ಸಾರಾಂಶ
ಬಿಜೆಪಿ-ಜೆಡಿಎಸ್‌ನವರು ನಡೆಸುತ್ತಿರುವುದು ಪಾದಯಾತ್ರೆಯಲ್ಲ, ಅದು ಅವರ ಪಾಪ ವಿಮೋಚನಾ ಯಾತ್ರೆ.
ಕನ್ನಡಪ್ರಭ ವಾರ್ತೆ ಮಂಡ್ಯಬಿಜೆಪಿ-ಜೆಡಿಎಸ್‌ನವರು ನಡೆಸುತ್ತಿರುವುದು ಪಾದಯಾತ್ರೆಯಲ್ಲ, ಅದು ಅವರ ಪಾಪ ವಿಮೋಚನಾ ಯಾತ್ರೆ. ಭ್ರಷ್ಟಾಚಾರದ ಪಾಪಗಳಿಂದ ವಿಮೋಚನೆಗೊಳ್ಳಲು ಅವರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಮಂಗಳವಾರ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿ, ವಿಪಕ್ಷಗಳು ನಡೆಸುತ್ತಿರುವ ಪಾದಯಾತ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ವಿರುದ್ಧ ಅಲ್ಲ. ಬದಲಾಗಿ ಸರ್ಕಾರದ ವಿರುದ್ಧ. ಗ್ಯಾರಂಟಿ ಯೋಜನೆ ನಿಲ್ಲಿಸಿ ಸರ್ಕಾರ ಉರುಳಿಸುವುದು ಅವರ ಉದ್ದೇಶ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಉರುಳಿಸುವುದು ಅವರ ಹಣೆಯಲ್ಲೇ ಬರೆದಿಲ್ಲ ಎಂದರು.