ಆಳಂದ ಸರ್ಕಾರಿ ಆಸ್ಪತ್ರೆಗೆ ಟಾಪ್‌ 10 ಸ್ಥಾನಮಾನ

| Published : May 19 2024, 01:54 AM IST

ಸಾರಾಂಶ

ಆಳಂದ ಪಟ್ಟಣದ ಮಂಟಕಿ ರಸ್ತೆಯಲ್ಲಿರುವ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತನ್ನ ಒಪಿಡಿ ಅತ್ಯುತ್ತಮ ಕಾರ್ಯನಿವಾರ್ಹಣೆಯಲ್ಲಿ ರಾಜ್ಯ ಮಟ್ಟದ ಆಸ್ಪತ್ರೆಗಳಲ್ಲಿ ಟಾಪ್ 10 ಸ್ಥಾನಕ್ಕೆ ಭಾಜನವಾಗಿದೆ.

ಕನ್ನಡಪ್ರಭ ವಾರ್ತೆ ಆಳಂದ

ಪಟ್ಟಣದ ಮಂಟಕಿ ರಸ್ತೆಯಲ್ಲಿರುವ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತನ್ನ ಒಪಿಡಿ ಅತ್ಯುತ್ತಮ ಕಾರ್ಯನಿವಾರ್ಹಣೆಯಲ್ಲಿ ರಾಜ್ಯ ಮಟ್ಟದ ಆಸ್ಪತ್ರೆಗಳಲ್ಲಿ ಟಾಪ್ 10 ಸ್ಥಾನಕ್ಕೆ ಭಾಜನವಾಗಿದೆ.

ಕಳೆದ ಫೆ.7ರಿಂದ ಏ.6ರ ವರೆಗೆ ಇತ್ತೀಚೆಗೆ ನಡೆಸಿದ ಡಿಜಿಟಲ್ ಹೆಲ್ತ್ ಮ್ಯಾರಥಾನ್‍ನಲ್ಲಿ 5414 ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡುವ ಮೂಲಕ ಸಾರ್ವಜನಿಕ ಆಸ್ಪತ್ರೆ ಅಲ್ಯಾಂಡ್ ಅನ್ನು ಟಾಪ್ 10ರ ಸ್ಥಾನ ತಂದುಕೊಂಡಿದ್ದಕ್ಕೆ ರಾಜ್ಯದ ಆಯುಮಾನ ಭಾರತ ಮಿಷನ್ ನಿರ್ದೇಶಕರು ಶ್ಲಾಘಿಸಿದ್ದಾರೆ.

ಆಸ್ಪತ್ರೆ ಈ ಯೋಜನೆ ಅಡಿಯಲ್ಲಿ ಆಯುಷ್ಯಮಾನ ಭಾರತ ಡಿಜಿಟಲ್ ಮಿಷನ್ (ಎಬಿಡಿಎಂ) ರಾಜ್ಯದ 230 ಆಸ್ಪತ್ರೆಗಳಲ್ಲಿ ಟಾಪ್ 10ರಲ್ಲಿ ಆಳಂದ ಸಾರ್ವಜನಿಕ ಆಸ್ಪತ್ರೆಯೂ ಒಂದಾಗಿದೆ. ರೋಗಿಗಳ ಮೊಬೈಲ್ ಸಂಖ್ಯೆಗೆ ಆಧಾರ ಕಾರ್ಡ್ ಮತ್ತು ರೇಷ್‍ನ ಕಾಡ್ ಲಿಂಕ್ ಇದ್ದರೆ ಒಪಿಡಿ ಕಾರ್ಡ್ (ಹೊರರೋಗಿ ಚೀಟಿ) ಜರ್ನೆಟ್ ಮಾಡಿಕೊಡುವಲ್ಲಿ ಮುಂಚಣಿ ಸಾಧಿಸಿದೆ.

ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಒಪಿಡಿಗಾಗಿ ಸರಣಿ ಸರತಿ ಸಾಲಿಗೆ ನಿಲ್ಲದೆ ಹೊರರೋಗಿಗಳ ಚಿಕಿತ್ಸೆ ಕೈಗೊಳ್ಳುವ ವ್ಯವಸ್ಥೆಗೆ ಸರ್ಕಾರದ ಈ ಆಸ್ಪತೆಯ ವ್ಯವಸ್ಥೆಗೆ ಇನ್ನೂ ಹೆಚ್ಚಿನ ಪ್ರಗತಿಗೆ ಹತ್ತಿರದಲ್ಲಾಗಲಿ ಅಥವಾ ನೆರೆ ಹೊರೆಯಲ್ಲಿ ನೆಟವರ್ಕ್ ಟಾವರ ಅಳವಡಿಸಿದರೆ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ರಾಜ್ಯದ ಟಾಪ್10 ಆಸ್ಪತ್ರೆಗಳ ಸಾಲಿಗೆ ಆಳಂದ ಸಾರ್ವಜನಿಕ ಆಸ್ಪತ್ರೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಈ ಸಾಧನೆಗೆ ಆಸ್ಪತ್ರೆಯ ಸಿಬ್ಬಂದಿಗಳ ಮತ್ತು ಮೇಲಾಧಿಕಾರಿಗಳ ಸಹಕರವೇ ಕಾರಣವಾಗಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ ಅವರು ತಿಳಿಸಿದ್ದಾರೆ.

ಅಭಾ ಕಾರ್ಡ್ ನೋಂದಣಿ ಅವಕಾಶ: ಭಾರತ ಸರ್ಕಾರವು ಸಾರ್ವಜನಿಕ ಆರೋಗ್ಯದ ಮಾಹಿತಿ ಯನ್ನು ಡಿಜಿಟಲೀಕರಣಗೊಳಿಸಿ ಪ್ರತಿ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ಒಂದೇ ಸೂರಿನಡಿ ದೊರಕಿಸಿ ಆರೋಗ್ಯದ ಸೌಲಭ್ಯಗಳು ಸುಲಭವಾಗಿ ದೊರಕುವಂತೆ ಮಾಡುವ ಮಹತ್ವದ ಆಯುಷ್ಮಾನ್‌ ಭಾರತ ಹೆಲ್ತ್‌ ಅಕೌಂಟ್‌ ಕಾರ್ಡ್ ಯೋಜನೆಯನ್ನು ಆರಂಭಿಸಿರುತ್ತದೆ.ಈ ಕಾರ್ಡ್ ಹೊಂದಿದ ವ್ಯಕ್ತಿಗಳು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೂ. 5.00 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಹಾಗೂ ಚಿಕಿತ್ಸೆಯ ಮಾಹಿತಿಯನ್ನು ದೇಶದ ಯಾವುದೇ ಭಾಗದಲ್ಲಿ ಆನ್‍ಲೈನ್ ಮೂಲಕ ಪಡೆಯಬಹುದಾಗಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

- ಡಾ. ಮಹಾಂತಪ್ಪ ಹಾಳಮಳಿ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಆಳಂದ.