎಲ್‍ಇ ಸೇವಾ ಸ್ಮರಣೆ ನಿಮಿತ್ತ ಜೂ. 8 ರಂದು ಬೆಳಗ್ಗೆ 10.30 ಗಂಟೆಗೆ ಬೆಳಗಾವಿ ನೆಹರು ನಗರದ ಕನ್ನಡ ಭವನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಅವಿಶ್ರಾಂತ 40 ವರ್ಷಗಳ ಕೆಎಲ್‍ಇ ಸೇವಾ ಸ್ಮರಣೆ ನಿಮಿತ್ತ ಜೂ. 8 ರಂದು ಬೆಳಗ್ಗೆ 10.30 ಗಂಟೆಗೆ ಬೆಳಗಾವಿ ನೆಹರು ನಗರದ ಕನ್ನಡ ಭವನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಈ ಸಮಾರಂಭವನ್ನು ಕೆಎಲ್‍ಇ ಸಂಸ್ಥೆಯ ನಿವೃತ್ತ ಆಜೀವ ಸದಸ್ಯರು, ಪ್ರಾಚಾರ್ಯರು, ಪ್ರಾಧ್ಯಾಪಕರು, ಅಧ್ಯಾಪಕರು, ಇತರ ಸಿಬ್ಬಂದಿ, ಬೆಳಗಾವಿಯ ಸಂಘಸಂಸ್ಥೆಗಳು, ಕನ್ನಡ ಭವನ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ನಿರ್ದೇಶಕರು ಹಾಗೂ ಆಪ್ತಮಿತ್ರರು ಹಮ್ಮಿಕೊಂಡಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ವಿವಿ ಕುಲಪತಿ ಡಾ.ಸಿ.ಎಂ.ತ್ಯಾಗರಾಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಗಾವಿಯ ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಆಗಮಿಸಲಿದ್ದಾರೆ. ಯುಎಸ್‍ಎಂ-ಕೆಎಲ್‍ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ, ಬೆಳಗಾವಿ ಸ್ಪೋಟ್ರ್ಸ ಹಾಗೂ ಬೆಳಗಾಮ್ ಎಜ್ಯುಕೇಶನ್ ಸೊಸೈಟಿ ಚೇರಮನ್ ಅವಿನಾಶ ಪೋತದಾರ, ಖ್ಯಾತ ಸಾಹಿತಿಗಳಾದ ಡಾ.ವಿ.ಎಸ್.ಮಾಳಿ, ಡಾ.ಬಸವರಾಜ ಜಗಜಂಪಿ, ಡಾ.ಗುರುದೇವಿ ಹುಲೆಪ್ಪನವರಮಠ, ಕೆಎಲ್‍ಇ ನಿವೃತ್ತ ಜಂಟಿ ಕಾರ್ಯದರ್ಶಿ ಡಾ.ವಿ.ಬಿ.ಹಿರೇಮಠ, ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಅಧ್ಯಕ್ಷ ಎಸ್.ವೈ.ಕುಂದರಗಿ ಅಭಿನಂದನ ನುಡಿಗಳನ್ನಾಡಲಿದ್ದಾರೆ ಎಂದು ಸಂಘಟಕರಾದ ಡಾ.ಎಚ್.ಬಿ.ರಾಜಶೇಖರ, ಪ್ರೊ.ಬಿ.ಎಸ್.ಗವಿಮಠ, ಡಾ. ಎಫ್.ವಿ.ಮಾನ್ವಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.