ತೋಂಟದಾರ್ಯ ಜಾತ್ರೆ ಸಾಮಾಜಿಕ ಪರಿವರ್ತನೆಯ ಸಂಕೇತ: ತೋಂಟದ ಸಿದ್ಧರಾಮ ಶ್ರೀ

| Published : Feb 12 2024, 01:34 AM IST / Updated: Feb 12 2024, 03:28 PM IST

ತೋಂಟದಾರ್ಯ ಜಾತ್ರೆ ಸಾಮಾಜಿಕ ಪರಿವರ್ತನೆಯ ಸಂಕೇತ: ತೋಂಟದ ಸಿದ್ಧರಾಮ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದೂರದೃಷ್ಟಿಯ ಫಲವಾಗಿ ರೊಟ್ಟಿ ಜಾತ್ರೆ ನಡೆಯುತ್ತದೆ. ಸರ್ವ ಧರ್ಮಗಳ ಮಧ್ಯೆ ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರ ಭಾವ ಮೂಡಬೇಕೆಂಬ ಹಿನ್ನೆಲೆಯಲ್ಲಿ ಈ ಜಾತ್ರೆ ನಡೆಸಲಾಗುತ್ತಿದೆ. ಈ ಬಾರಿ ಭಕ್ತರ ಜಾತ್ಯತೀತ ಪರಿವರ್ತನೆಯ ಜಾತ್ರೆಯಾಗಿ ನಡೆಯಲಿದೆ.

ಡಂಬಳ: ಸಾಮಾಜಿಕ ಪರಿವರ್ತನೆಯ ಸಂಕೇತವಾಗಿ ತೋಂಟದಾರ್ಯ ಮಠದ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಡಾ. ತೋಂಟದಾರ್ಯ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಡಂಬಳ ಗ್ರಾಮದ ಜಗದ್ಗರು ತೋಂಟದಾರ್ಯ ಮಠದ 284ನೇ ಜಾತ್ರಾ ಮಹೋತ್ಸವ ಫೆ. 24ರಂದು ಮಹಾರಥೋತ್ಸವ ಮತ್ತು ಫೆ. 25ರಂದು ಲಘು ರಥೋತ್ಸವ ಜರುಗಲಿರುವ ಹಿನ್ನಲೆ ಶನಿವಾರ ಮುಂಜಾನೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಶರಣರು ಕಂಡ ಜಾತ್ಯತೀತ ತತ್ವದ ಕನಸು ಸಹಕಾರಗೊಳಿಸಲು ನಿರಂತರವಾಗಿ ತೋಂಟದಾರ್ಯ ಮಠವು ಶ್ರಮಿಸುತ್ತಿದೆ. 

ಉತ್ತಮ ಸಮಾಜ ನಿರ್ಮಾಣ ಮಾಡಲು ಭಕ್ತರ ಸಹಕಾರದಿಂದ ಜಾತ್ರೆಯನ್ನು ಸಾಮಾಜಿಕ ಪರಿವರ್ತನೆಯ ಸಂಕೇತವಾಗಿ ಆಚರಿಸುತ್ತಾ ಬರಲಾಗುತ್ತಿದೆ ಎಂದು ಹೇಳಿದರು.

ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದೂರದೃಷ್ಟಿಯ ಫಲವಾಗಿ ರೊಟ್ಟಿ ಜಾತ್ರೆ ನಡೆಯುತ್ತದೆ. ಸರ್ವ ಧರ್ಮಗಳ ಮಧ್ಯೆ ಪರಸ್ಪರ ಪ್ರೀತಿ, ವಿಶ್ವಾಸ, ಸಹೋದರ ಭಾವ ಮೂಡಬೇಕೆಂಬ ಹಿನ್ನೆಲೆಯಲ್ಲಿ ಈ ಜಾತ್ರೆ ನಡೆಸಲಾಗುತ್ತಿದೆ. 

ಈ ಬಾರಿ ಭಕ್ತರ ಜಾತ್ಯತೀತ ಪರಿವರ್ತನೆಯ ಜಾತ್ರೆಯಾಗಿ ನಡೆಯಲಿದೆ ಎಂದು ಹೇಳಿದರು.ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ, ಜಾತ್ರಾ ಕಮಿಟಿ ಅಧ್ಯಕ್ಷ ಬಸವರಾಜ ಹಮ್ಮಿಗಿ, ಉಪಾಧ್ಯಕ್ಷ ಭೀಮಪ್ಪ ಗದಗಿನ, ಕಾರ್ಯದರ್ಶಿ ಎ.ಪಿ. ಮಾನೆ, ಖಜಾಂಚಿ ಮಲ್ಲಪ್ಪ ರೇವಡಿ, ವಿ.ಎಸ್.

 ಯರಾಶಿ, ಮರಿತೆಮ್ಮಪ್ಪ ಆದಮ್ಮನವರ, ಶಂಕ್ರಪ್ಪ ಗಡಗಿ, ಸಿದ್ದಪ್ಪ ನಂಜಪ್ಪನವರ, ಬಸವರಡ್ಡಿ ಬಂಡಿಹಾಳ, ವಿರೂಪಾಕ್ಷಪ್ಪ ಲಕ್ಕುಂಡಿ, ಗೌಸುಸಾಬ್ ಡಾಲಾಯತ್, ರಮೇಶ ಕೊರ್ಲಹಳ್ಳಿ, ಮುತ್ತಣ್ಣ ಕೊಂತಿಕಲ್ಲ

ರುದ್ರಪ್ಪ ಕೊರ್ಲಗಟ್ಟಿ, ಗವಿಸಿದ್ದಪ್ಪ ಬಿಸನಳ್ಳಿ, ಮಲ್ಲಪ್ಪ ಮಠದ, ಅಶೋಕ ಹಡಪದ, ದುರಗಪ್ಪ ಹರಿಜನ, ನಿಂಗರಡ್ಡಿ ಕೆಂಚರಡ್ಡಿ, ಸಿದ್ದು ಮೇಟಿ, ಕುಬೇರಪ್ಪ ಕೊಳ್ಳಾರ, ಈಶಣ್ಣ ಶೆಟ್ಟರ್, ಶರಣು ಬಂಡಿಹಾಳ, ಬುಡ್ನೆಸಾಬ ಅತ್ತಾರ, ಮಹಮ್ಮದ್ ಗಚ್ಚಿಮನಿ ತೋಂಟದಾರ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಡಂಬಳ ಗ್ರಾಮಸ್ಥರು, ಭಕ್ತರು ಇದ್ದರು.