ಷೇರು ಕಟ್ಟಿಸಿಕೊಂಡು ಷೇರುದಾರ ಆಶಯಕ್ಕೆ ತಕ್ಕಂತೆ ನಿವೇಶನ ಒದಗಿಸಿ ಹಿಂದುಳಿದ ವರ್ಗದವರು ಹಾಗೂ ಮಧ್ಯಮವರ್ಗದವರು ಮನೆ ನಿರ್ಮಾಣ ಮಾಡಿಕೊಳ್ಳಲು ಸಹಕಾರ

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ ಸಹಕಾರ ಸಂಘಗಳು ಉಳಿದು ಬೆಳೆದರೆ ಸಮಾಜಕ್ಕೆ ಒಳಿತಾಗಿ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.ಪಟ್ಟಣದ ತೋಪಮ್ಮ ದೇವಾಲಯದ ಸಂತ ಜೋಸೆಫರ ಶಾಲೆ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಕಾವೇರಿ ಗೃಹನಿರ್ಮಾಣ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಷೇರು ಕಟ್ಟಿಸಿಕೊಂಡು ಷೇರುದಾರ ಆಶಯಕ್ಕೆ ತಕ್ಕಂತೆ ನಿವೇಶನ ಒದಗಿಸಿ ಹಿಂದುಳಿದ ವರ್ಗದವರು ಹಾಗೂ ಮಧ್ಯಮವರ್ಗದವರು ಮನೆ ನಿರ್ಮಾಣ ಮಾಡಿಕೊಳ್ಳಲು ಸಹಕಾರ ನೀಡುವ ಮೂಲಕ ಸಂಘವನ್ನು ಬೆಳೆಸಿ ತಾವೂ ಬೆಳೆದು ಜನತೆಯ ನೆರವಿಗೆ ಮುಂದಾಗುವಂತೆ ಸಲಹೆ ನೀಡಿದರು.ಚಾಮರಾಜನಗರ ಕೆನರಾಬ್ಯಾಂಕ್ ವ್ಯವಸ್ಥಾಪಕ ಗಂಗಾಧರಯ್ಯ, ಸಂಘದ ಅಧ್ಯಕ್ಷ ಕೆ.ವಿ.ನಂಜುಂಡ ಮಾತನಾಡಿದರು.ಸಂಘದ ಉಪಾಧ್ಯಕ್ಷೆ ಎಚ್.ಎಸ್. ಇಂದಿರಾ, ನಿರ್ದೆಶಕ ಅಶ್ವಥ್, ಕೆ.ಆರ್. ಕುಮಾರ್, ರಿಯಾಜ್‌ಪಾಷ, ಸದಾಶಿವಮೂರ್ತಿ, ಕೆ.ಯೋಗೇಶ್, ಎಸ್. ಕುಸುಮಾ, ಎ.ಎಂ. ರಮೇಶ್, ಎಸ್. ಚಲುವರಾಜ್, ಮಹಮದ್‌ ಜಬಿ, ರಂಗಸ್ವಾಮಿ ಸಂಘದ ಸಿಇಒ ಆಶಾರಾಣಿ ಮತ್ತಿತರರು ಷೇರುದಾರ ಸದಸ್ಯರು ಪಾಲ್ಗೊಂಡಿದ್ದರು.