ಸಾರಾಂಶ
ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಮಹಾಶಿವಯೋಗಿಗಳ 117ನೇ ಗುರುವಂದನಾ ಕಾರ್‍ಯಕ್ರಮವನ್ನು ಏ.1ರಂದು ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕಲಬುರಗಿ: ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಮಹಾಶಿವಯೋಗಿಗಳ 117ನೇ ಗುರುವಂದನಾ ಕಾರ್‍ಯಕ್ರಮವನ್ನು ಏ.1ರಂದು ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಂಗವಾಗಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಗತಿಪರ ಮಹಿಳೆ ಗುರುಬಾಯಿ ಆಳಂದ ಅವರಿಗೆ ಸಿದ್ಧಗಂಗಾಶ್ರೀ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ನೆಲ್ಲೂರ ಪ್ರೌಢ ಶಾಲೆಯ ಡಿ.ಎನ್. ಪಾಟೀಲ್ ಅವರಿಗೆ ಡಾ.ಶಿವಕುಮಾರ ಸ್ವಾಮಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹಾಗೂ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಅವರು, ನಗರದ ಜಗತ್ ವೃತ್ತದ ಬಳಿಯ ಪತ್ರಿಕಾ ಭವನದ ಸಾಂಸ್ಕೃತಿಕ ಭವನದಲ್ಲಿ ಬೆ.11 ಗಂಟೆಗೆ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಮಾದನಹಿಪ್ಪರಗಾ ಶಿವಲಿಂಗೇಶ್ವರ ಸಂಸ್ಥಾನದ ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಪತ್ರಕರ್ತ ಬಾಬುರಾವ ಯಡ್ರಾಮಿ ಪಾಲ್ಗೊಳ್ಳುತ್ತಿದ್ದಾರೆಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಿವಿಧ ಪುರಸ್ಕಾರಗಳಿಗೆ ಭಾಜನರಾದ ಮಹಿಪಾಲರೆಡ್ಡಿ ಮುನ್ನೂರ, ವೆಂಕಟೇಶ ಮೂರ್ತಿ, ಪತ್ರಿಕೆ ಛಾಯಾಗ್ರಾಹಕ ತಾಜೋದ್ದೀನ್ ಆಜಾದ್ ಹಾಗೂ ಟೀವಿ ಛಾಯಾಗ್ರಾಹಕ ವಿಜಯಕುಮಾರ ವಾರದ ಅವರುಗಳಿಗೆ ಗೌರವಿಸಲಾಗುತ್ತಿದೆ. ನಂದಗೋಕುಲ ಮಕ್ಕಳಿಗೆ 5117 ರುಪಾಯಿ ದೇಣಿಗೆ ನೀಡಿ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕಲ್ಯಾಣಪ್ಪ ಪಾಟೀಲ್ ಮಳಖೇಡ, ಶ್ರೀಶೈಲ ಘೂಳಿ, ದೇವೇಂದ್ರಪ್ಪ ಅವಂಟಿ, ಚನ್ನಬಸಯ್ಯ ಗುರುವಿನ, ರುದ್ರಮುನಿ ಪುರಾಣಿಕ ಹಾಗೂ ಅಶೋಕ್ ಹೋಳಕುಂದಾ ಇದ್ದರು.