ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ: ಕಳಸಾರೋಹಣ

| Published : Apr 12 2025, 12:47 AM IST

ಸಾರಾಂಶ

ಗದಗ ನಗರದ ಇತಿಹಾಸ ಪ್ರಸಿದ್ಧ ಜ. ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳ ಸಾನಿಧ್ಯದಲ್ಲಿ ಕಳಸಾರೋಹಣ ಜರುಗಿತು.

ಗದಗ: ನಗರದ ಇತಿಹಾಸ ಪ್ರಸಿದ್ಧ ಜ. ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳ ಸಾನಿಧ್ಯದಲ್ಲಿ ಕಳಸಾರೋಹಣ ಜರುಗಿತು. ಶೇಗುಣಸಿಯ ಮಹಾಂತಪ್ರಭು ಸ್ವಾಮಿಗಳು, ವೆಂಕಟಾಪುರ ಶರಣರು, ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ, ಉಪಾಧ್ಯಕ್ಷ ಕರವೀರಯ್ಯ ಕೋರಿಮಠ, ಪ್ರೊ.ಡಿ.ಜಿ. ಜೋಗಣ್ಣವರ, ಶೈಲಾ ಕೋಡೆಕಲ್ಲ, ಶಿವಪ್ಪ ಕತ್ತಿ, ದಶರಥರಾಜ ಕೊಳ್ಳಿ, ಸಿದ್ಧರಾಮಪ್ಪ ಗೊಜನೂರ, ನಾಗಪ್ಪ ಸವಡಿ, ವೀರಣ್ಣ ಗೊಡಚಿ, ರಾಜಶೇಖರ ಲಕ್ಕುಂಡಿ, ಎಂ.ಎಸ್. ಅಂಗಡಿ, ಅಮರೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಇದ್ದರು.

ಪ್ರಾರಂಭೋತ್ಸವ: ಗದಗನಗರದ ತೋಂಟದಾರ್ಯ ಮಠದಲ್ಲಿ 2025ನೇ ಸಾಲಿನ ಜಾತ್ರಾ ಮಹೋತ್ಸವದ ಪ್ರಾರಂಭೋತ್ಸವ ಹಾಗೂ ಗ್ರಂಥ ಬಿಡುಗಡೆ ಸಮಾರಂಭ ಏ.12ರಂದು ಸಂಜೆ 6.30ಕ್ಕೆ ಜರುಗಲಿದೆ.

ಕಾರ್ಯಕ್ರಮದ ಸಾನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು, ಗುಳೇದಗುಡ್ಡದ ಗುರುಸಿದ್ಧೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಸ್ವಾಮಿಗಳು ಹಾಗೂ ಸಂತೇಕಲ್ಲೂರ ಘನಮಠೇಶ್ವರ ಮಠದ ಗುರುಬಸವ ಸ್ವಾಮಿಗಳು ವಹಿಸುವರು. ಸಮ್ಮುಖವನ್ನು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ಸ್ವಾಮಿಗಳು, ಭೈರನಟ್ಟಿ, ಶಿರೋಳ ತೋಂಟದಾರ್ಯ ಶಾಖಾಮಠದ ಶಾಂತಲಿಂಗ ಸ್ವಾಮಿಗಳು ವಹಿಸುವರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕಾರ್ಯಕ್ರಮ ಉದ್ಘಾಟಿಸುವರು.ಆದಿಚುಂಚನಗಿರಿ ಶಾಖಾಮಠ ಹೇಮಗಿರಿ-ಧಾರವಾಡದ ಕಾರ್ಯದರ್ಶಿ ಡಾ.ಜೆ.ಎನ್. ರಾಮಕೃಷ್ಣೇಗೌಡ ಅವರನ್ನು ಅಮೃತ ಮಹೋತ್ಸವದ ನಿಮಿತ್ತ ಸನ್ಮಾನಿಸಲಾಗುವುದು. ಖ್ಯಾತ ಟಿವಿ ಸಂದರ್ಶಕ ಡಾ. ನಾ. ಸೋಮೇಶ್ವರ ಅವರಿಂದ ಉಪನ್ಯಾಸ ಜರುಗುವುದು.ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟವಾದ ಗ್ರಂಥಗಳ ಬಿಡುಗಡೆ ಜರುವುದು. ಡಾ. ಎನ್.ಜಿ. ಮಹಾದೇವಪ್ಪ ರಚಿಸಿದ ದಾರ್ಶನಿಕ ಬಸವಣ್ಣ, ಡಾ. ಶ್ರೀಧರ ಗಂಗನಗೌಡ ಗೌಡರ ರಚಿಸಿದ ತೋಂಟದಾರ್ಯ ಮಠದ ಸಮಾಜಮುಖಿ ಚಳುವಳಿಗಳು, ವಿಶ್ಲೇಷಣಾತ್ಮಕ ಅಧ್ಯಯನ, ಡಾ. ರಾಜಶೇಖರ ಜಮದಂಡಿ ರಚಿಸಿದ ಷಟಸ್ಥಲ ಚಕ್ರವರ್ತಿ ಚನ್ನಬಸವಣ್ಣ ಗ್ರಂಥಗಳು ಲೋಕಾರ್ಪಣೆಗೊಳ್ಳುವವು. ವಿಪ ಸದಸ್ಯ ಎಸ್.ವಿ. ಸಂಕನೂರ ಗ್ರಂಥಬಿಡುಗಡೆ ನೆರವೇರಿಸುವರು.ಖ್ಯಾತ ಸಂಗೀತಗಾರ ಉಸ್ತಾದ ರೈಸ್ ಬಾಲೇಖಾನ್ ಅವರಿಂದ ಸಿತಾರ ವಾದನ ಜರುಗುವುದು. ಹಿಂದೂಸ್ಥಾನಿ ಗಾಯಕಿ ಡಾ. ವೀಣಾ ಬಡಿಗೇರ ವಚನ ಸಂಗೀತ ನಡೆಸುವರು ಎಂದು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.